ಕಾಜೋಲ್ ದಾಂಪತ್ಯದಲ್ಲಿ ಬಿರುಕು? ಕಷ್ಟದ ದಿನ ಎದುರಿಸುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾ ತೊರೆದ ನಟಿ!

ಬಾಲಿವುಡ್‌ನ ಎವರ್‌ಗ್ರೀನ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ. ಯುವ ನಟಿಯರೂ ಸಹ ನಾಚುವ ಹಾಗೆ ಇನ್ನೂ ಗ್ಲಾಮರಸ್ ಲುಕ್ ಹೊಂದಿರುವ ಕಾಜೋಲ್ ಇಂದಿಗೂ ಸಹ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಯುವ ನಟಿಯರ ಹಾಗೆ ಆಕ್ಟಿವ್ ಇರುವಂತಹ ನಟಿ.

ಪತಿ ಅಜಯ್ ದೇವಗನ್ ಜತೆ ಹಾಗೂ ಮಕ್ಕಳ ಜತೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ಕಾಜೋಲ್ ತಮ್ಮ ಅಭಿಮಾನಿಗಳ ಮುಖದಲ್ಲಿ ನಗು ತರಿಸುತ್ತಿದ್ದರು. ಅಲ್ಲದೇ ತಮ್ಮ ಹಳೆಯ ಚಿತ್ರಗಳ ವಾರ್ಷಿಕೋತ್ಸವ ಬಂದಾಗ ಆ ಚಿತ್ರಗಳ ಕುರಿತು ಬರೆದುಕೊಳ್ಳುತ್ತಿದ್ದ ಕಾಜೋಲ್ ಚಿತ್ರೀಕರಣದ ಸಂದರ್ಭದ ಕೆಲ ಸಿಹಿ ನೆನಪುಗಳನ್ನು ಉಲ್ಲೇಖಿಸಿ ಮನರಂಜನೆ ನೀಡುತ್ತಿದ್ದರು.

Actress Kajol quits social media by saying facing one of the toughest trials of my life

ಸಾಮಾಜಿಕ ಜಾಲತಾಣದಲ್ಲಿ ಇಷ್ಟರ ಮಟ್ಟಿಗೆ ಸಕ್ರಿಯರಾಗಿ ಇರುತ್ತಿದ್ದ ಕಾಜೋಲ್ ಇದೀಗ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಯಿಂದಲೂ ಸಹ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಹೌದು, ಇಂದು ( ಜೂನ್ 9 ) ತಮ್ಮ ಟ್ವಿಟರ್ ಖಾತೆ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕಾಜೋಲ್ "ನನ್ನ ಜೀವನದ ಅತ್ಯಂತ ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದೇನೆ" ಎಂದು ಬರೆದಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಈ ಹಿಂದೆ ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನೂ ಸಹ ಹೈಡ್ ಮಾಡಿರುವ ಕಾಜೋಲ್ ಇದೊಂದು ಪೋಸ್ಟ್ ಮಾತ್ರ ಉಳಿಸಿಕೊಂಡಿದ್ದಾರೆ.

Actress Kajol quits social media by saying facing one of the toughest trials of my life

ಹೀಗೆ ಕಾಜೋಲ್ ಸಾಮಾಜಿಕ ಜಾಲತಾಣ ತೊರೆಯುವ ಕುರಿತಾಗಿ ಮಾಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಭಿನ್ನ ವಿಭಿನ್ನವಾದ ಕಾಮೆಂಟ್ ಹಾಕಿದ್ದಾರೆ. ಕೆಲವರು ಚಿನ್ನದಂಥ ನಿಮ್ಮ ಬಾಳಲ್ಲಿ ಏನಾಯಿತು ಎಂದು ಪ್ರಶ್ನೆಯನ್ನು ಕೇಳಿದ್ದರೆ, ಇನ್ನೂ ಕೆಲವರು ಆದಷ್ಟು ಬೇಗ ಈ ಕಷ್ಟ ನಿವಾರಣೆ ಮಾಡಿಕೊಂಡು ಮರಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಅಲ್ಲದೇ ಇನ್ನೂ ಹಲವಾರು ನೆಟ್ಟಿಗರು ಕಾಜೋಲ್ ದಾಂಪತ್ಯದಲ್ಲಿ ಬಿರುಕು ಮೂಡಿರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಯನ್ನು ಕಾಮೆಂಟ್ ಮಾಡಿದ್ದಾರೆ. ಕಾಜೋಲ್ ಹಳೆ ಫೋಟೊಗಳನ್ನು ಡಿಲಿಟ್ ಮಾಡಿರುವುದು ಹಾಗೂ ಜೀವನದ ಅತಿ ಕಷ್ಟದ ಸಂದರ್ಭ ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿರುವುದು ಈ ಅನುಮಾನ ಮೂಡಿಸಿದೆ.

ಆದರೆ ಅಭಿಮಾನಿಯೋರ್ವ ಇದೆಲ್ಲಾ ಪ್ರಮೋಷನಲ್ ಗಿಮಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಮುಂದಿನ ಚಿತ್ರ 'ಗುಡ್ ವೈಫ್' ಓಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಇದೆಲ್ಲಾ ಆ ಚಿತ್ರಕ್ಕಾಗಿ ಪ್ರಚಾರ ಮಾಡಲು ಮಾಡಿರುವ ಗಿಮಿಕ್ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗೆ ಹಲವರ ಅಭಿಪ್ರಾಯಗಳಲ್ಲಿ ಯಾವುದೇ ಸತ್ಯವಾಗಿರಲಿ. ಕಾಜೋಲ್ ಎಲ್ಲವನ್ನೂ ಸರಿಪಡಿಸಿಕೊಂಡು ಮುಂಚಿನ ಹಾಗೆ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಗೂ ತಮ್ಮ ಬಗೆಗಿನ ಸುದ್ದಿಗಳನ್ನು ಬರೆದುಕೊಳ್ಳಲಿ ಎಂದು ಅಭಿಮಾನಿಗಳ ಆಶಿಸಿದ್ದಾರೆ.

More from Filmibeat

English summary
Actress Kajol quits social media after by saying 'one of the toughest trials of my life. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X