ಲೆನ್ಸ್ ಧರಿಸಿ ಎಡವಟ್ಟು; ಕಣ್ಣಿನ ಕಾರ್ನಿಯಾಗೆ ಹಾನಿ, 'ಕರೋಡ್‌ಪತಿ' ಚಿತ್ರನಟಿ ಅಳಲು
ಕಣ್ಣಿನ ಸಮಸ್ಯೆ ಇರುವವರು ಕನ್ನಡ ಧರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವರು ಕನ್ನಡ ಚೆನ್ನಾಗಿರಲ್ಲ ಎಂದು ಲೆನ್ಸ್ ಧರಿಸಲು ಆರಂಭಿಸಿದ್ದಾರೆ. ಲೆನ್ಸ್ ಧರಿಸಿದರೆ ಕನ್ನಡಕ ಧರಿಸುವ ಅವಶ್ಯಕತೆ ಇರಲ್ಲ. ಗ್ಲಾಮರ್ ಲೋಕದಲ್ಲಿ ಸಾಕಷ್ಟು ಜನ ಇದನ್ನು ಅನುಸರಿಸುತ್ತಿದ್ದಾರೆ.
ಲೆನ್ಸ್ ನಟಿಸಿ ಬಹುಭಾಷಾ ನಟಿ ಕಣ್ಣಿಗೆ ಸಮಸ್ಯೆ ತಂದುಕೊಂಡಿದ್ದಾರೆ. ಸಮಸ್ಯೆ ಆಕೆ ದೃಷ್ಟಿ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿದೆ. ಈ ಬಗ್ಗೆ ಆಕೆ ವಿವರವಾಗಿ ಹಂಚಿಕೊಂಡಿದ್ದಾರೆ. ರಾಜಸ್ಥಾನ್ ಮೂಲಕ ನಟಿ ಜಾಸ್ಮಿನ್ ಭಾಸಿನ್ ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಆಕೆ ತನ್ನ ಕಣ್ಣಿಗೆ ಲೆನ್ಸ್ ಧರಿಸಿ ಎದುರಾಗಿರುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಲೆನ್ಸ್ ಸರಿಯಾಗಿ ಧರಿಸದ ಕಾರಣ ನನ್ನ ಕಣ್ಣು ಕಾಣಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

"ನಾನು ಜುಲೈ 17 ರಂದು ಕಾರ್ಯಕ್ರಮಕ್ಕಾಗಿ ದೆಹಲಿಯಲ್ಲಿದ್ದೆ, ಅದಕ್ಕಾಗಿ ಸಿದ್ಧಳಾಗುತ್ತಿದ್ದೆ. ನನ್ನ ಲೆನ್ಸ್‌ನಲ್ಲಿ ಏನು ಸಮಸ್ಯೆ ಆಗಿತ್ತೋ ಗೊತ್ತಿಲ್ಲ. ಅದನ್ನು ಧರಿಸಿದ ನಂತರ ನನ್ನ ಕಣ್ಣುಗಳಿಗೆ ನೋವಾಗಲು ಪ್ರಾರಂಭವಾಯಿತು. ನೋವು ಕ್ರಮೇಣ ಹೆಚ್ಚಾಯಿತು. ನಾನು ವೈದ್ಯರ ಬಳಿಗೆ ಧಾವಿಸಲು ಬಯಸಿದ್ದೆ, ಆದರೆ ಕೆಲಸ ಮುಖ್ಯ ಅಂತ ನಾನು ಈವೆಂಟ್‌ಗೆ ಹಾಜರಾಗಲು ನಿರ್ಧರಿಸಿದೆ. ನಾನು ಈವೆಂಟ್‌ನಲ್ಲಿ ಸನ್‌ಗ್ಲಾಸ್ ಧರಿಸಿದ್ದೆ. ಚಿತ್ರತಂಡ ನನಗೆ ಕೊಂಚ ಸಹಾಯ ಮಾಡಿತು. ಕೆಲ ಹೊತ್ತಿನ ನಂತರ ನನಗೆ ಏನು ನೋಡಲು ಸಾಧ್ಯವಾಗಲಿಲ್ಲ.
""ನಂತರ ನಾವು ಕಣ್ಣಿನ ವೈದ್ಯರ ಬಳಿಗೆ ಹೋದೆವು, ಅವರು ಕಣ್ಣಿನ ನನ್ನ ಕಾರ್ನಿಯಾಗಳು ಹಾನಿಗೊಳಗಾಗಿವೆ ಎಂದು ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿದರು. ಮರುದಿನ, ನಾನು ಮುಂಬೈಗೆ ಧಾವಿಸಿ ಇಲ್ಲಿ ನನ್ನ ಚಿಕಿತ್ಸೆಯನ್ನು ಮುಂದುವರೆಸಿದೆ. ನಾನು ತುಂಬಾ ನೋವು ಅನುಭವಿಸುತ್ತಿದ್ದೇನೆ. ನಾನು ಮುಂದಿನ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದರು.

ಅಲ್ಲಿಯವರೆಗೆ, ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಏಕೆಂದರೆ ನಾನು ನೋಡುವುದಿಲ್ಲ, ನಾನು ಮಲಗಲು ಸಹ ಕಷ್ಟಪಡುತ್ತಿದ್ದೇನೆ. ನಾನು ಸದ್ಯಕ್ಕೆ ನನ್ನ ಯಾವುದೇ ಕೆಲಸವನ್ನು ಮುಂದೂಡಬೇಕಾಗಿಲ್ಲ. ಕೆಲವು ದಿನಗಳಲ್ಲಿ ಚೇತರಿಸಿಕೊಳ್ಳುತ್ತೇನೆ ಮತ್ತು ಕೆಲಸಕ್ಕೆ ಮರಳುತ್ತೇನೆ" ಎಂದು ನಟಿ ಜಾಸ್ಮಿನ್ ಭಾಸಿನ್ ಹೇಳಿದ್ದಾರೆ.
ತಮಿಳಿನ 'ವಾನಂ' ಸಿನಿಮಾ ಮೂಲಕ ಜಾಸ್ಮಿನ್ ಬಣ್ಣದಲೋಕ್ಕೆ ಬಂದರು. ಬಳಿಕ ಕನ್ನಡ 'ಕರೋಡ್‌ಪತಿ' ಚಿತ್ರದಲ್ಲಿ ಕೋಮಲ್ ಜೋಡಿಯಾಗಿ ನಟಿಸಿದ್ದರು. 'ವೇಟ', 'ಲೇಡಿಸ್ & ಜಂಟಲ್‌ಮನ್', 'ಹನಿಮೂನ್' ಸೇರಿದಂತೆ ತೆಲುಗು, ತಮಿಳು, ಪಂಜಾಬಿ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications











