For Quick Alerts
  ALLOW NOTIFICATIONS  
  For Daily Alerts

  ನಟಿ ಕಾಜಲ್ ಹೊಸ ಪ್ರಯತ್ನಕ್ಕೆ ಬಲ ತುಂಬಿದ ಪತಿ

  |
  'ತ್ರಿಭಂಗ' ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್

  ನೆಟ್ ಫ್ಲಿಕ್ಸ್ ಸೀರಿಸ್ ಗಳಲ್ಲಿ ಈಗಾಗಲೇ ಅನೇಕ ಬಾಲಿವುಡ್ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ನಟಿ ಕಾಜಲ್ ಕೂಡ ಆ ಸಾಲಿಗೆ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕಾಜಲ್ ನೆಟ್ ಫಿಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ತ್ರಿಭಂಗ' ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಈ ಸರಣಿಯನ್ನು ರೇಣುಕಾ ಶಹನೆ ನಿರ್ದೇಶನ ಮಾಡುತ್ತಿದ್ದಾರೆ. 'ತ್ರಿಭಂಗ' ಒಂದೇ ಕುಟುಂಬದ ಮೂರು ಹೆಣ್ಣು ಮಕ್ಕಳ ಕಥೆಯಾಗಿದೆ. ಈ ಸರಣಿಯ ಪ್ರಮುಖ ಪಾತ್ರವನ್ನು ಕಾಜಲ್ ನಿರ್ವಹಿಸುತ್ತಿದ್ದಾರೆ.

  ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಆಫರ್ ಪಡೆದ ಸೌತ್ ಇಂಡಿಯಾ ನಟಿ, ಯಾರಾಕೆ?ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಆಫರ್ ಪಡೆದ ಸೌತ್ ಇಂಡಿಯಾ ನಟಿ, ಯಾರಾಕೆ?

  'ತ್ರಿಭಂಗ' ಎಂಬುದು ಓಡಿಸ್ಸಿ ನೃತ್ಯ ಪ್ರಕಾರವೊಂದರದ ಒಂದು ಭಂಗಿ. ಹೀಗಿರುವಾಗ, ಈ ಸರಣಿ ಕೂಡ ನೃತ್ಯದ ಮೇಲೆ ಇರುತ್ತದೆಯೇ ಎನ್ನುವ ಕುತೂಹಲ ಇದೆ. ಭಾತನಾತ್ಮಕವಾಗಿ ಈ ಸರಣಿಯನ್ನು ಚಿತ್ರೀಕರಣ ಮಾಡಲು ನಿರ್ಧಾರ ಮಾಡಿದ್ದು, 1980ರ ಕಾಲಘಟ್ಟದ ಕೌಟುಂಬಿಕ ಮೌಲ್ಯವನ್ನು ಈ ವೆಬ್ ಸರಣಿ ಹೇಳುತ್ತದೆಯಂತೆ.

  ಮತ್ತೊಂದು ವಿಶೇಷ ಎಂದರೆ, ಕಾಜಲ್ ಪತಿ, ನಟ ಅಜಯ್ ದೇವಗನ್ ಈ ಸರಣಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಪತ್ನಿಯ ಪ್ರಯತ್ನಕ್ಕೆ ಬಲ ನೀಡಿದ್ದಾರೆ. ನಿನ್ನೆಯಿಂದ ಈ ವೆಬ್ ಸೀರಿಸ್ ಶೂಟಿಂಗ್ ಶುರುವಾಗಿದೆ. ತನ್ವಿ ಅಝ್ಮ, ಮಿಥಿಲಾ ಪಾಲ್ಕರ್ ಸಹ ಇದರಲ್ಲಿ ನಟಿಸಿದ್ದಾರೆ.

  BanNetflix: ಭಾರತದಲ್ಲಿ ನೆಟ್ ಫ್ಲಿಕ್ಸ್ ನಿಷೇಧ ಮಾಡಲು ಒತ್ತಾಯBanNetflix: ಭಾರತದಲ್ಲಿ ನೆಟ್ ಫ್ಲಿಕ್ಸ್ ನಿಷೇಧ ಮಾಡಲು ಒತ್ತಾಯ

  ಅಂದಹಾಗೆ, ನೆಟ್ ಫ್ಲಿಕ್ಸ್ ಇಂಡಿಯಾದಲ್ಲಿ ಈಗಾಗಲೇ ಬಾಲಿವುಡ್ ನ ಅನೇಕ ನಟಿಯರು ಕಾಣಿಸಿಕೊಂಡಿದ್ದಾರೆ. ರಾಧಿಕಾ ಅಪ್ಟೆ, ಕೈರಾ ಅಡ್ವಾಣಿ, ಮನೀಶಾ ಕೊಯಿರಾಲಾ, ಭೂಮಿ ಪಡ್ನೇಕರ್ ಸೇರಿದಂತೆ ಸಾಕಷ್ಟು ನಟಿಯರು ಮಿಂಚಿದ್ದಾರೆ. ಇತ್ತೀಚಿಗಷ್ಟೆ ಸೌತ್ ನಟಿ ಅಮಲಾ ಪೌಲ್ ಕೂಡ ನೆಟ್ ಫ್ಲಿಕ್ಸ್ ಗೆ ಎಂಟ್ರಿ ನೀಡಿದ್ದರು.

  English summary
  Bollywood actress Kajol made her debut to Netflix India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X