For Quick Alerts
  ALLOW NOTIFICATIONS  
  For Daily Alerts

  'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್

  |

  ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ನೀಲಿ ಚಿತ್ರಗಳ ನಟಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ ಹೀಗೆ ಹೇಳಿದ್ದಾರೆ.

  ಬಾಲಿವುಡ್ ನಲ್ಲಿ ಸದ್ಯ ಮಾದಕ ವಸ್ತು ಮಾಫಿಯಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ವಿಚಾರವಾಗಿ ಕಂಗನಾ ಮತ್ತು ಊರ್ಮಿಳಾ ನಡುವೆ ವಾಗ್ವಾದ ಶುರುವಾಗಿದ್ದು, ಇಬ್ಬರು ಕೆಸರೆರಚಾಟ ನಡೆಯುತ್ತಿದ್ದಾರೆ. ನಟಿ ಕಂಗನಾ ರಣಾವತ್ ಇತ್ತೀಚಿಗೆ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಡ್ರಗ್ ಆಂಗಲ್ ಬಗ್ಗೆ ಮಾತನಾಡುವಾಗ 'ಬಾಲಿವುಡ್ ನಲ್ಲಿ ಶೇ. 99ರಷ್ಟು ಸ್ಟಾರ್ಸ್ ಮಾದಕ ವಸ್ತು ಸೇವನೆ ಮಾಡುತ್ತಾರೆ' ಎಂದು ಕಂಗನಾ ಹೇಳಿದ್ದರು.

  ಕಂಗನಾ ರಣೌತ್‌ ಗೆ ನಾಲ್ಕು ಸಲಹೆ ನೀಡಿದ ನಟಿ ರಮ್ಯಾ

  ಕಂಗನಾ ಮಾತಿಗೆ ಪ್ರತಿಕ್ರಿಯೆ ನೀಡಿದ ಊರ್ಮಿಳಾ, "ಕಂಗನಾ ಈ ರೀತಿ ಹೇಳುವುದು ಸರಿಯಲ್ಲ. ಯಾರು ಡ್ರಗ್ಸ್ ಬಳಸುತ್ತಿದ್ದಾರೋ ಅವರ ಹೆಸರನ್ನು ನೇರವಾಗಿ ಹೇಳಲಿ. ಹಾಗೆ ಮಾಡಿದರೆ ನಾನೇ ಕಂಗನಾ ಬೆಂಬಲ ನೀಡುತ್ತೇನೆ. ಹೆಸರು, ಹಣ, ಯಶಸ್ಸು ಗಳಿಸಿರುವುದು ಚಿತ್ರರಂಗದಲ್ಲಿ. ಅದಕ್ಕೆ ಅವರು ಋಣಿ ಆಗಿರಬೇಕು." ಎಂದಿದ್ದಾರೆ.

  ಊರ್ಮಿಳಾ ಹೇಳಿಕೆಗೆ ತಿರುಗೇಟು ನೀಡಿರುವ ಕಂಗನಾ, "ಊರ್ಮಿಳಾ ಅವರ ಒಂದು ಹಳೆಯ ಸಂದರ್ಶನ ನೋಡಿದೆ. ಅದರಲ್ಲಿ ಅವರು ನನ್ನನ್ನು ಅಪಹಾಸ್ಯ ಮಾಡಿದ್ದಾರೆ. ನಾನು ಟಿಕೆಟ್ ಗಾಗಿ ಬಿಜೆಪಿಯ ಪರ ವಹಿಸುತ್ತೇನೆ ಎಂದು ಹೇಳಿದ್ದರು. ಊರ್ಮಿಳಾ ಒಬ್ಬರು ಸಾಫ್ಟ್ ನೀಲಿ ತಾರೆ. ಅವರು ನಟನೆಯಿಂದ ಪರಿಚಿತರಾದವರಲ್ಲ. ಅವರು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೆ? ನೀಲಿ ತಾರೆ ಅವರು. ಅವರಿಗೆ ಟಿಕೆಟ್ ಸಿಗುತ್ತೆ ಅಂದಮೇಲೆ ನನಗೆ ಯಾಕೆ ಸಿಗಲ್ಲ? ಎಂದಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಕಂಗನಾ ರಣಾವತ್ ಈ ಹೇಳಿಕೆ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಊರ್ಮಿಳಾಗೆ ಬೆಂಬಲ ನೀಡಿ ಕಂಗನಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಸ್ವಾರಾ ಭಾಸ್ಕರ್, ಅನುಭವ್ ಸಿನ್ಹ ಸೇರಿದಂತೆ ಅನೇಕರು ಕಂಗನಾ ವಿರುದ್ಧ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಅನೇಕರ ವಿರೋಧ ಕಟ್ಟಿಕೊಂಡಿರುವ ಕಂಗನಾರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ

  English summary
  Bollywood Actress Kangana Ranaut calls Urmila Matondkar is soft porn star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X