Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಈಗ ಬಹಿರಂಗ ಪಡಿಸಿದ ನಟಿ ಜೂಹಿ ಚಾವ್ಲಾ
ಸಿನಿಮಾ ನಟಿಯರಿಗೆ ತಮ್ಮ ಕೆರಿಯರ್ ಬಗ್ಗೆ ಸಾಕಷ್ಟು ಭಯವಿರುತ್ತೆ. ಅದರಲ್ಲೂ ಚಿತ್ರರಂಗದಲ್ಲಿ ನಟಿಮಣಿಯರಿಗೆ ಮದುವೆ ಆಗಿದೆ ಅಂತ ಗೊತ್ತಾದರೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತೆ ಎನ್ನುವ ಮಾತಿದೆ. ಇದೆ ಭಯದಿಂದ ಅನೇಕ ನಟಿಯರು ಮದುವೆ ವಿಚಾರವನ್ನು ಬಚ್ಚಿಟ್ಟಿರುತ್ತಾರೆ.
ಈ ವಿಚಾರದಲ್ಲಿ ಖ್ಯಾತ ನಟಿ ಜೂಹಿ ಚಾವ್ಲಾ ಕೂಡ ಹೊರತಾಗಿಲ್ಲ. ಕನ್ನಡ, ತಮಿಳು, ತೆಲುಗು ಚಿತ್ರರಂಗ ಮತ್ತು ಬಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವ ಖ್ಯಾತ ನಟಿ ಜೂಹಿ. ಕರಿಯರ್ ಭಯದಿಂದ ತನ್ನ ಮದುವೆ ವಿಚಾರವನ್ನು ಬಚ್ಚಿಟ್ಟಿದ್ದರಂತೆ. ಒಂದು ವೇಳೆ ಮದುವೆ ಆದ ವಿಚಾರ ಗೊತ್ತಾದರೆ ಎಲ್ಲಿ ಅವಕಾಶಗಳು ಕಮ್ಮಿ ಆಗುತ್ತೊ ಎಂದು ಹೆದರಿ ಮದುವೆ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎನ್ನುವ ಸತ್ಯವನ್ನು ಈಗ ಬಹಿರಂಗ ಪಡಿಸಿದ್ದಾರೆ.
ಕರಿಷ್ಮಾ
ಕಪೂರ್
'ಸ್ಟಾರ್'
ಆಗಿದ್ದು
ನನ್ನಿಂದಾಗಿ
ಎಂದ
ಜೂಹಿ
ಚಾವ್ಲಾ

1995ರಲ್ಲಿ ಹಸೆಮಣೆ ಏರಿದ ನಟಿ ಜೂಹಿ
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಜೂಹಿ ಮಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 1995ರಲ್ಲಿ ನಡೆದ ಮದುವೆ ರಹಸ್ಯವನ್ನು ಜೂಹಿ 24 ವರ್ಷದ ನಂತರ ಬಹಿರಂಗ ಪಡಿಸಿದ್ದಾರೆ. ಮದುವೆ ಆಗುವಾಗ ನಟಿ ಜೂಹಿ ಚಾವ್ಲಾ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದರು. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಬಹು ಬೇಡಿಕೆ ಇರುವಾಗಲೆ ಜೂಹಿ ಯಾರಿಗೂ ಗೊತ್ತಾಗದ ಹಾಗೆ ಮದುವೆ ಆಗುತ್ತಾರೆ.
ನಟಿ
ಜೂಹಿ
ಚಾವ್ಲಾ
ಮಗನ
ಮಾನವೀಯತೆ
ಗುಣಕ್ಕೆ
ಭೇಷ್
ಎನ್ನಲೇಬೇಕು

ಮದುವೆಯಲ್ಲಿ ಕೆಲವೆ ಮಂದಿ ಭಾಗಿ
1995ರಲ್ಲಿ ನಟಿ ಜೂಹಿ ಚಾವ್ಲಾ ಉದ್ಯಮಿ ಜೈ ಮೆಹ್ತಾ ಅವರ ಜೊತೆ ಹಸೆಮಣೆ ಏರುತ್ತಾರೆ. ಇಬ್ಬರ ಮದುವೆ ವಿಚಾರವನ್ನು ಯಾರಿಗೂ ತಿಳಿಸುವುದಿಲ್ಲ. ತೀರ ಆಪ್ತರು ಮತ್ತು ಕುಟಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತಂತೆ. "ವೃತ್ತಿ ಜೀವನದ ಬಗ್ಗೆ ತುಂಬಾ ಭಯವಿತ್ತು. ಹಾಗಾಗಿ ಮದುವೆ ಆದ ಬಗ್ಗೆ ಯಾರಿಗೂ ಬಹಿರಂಗ ಪಡಿಸಿಲ್ಲ. ಆ ಕಾಲದಲ್ಲಿ ಇಂಟರ್ ನೆಟ್, ಕ್ಯಾಮರಾ ಇರುವ ಫೋನ್ ಗಳು ಇರಲಿಲ್ಲ ಹಾಗಾಗಿ ಎಲ್ಲಿಯೂ ಲೀಕ್ ಆಗಿಲ್ಲ" ಎಂದು ಜೂಹಿ ಹೇಳಿದ್ದಾರೆ.

ಸಿನಿಮಾರಂಗಕ್ಕೆ ಬರುವ ಮೊದಲೆ ಜೈ ಮೆಹ್ತಾ ಪರಿಚಯವಾಗಿತ್ತು
ನಟಿ ಜೂಹಿ ಚಾವ್ಲಾ ಚಿತ್ರರಂಗಕ್ಕೆ ಬರುವ ಮೊದಲೆ ಜೈ ಮೆಹ್ತಾ ಅವರ ಪರಿಚಯವಿತ್ತಂತೆ. ಆದರೆ ಆ ನಂತರ ವರ್ಷಗಳ ಬಳಿಕ ಮತ್ತೆ ಡಿನ್ನರ್ ಪಾರ್ಟಿಯಲ್ಲಿ ಭೇಟಿಯಾಗಿದ್ದರಂತೆ. ಆಗ ಜೂಹಿ ಹಿಂದೆಯೆ ಸುತ್ತುತ್ತಿದ್ದರಂತೆ. ಆಗಾಗ ಗುಲಾಬಿ ಹೂಗಳನ್ನು ಗಿಫ್ಟ್ ಕೊಡುತ್ತಿದ್ದರಂತೆ. ಅಲ್ಲದೆ ಬರ್ತಡೇಗೆ ಒಂದು ಟ್ರಕ್ ಗುಲಾಬಿಯನ್ನು ಗಿಫ್ಟಾಗಿ ಕಳುಹಿಸಿರುವ ಬಗ್ಗೆಯು ಹೇಳಿದ್ದಾರೆ.

ಜೈ ಪ್ರೀತಿಯನ್ನು ನಿರಾಕರಿಸಿದ್ದ ಜೂಹಿ
ಜೈ ಮೆಹ್ತಾ ಪ್ರೀತಿಯನ್ನು ಮೊದಲು ನಿರಾಕರಿಸಿದ್ದರಂತೆ. ಗುಲಾಬಿ ಹೂವಿನ ಟ್ರಕ್ ಕಳುಹಿಸಿದ ನಂತರದ ವರ್ಷ ಜೈ ಮದುವೆ ಪ್ರಪೋಸ್ ಅನ್ನು ಕಳುಹಿಸಿದ್ದರಂತೆ. ಆದರೆ ಜೂಹಿ ಏನು ಪ್ರತಿಕ್ರಿಯೆ ನೀಡಿರಲಿಲ್ಲವಂತೆ. ಆದರೆ ಅದೆ ಸಮಯದಲ್ಲಿ ಜೂಹಿ ಚಾವ್ಲಾ ತಾಯಿ ಅಪಘಾತದಲ್ಲಿ ನಿಧನಹೊಂದಿದ್ದರು. ಆ ಸಮಯದಲ್ಲಿ ಜೈ ಮೆಹ್ತಾ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಆ ನಂತರ ಜೈ ಮೇಲೆ ಪ್ರೀತಿ ಪ್ರಾರಂಭವಾಗಿ 1995ರಲ್ಲಿ ಮದುವೆ ಆಗುತ್ತಾರೆ. ಈ ವಿಚಾರವನ್ನು ಈಗ ಅಂದರೆ 24 ವರ್ಷಗಳ ಬಳಿಕ ಬಹಿರಂಗ ಪಡಿಸಿದ್ದಾರೆ.