ಕಂಗನಾ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ: ಕರ್ನಾಟಕಕ್ಕೆ ಇರುವ ಲಿಂಕ್ ಏನು?
ಬಾಲಿವುಡ್ ನ ವಿವಾದಾತ್ಮಕ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿದ್ದು ಅವರ ಪೋಸ್ಟ್ ಅಥವಾ ಹೇಳಿಕೆಗಳಿಂದ ಅಲ್ಲ. ಅವರ ಬಾಡಿಗಾರ್ಡ್ ವಿಚಾರವಾಗಿ. ಹೌದು, ಕಂಗನಾ ರಣಾವತ್ ವೈಯಕ್ತಿಕ ಭದ್ರತಾ ಸಿಬ್ಬಂದಿ ಕುಮಾರ್ ಹೆಗ್ಡೆ ವಿರುದ್ಧ ಅತ್ಯಾಚಾರ ಮತ್ತು ಮೋಸ ಆರೋಪ ಕೇಳಿಬಂದಿದೆ.
ಮುಂಬೈನ ಅಂಧೇರಿ ಮೂಲದ ಬ್ಯೂಟಿಷಿಯನ್ ಕರ್ನಾಟಕ ಮೂಲದ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಡಿಎನ್ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಕುಮಾರ್ ವಿರುದ್ಧ ಅತ್ಯಾಚಾರ, ಮೋಸ ಸೇರಿದಂತೆ ಅನೇಕ ಆರೋಪ ಮಾಡಿದ್ದಾರೆ. ಮುಂದೆ ಓದಿ..

ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ
ದೂರು ನೀಡಿರುವ ಯುವತಿ ಹೇಳುವ ಪ್ರಕಾರ 8 ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದು, ಕಳೆದ ವರ್ಷ ಜೂನ್ ನಲ್ಲಿ ಕುಮಾರ್ ಹೆಗ್ಡೆ ಮದುವೆಯಾವುದಾಗಿ ಒಪ್ಪಿಗೆ ನೀಡದ ಬಳಿಕ ಲಿವಿಂಗ್ ಟುಗೆದರ್ ನಲ್ಲಿ ಇದ್ದೆವು ಎಂದಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಮತ್ತು ಅಶ್ಲೀಲವಾಗಿ ತನ್ನನ್ನು ಬಳಸಿಕೊಂಡಿರುವುದಾಗಿ ಆರೋಪ ಮಾಡಿದ್ದಾರೆ.

ಆತ ಕರ್ನಾಟಕಕ್ಕೆ ಹೋದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ
ದೂರಿನಲ್ಲಿ ಯುವತಿ, ಏಪ್ರಿಲ್ 27ರಂದು ಕುಮಾರ್ ತನ್ನ ತಾಯಿಗೆ ನಿಧನ ಹೊಂದಿದ್ದಾರೆ, ತನ್ನ ಊರಿಗೆ ಹೋಗಬೇಕೆಂದು 50 ಸಾವಿರ ಕೇಳಿದ. 50 ಸಾವಿರ ನೀಡಿದ ಬಳಿಕ ಅವನು ತನ್ನ ಊರು ಕರ್ನಾಟಕಕ್ಕೆ ಹೋದ. ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ' ಎಂದು ಆರೋಪಿಸಿದ್ದಾರೆ.

ಬೇರೆ ಜಾತಿ ಎಂದು ಮದುವೆಗೆ ನಿರಾಕರಣೆ
ಮೇ 11ರಂದು ಯುವತಿಗೆ ಕುಮಾರ್ ಸ್ನೇಹಿತನಿಂದ ಫೋನ್ ಕರೆ ಬಂದಿದೆ. ಆತನನ್ನು ಯಾರು ಭೇಟಿ ಮಾಡಲು ಸಾಧ್ಯವಿಲ್ಲ ಮತ್ತು ಆತ ಮತ್ತೊಬ್ಬಳನ್ನು ಮದುವೆಯಾಗಲಿದ್ದಾನೆ ಎಂದು ಹೇಳಿದರು. ಬಳಿಕ ಕುಮಾರ್ ತಾಯಿ ಫೋನ್ ಮಾಡಿ ಇಬ್ಬರು ಬೇರೆ ಬೇರೆ ಜಾತಿಯಾದ ಕಾರಣ ಮದುವೆ ಸಾಧ್ಯವಿಲ್ಲ ಎಂದು ಹೇಳಿದರು ಎಂದು ಯುವತಿ ಹೇಳಿದ್ದಾರೆ.
Recommended Video

ಬೇರೆ ಯುವತಿ ಜೊತೆ ಆತನಿಗೆ ಮದುವೆ ಫಿಕ್ಸ್ ಆಗಿದೆ
ಜೂನ್ 5 ರಂದು ಕುಮಾರ್ ಮತ್ತೋರ್ವ ಯುವತಿ ಜೊತೆ ಮದುವೆಯಾಗುತ್ತಿರುವ ಮಾಹಿತಿ ತಿಳಿದುಬಂದಿದೆ. ಆತ ತನಗೆ ಮೋಸ ಮಾಡಿದ್ದಾನೆ, ಅತ್ಯಾಚಾರ ವೆಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಭಾರತ್ ಗಾಯಕ್ವಾಡ್ ಪ್ರತಿಕ್ರಿಯೆ ನೀಡಿ, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications











