ಕಪ್ಪಗಿದ್ದ ಕಾಜೋಲ್ ಬೆಳ್ಳಗಾಗಿದ್ದು ಹೇಗೆ? ಅದು ಅಷ್ಟೊಂದು ಸುಲಭನಾ?
ಬಾಲಿವುಡ್ ಸ್ಟಾರ್ ಹೀರೋಯಿನ್ ಕಾಜೋಲ್ ಬಗ್ಗೆ ಹೊಸದಾಗಿ ಪರಿಚಯ ಮಾಡಿಸುವ ಅವಶ್ಯಕತೆ ಇಲ್ಲ. ಆಕೆ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರೂ ಶಾರುಕ್ ಖಾನ್ ಜೊತೆ ನಟಿಸಿದ 'ದಿಲ್‌ವಾಲೆ ದುಲಾನಿಯಾ ಲೇ ಜಾಯೇಂಗೆ' ಚಿತ್ರವನ್ನು ಪ್ರೇಕ್ಷಕರು ಮರೆಯುವುದಿಲ್ಲ. ಮೊದಲು ಕಪ್ಪಗಿದ್ದ ನಟಿ ನಂತರ ಚಿಕಿತ್ಸೆ ಪಡೆದುಕೊಂಡು ಬೆಳ್ಳಗಾದರು ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಕಾಜೋಲ್ ಮಾತನಾಡಿದ್ದಾರೆ.
ಸಾಮಾನ್ಯವಾಗಿ ನಟ, ನಟಿಯರ ಬ್ಯೂಟಿ ಸೀಕ್ರೆಟ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಸಿನಿರಸಿಕರ ಅಚ್ಚುಮೆಚ್ಚಿನ ನಟಿ ಕಾಜೋಲ್ ನಟನೆಯ ಜೊತೆಗೆ ಆಕೆಯ ಸೌಂದರ್ಯದ ಬಗ್ಗೆಯೂ ಅಭಿಮಾನಿಗಳು ಮಾತನಾಡುತ್ತಿರುತ್ತಾರೆ. ಅದೇ ರೀತಿ ಒಂದ್ಕಾಲದಲ್ಲಿ ಡಸ್ಕಿ ಬ್ಯೂಟಿ ಎನಿಸಿಕೊಂಡಿದ್ದ ಕಾಜೋಲ್ ಈಗ ಸಿಕ್ಕಾಪಟ್ಟೆ ಫೇರ್ ಆಗಿ ಕಾಣಿಸ್ತಾರಲ್ಲ. ಅವರಿಗೇನು ಸೆಲೆಬ್ರೆಟಿಗಳು, ಏನಾದರೂ ಚಿಕಿತ್ಸೆ ತೆಗೆದುಕೊಂಡು ಹೀಗೆ ಬದಲಾಗಿರುತ್ತಾರೆ ಎಂತೆಲ್ಲಾ ಮಾತನಾಡಿಕೊಳ್ಳುತ್ತಾರೆ. ಇಂತದ್ದೇ ಗಾಳಿ ಸುದ್ದಿಗಳ ಬಗ್ಗೆ ಸ್ವತಃ ಕಾಜೋಲ್ ಈಗ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಕಾಜೋಲ್, "ಕಪ್ಪಗಿದ್ದಾಳೆ. ದಪ್ಪ ಇದ್ದಾಳೆ. ಯಾವಾಗಲೂ ಕನ್ನಡಕ ಹಾಕಿಕೊಂಡಿರುತ್ತಾಳೆ. ಆಕೆ ಎಲ್ಲಾ ಹೀರೊಯಿನ್ನಾ ಅಂತೆಲ್ಲಾ ಗೇಲಿ ಮಾಡುತ್ತಿದ್ದರು. ಆದರೆ ನಾನು ಯಾವತ್ತು ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲಿಲ್ಲ. ಯಾಕಂದರೆ ಅವರಿಗಿಂತ ನಾನೇ ಬೆಟರ್, ಸ್ಮಾರ್ಟ್ ಎಂದುಕೊಂಡಿದ್ದೆ. ಅಂತಹ ಟೀಕೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬಾರದು" ಎಂದು ನಿರ್ಧರಿಸಿದ್ದೆ ಎಂದು ಕಾಜೋಲ್ ಹೇಳಿದ್ದಾರೆ.
"ಇನ್ನು ನಾನು ಬೆಳ್ಳಗೆ ಬದಲಾಗಲು ಸಾಕಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಅಂತೆಲ್ಲಾ ಹೇಳುತ್ತಿರುತ್ತಾರೆ. ಅದೆಲ್ಲಾ ಸುಳ್ಳು. 10 ವರ್ಷಗಳ ಹಿಂದೆ ನಾನು ಹೆಚ್ಚು ಹೆಚ್ಚು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. ಅದಕ್ಕಾಗಿ ಹೊರಗಡೆ ಸುತ್ತಾಡುತ್ತಿದ್ದೆ.ಹಾಗಾಗಿ ನನ್ನ ಚರ್ಮ ಕಪ್ಪಗಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ನಾನು ಮನೆಯಲ್ಲಿ ಇರ್ತೀನಿ. ಸೂರ್ಯನ ಕಿರಣಗಳಿಂದ ದೂರ ಇರುವುದರಿಂದ ಸ್ಕಿನ್ ಕಲರ್ ಬಂದಿದೆ. ಅಷ್ಟೇ, ಅದು ಬಿಟ್ಟು ನಾನು ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ" ಎಂದು ಬಾಲಿವುಡ್ ನಟಿ ಕ್ಲಾರಿಟಿ ಕೊಟ್ಟಿದ್ದಾರೆ. ಸ್ಯ ಆಕೆಯ ಹೇಳಿಕೆ ವೈರಲ್ ಆಗಿದೆ.

ಕರಿಯರ್ ಪೀಕ್‌ನಲ್ಲಿ ಇದ್ದಾಗಲೇ ಕಾಜೋಲ್ ನಟ ಅಜಯ್ ದೇವಗನ್ ಪ್ರೀತಿಸಿ ಮದುವೆ ಆಗಿದ್ದರು. ಆ ನಂತರ ಸಿನಿಮಾಗಳಲ್ಲಿ ನಟಿಸಿದ್ದು ಕಮ್ಮಿ. ಬಹಳ ಗ್ಯಾಪ್‌ನ ನಂತರ ವೆಬ್ ಸೀರಿಸ್‌ಗಳ ಮೂಲಕ ಆಕೆ ರೀಎಂಟ್ರಿ ಕೊಡುತ್ತಿದ್ದಾರೆ. ಆಕೆಯ 'ತ್ರಿಭಂಗಾ' ವೆಬ್ ಸೀರಿಸ್ ಸಕ್ಸಸ್ ಕಂಡಿದೆ.


Click it and Unblock the Notifications











