"ಈಗಿನ ಜನರೇಷನ್‌ಗೆ ಲೈಂಗಿಕ ಕ್ರಿಯೆಗೂ ಸೋಮಾರಿತನ": ಕಂಗನಾ ರನೌತ್
ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರನೌತ್ ವಿವಾದಗಳನ್ನು ಸದಾ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಪ್ರತಿದಿನ ಒಂದಲ್ಲ ಒಂದು ಟಾಪಿಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಕಾಮೆಂಟ್ಸ್ ಸದ್ದು ಮಾಡುತ್ತಿರುತ್ತದೆ. ಇದೀಗ ಮದುವೆ, ಲೈಂಗಿಕ ಕ್ರಿಯೆ ಬಗ್ಗೆ ಕಂಗನಾ ಹಾಕಿರುವ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗ್ತಿದೆ. ಇತ್ತೀಚೆಗೆ ಶೃಂಗಾರಂ, ಮದುವೆಯ ಕಾಮೆಂಟ್ಸ್ ವೈರಲ್ ಆಗುತ್ತಿದೆ. ಬೋಲ್ಡ್ ಸ್ಟೇಟ್‌ಮೆಂಟ್ ಕೊಡುವುದರಲ್ಲಿ ಬಾಲಿವುಡ್ ಕ್ವೀನ್ ಸದಾ ಮುಂದಿರುತ್ತಾರೆ.
ತಮ್ಮ ಕಾಮೆಂಟ್ ವಿವಾದ ಸೃಷ್ಟಿಸಿದರು ಅದನ್ನು ಧೈರ್ಯವಾಗಿ ಎದುರಿಸುವ ಗಟ್ಟಿಗಿತ್ತಿ ಕಂಗನಾ ರನೌತ್. ಬಾಲಿವುಡ್ ನೆಪೋ ಮಾಫಿಯಾ, ಹೃತಿಕ್ ರೋಷನ್ ಜೊತೆಗಿನ ರಿಲೇಶಷನ್‌ಶಿಪ್ ಎಲ್ಲದರ ಬಗ್ಗೆಯೂ ಬಹಿರಂಗವಾಗಿಯೇ ಮಾತನಾಡಿದ್ದರು. ಬರೀ ಸಿನಿಮಾ ಅಲ್ಲ ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಕೂಡ ಕಂಗನಾ ಪ್ರತಿಕ್ರಿಯಿಸುತ್ತಿರುತ್ತಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಝೆನ್ ಎಝ್(Gen Z ಅಂದರೆ 1997ರಿಂದ 2012ರ ನಡುವೆ ಹುಟ್ಟಿದವರು) ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

Gen Z ಜನರೇಷನ್ ಪೂರ್ತಿ ಫೋನ್‌ನಲ್ಲೇ ಮುಳುಗಿ ಹೋಗಿದ್ದಾರೆ. ಒಂದು ಮನೆ ಖರೀದಿಸಲು ಅವರಿಂದ ಸಾಧ್ಯವಿಲ್ಲ. ಮದುವೆ ಮಾಡಿಕೊಳ್ಳು ಹಿಂದು ಮುಂದು ನೋಡುತ್ತಿದ್ದಾರೆ. ಲೈಂಗಿಕ ಕ್ರಿಯೆಯಲ್ಲೂ ಅವರಿಗೆ ಸೋಮಾರಿತನ ಎಂದು ಕ್ಯಾರೆಟ್, ಮೂಲಂಗಿ ಜೊತೆ ಹೋಲಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. "ಅಮೆರಿಕಾದ ಬಹುತೇಕ ಯುವ ಜನತೆ ಮಿಲಿಟರಿ ಸೇವೆಗೆ ಅರ್ಹರಲ್ಲ" ಎನ್ನುವ ಸುದ್ದಿ ನೋಡಿ, ಅದರ ಸ್ಕ್ರೀನ್‌ಶಾಟ್ ತೆಗೆದು ಈ ರೀತಿ ಕಂಗನಾ ಪೋಸ್ಟ್ ಮಾಡಿದ್ದಾರೆ.
'Gen Z... ಹ ಹ.. ಅವರ ಕೈಗಳು, ಕಾಲುಗಳು ಕೋಲುಗಳಂತೆ ಇರುತ್ತದೆ. ಅವರು ಒಬ್ಬರ ಜೊತೆ ಮಾತನಾಡುವುದಕ್ಕಿಂತ ಓದುವುದಕ್ಕಿಂತ ಫೋನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವರಲ್ಲಿ ಏಕಾಗ್ರತೆ ಇಲ್ಲ. ಆಫೀಸ್‌ನಲ್ಲಿ ಬಾಸ್‌ನ ಗೌರವಿಸುವುದಿಲ್ಲ. ಆದರೆ ಸುಲಭಗಾಗಿ ಆ ಸ್ಥಾನ ಬೇಕು ಎಂದುಕೊಳ್ಳುತ್ತಾರೆ. ಕ್ರಮಶಿಕ್ಷಣ, ಪರಿಶ್ರಮದೊಂದಿಗೆ ಬೆಳೆದವರನ್ನು ನೋಡಿದರೆ ಇಷ್ಟವಾಗುವುದಿಲ್ಲ. ಶಾರ್ಟ್ ಕಟ್ಸ್‌ನಲ್ಲಿ ಯಶಸ್ಸು ಪಡೆದವರನ್ನು ಅವರನ್ನು ಗೌರವಿಸುತ್ತಾರೆ"

"ಈ ಜನರೇಶನ್‌ನ ಸ್ಟಾರ್‌ಬಕ್ಸ್, ಅವಕಾಡೊ ಟೋಸ್ಟ್‌ಗಳನ್ನು ಇಷ್ಟಪಡುತ್ತಾರೆ ಆದರೆ ಅವರಿಗೆ ಮನೆ ಖರೀದಿಸುವ ಶಕ್ತಿ ಇರುವುದಿಲ್ಲ. ಅಟ್ರಾಕ್ಟ್ ಮಾಡುವುದಕ್ಕೆ ಬ್ರಾಂಡೆಡ್ ವಸ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಆದರೆ ಕಮಿಟ್‌ಮೆಂಟ್ ಅಥವಾ ಮದುವೆ ಅಂದ್ರೆ ಆಗಲ್ಲ. ಸೆಕ್ಸ್ ವಿಷಯದಲ್ಲಿಯೂ ಅವರು ಸೋಮಾರಿಗಳು ಎಂದು ಅಧ್ಯಯನಗಳು ಹೇಳುತ್ತಿವೆ. ಇವರಿಗಿನ ಮಿಲಿನಿಯಲ್ಸ್(1981 ರಿಂದ 1991ರ ನಡುವೆ ಜನಿಸಿದರು) ಉತ್ತಮ. ರೋಲಿಂಗ್ ಐಸ್, ಸಿಲ್ಲಿ ಸ್ಲಾಂಗ್‌ನ Gen Z ಪೀಪಲ್ ಬ್ರೈನ್ ವಾಶ್ ಮಾಡೋದು, ಮ್ಯಾನಿಪುಲೇಟ್ ಸುಲಭ" ಎಂದು ಕಂಗನಾ ಬರೆದುಕೊಂಡಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಕಂಗನಾ ಸದ್ಯ ತಮಿಳಿನ 'ಚಂದ್ರಮುಖಿ- 2' ಹಾಗೂ ಬಾಲಿವುಡ್‌ನ 'ಎಮರ್ಜೆನ್ಸಿ' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸೂಪರ್ ಹಿಟ್ ಚಂದ್ರಮುಖಿ ಸೀಕ್ವೆಲ್‌ಗೆ ಪಿ. ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಾಘವಾ ಲಾರೆನ್ಸ್ ನಾಯಕರಾಗಿ ನಟಿಸ್ತಿದ್ದಾರೆ. ಇನ್ನು 'ಎಮರ್ಜೆನ್ಸಿ' ಚಿತ್ರವನ್ನು ಕಂಗನಾ ನಿರ್ದೇಶಿಸಿ ನಟಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











