ಸಹೋದರ-ಸಹೋದರಿಯರಿಗೆ ಮನೆಗಳನ್ನು ಉಡುಗೊರೆ ನೀಡಿದ ಕಂಗನಾ ರಣೌತ್

ಸಿನಿಮಾ ನಟಿ ಆಗಬೇಕೆಂದು ಹದಿನಾರನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಬಂದುಬಿಟ್ಟಿದ್ದರು ಕಂಗನಾ ರಣೌತ್ . ಕುಟುಂಬ ಮತ್ತು ಸಂಬಂಧಿಗಳು ಕಂಗನಾ ಜೊತೆಗೆ ಸಂಬಂಧವನ್ನು ಕಡಿದುಕೊಂಡು ಬಿಟ್ಟಿದ್ದರು. ಆದರೆ ಈಗ ಕಂಗನಾ ದೊಡ್ಡ ಸ್ಟಾರ್.

ಹಿಂದೆ ಏನೇ ಆಗಿದ್ದರೂ ಕಂಗನಾಗೆ ತಮ್ಮ ಕುಟುಂಬವೆಂದರೆ ಪಂಚ ಪ್ರಾಣ. ಆಸಿಡ್ ದಾಳಿಗೆ ಗುರಿಯಾದ ತನ್ನ ಸ್ವಂತ ಅಕ್ಕ್ ರಂಗೋಲಿಯನ್ನು ತಮ್ಮ ಮ್ಯಾನೇಜರ್ ಆಗಿ ಮಾಡಿಕೊಂಡು ಸದಾ ತನ್ನೊಂದಿಗೆ ಇಟ್ಟುಕೊಂಡಿದ್ದಾರೆ ಕಂಗನಾ. ತಮ್ಮನಿಗೂ ಉದ್ಯಮಿಯಾಗಲು ಸಹಾಯ ಮಾಡಿದ್ದಾರೆ.

ಮುಂಬೈನಲ್ಲಿ ಮನೆ, ಕಚೇರಿ ಇತರೆ ಆಸ್ತಿಗಳನ್ನು ಹೊಂದಿರುವ ನಟಿ ಕಂಗನಾ, ಇದೀಗ ಅಕ್ಕ ರಂಗೋಲಿ, ತಮ್ಮ ಅಕ್ಷತ್ ಹಾಗೂ ಇನ್ನೂ ಇಬ್ಬರು ಕಸಿನ್ಸ್‌ ಗಾಗಿ ಒಟ್ಟು ನಾಲ್ಕು ಮನೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ದುಬಾರಿ ಏರಿಯಾದಲ್ಲಿ ಮನೆ

ದುಬಾರಿ ಏರಿಯಾದಲ್ಲಿ ಮನೆ

ಚಂಡೀಘಡದ ದುಬಾರಿ ಏರಿಯಾದಲ್ಲಿ ಒಂದೇ ಕಡೆ ನಾಲ್ಕು ಮನೆಗಳನ್ನು ಖರೀದಿಸಿರುವ ಕಂಗನಾ ರಣೌತ್ ನಾಲ್ಕೂ ಮನೆಗಳನ್ನು ನಾಲ್ಕು ಮಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ನಾಲ್ಕು ಮನೆ ಖರೀದಿಸಲು ನಾಲ್ಕು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಕಂಗನಾ.

ಸಹೋದರರ ಕನಸು ಪೂರೈಸಿದ ಕಂಗನಾ

ಸಹೋದರರ ಕನಸು ಪೂರೈಸಿದ ಕಂಗನಾ

ಚಂಡೀಘಡದಲ್ಲಿ ಮನೆ ಖರೀದಿಸಬೇಕೆಂಬ ಸಹೋದರ, ಕಸಿನ್ಸ್‌ಗಳ ಆಸೆ ಪೂರೈಸಲು ಕಂಗನಾ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗ ಕೊಂಡುಕೊಂಡಿರುವ ಮನೆಗಳು ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಬಹಳ ಒಳ್ಳೆಯ ರೆಸಿಡೆನ್ಸ್ ಏರಿಯಾದಲ್ಲಿಯೇ ಇವೆಯಂತೆ.

ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದರು

ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದರು

ಕೆಲವು ತಿಂಗಳ ಹಿಂದಷ್ಟೆ ಮದುವೆಯಾದ ಸಹೋದರ ಅಕ್ಷತ್‌ಗಾಗಿ ಜೋಧಪುರದಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಅನ್ನು ಸಹ ಆಯೋಜಿಸಿದ್ದರು ನಟಿ ಕಂಗನಾ. ಅಕ್ಕ ರಂಗೋಲಿ ಬಗ್ಗೆಯೂ ಅಪಾರ ಪ್ರೇಮವುಳ್ಳ ಕಂಗನಾ, ಅಕ್ಕನಿಗಾಗಿ ಹಲವು ಆಸ್ತಿಗಳನ್ನು ನೀಡಿದ್ದಾರೆ. ಅಕ್ಕನ ಮಗನಿಗೆ ಹಲವು ದುಬಾರಿ ಉಡುಗೊರೆಗಳನ್ನು ಸಹ ನೀಡುತ್ತಿರುತ್ತಾರೆ.

Recommended Video

ಸುಶಾಂತ್ ಸಿಂಗ್ ಸಂಬಂಧಿ ಮೆಲೆ ಗುಂಡಿನ ಧಾಳಿ | Filmibeat kannada
ತಲೈವಿ ಸಿನಿಮಾ ಬಿಡುಗಡೆಗೆ ರೆಡಿ

ತಲೈವಿ ಸಿನಿಮಾ ಬಿಡುಗಡೆಗೆ ರೆಡಿ

ನಟಿ ಕಂಗನಾ ನಟನೆಯ 'ತಲೈವಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ನಡುವೆ ದಾಕಡ್ ಹಾಗೂ ತೇಜಸ್ ಸಿನಿಮಾಗಳಲ್ಲಿಯೂ ಕಂಗನಾ ನಟಿಸುತ್ತಿದ್ದಾರೆ. ಮಣಿಕರ್ಣಿಕಾ ಸಿನಿಮಾದ ಮುಂದುವರೆದ ಭಾಗವನ್ನು ಕಂಗನಾ ಅವರೇ ನಿರ್ದೇಶಿಸಲಿದ್ದಾರೆ.

More from Filmibeat

English summary
Actress Kangana Ranaut gifted four house to Rangoli, Akshat and two other cousins.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X