For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಟಿಕ್ ಟಾಕ್ ವಿಡಿಯೋಗೆ ವಿರೋಧ: ಕ್ಷಮೆ ಕೇಳಬೇಕೆಂದ ಕಂಗನಾ

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿವಾದಗಳಿಂದ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಸದಾ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಿದ್ದ ದೀಪಿಕಾ ಇತ್ತೀಚಿಗೆ ಜೆ ಎನ್ ಯುಗೆ ಭೇಟಿ ನೀಡಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಂತೆ ದೀಪಿಕಾ ಪಡುಕೋಣೆ ಪರ ಮತ್ತು ವಿರೋಧ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ.

  ವಿವಾದಗಳಿಂದ ದೂರ ಇದ್ದ ದೀಪಿಕಾಗೆ ಈಗ ವಿವಾದಗಳು ಸುತ್ತಿಕೊಳ್ಳುತ್ತಿವೆ. ಇತ್ತೀಚಿಗೆ ದೀಪಿಕಾ ಅಭಿನಯದ ಚಪಾಕ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಯ ಮಟ್ಟಕ್ಕೆ ಕಲೆಕ್ಷನ್ ಮಾಡದಿದ್ದರು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀಪಿಕಾ ಅಭಿನಯಕ್ಕೆ ಅಭಿಮಾನಿಗಳು ಹ್ಯಾಟ್ಸಾಫ್ ಹೇಳುತ್ತಿದ್ದಾರೆ.

  'ವಿಶ್ವ ಆರ್ಥಿಕ ವೇದಿಕೆ'ಯಲ್ಲಿ ಡಿಪ್ರೆಷನ್ ಬಗ್ಗೆ ದೀಪಿಕಾ ಹೃದಯಸ್ಪರ್ಶಿ ಭಾಷಣ'ವಿಶ್ವ ಆರ್ಥಿಕ ವೇದಿಕೆ'ಯಲ್ಲಿ ಡಿಪ್ರೆಷನ್ ಬಗ್ಗೆ ದೀಪಿಕಾ ಹೃದಯಸ್ಪರ್ಶಿ ಭಾಷಣ

  ಇದರ ನಡುವೆ ದೀಪಿಕಾ ಬಗ್ಗೆ ಮತ್ತೊಂದು ವಿವಾದ ಕೇಳಿ ಬರುತ್ತಿದೆ. ಇತ್ತೀಚಿಗೆ ಟಿಕ್ ಟಾಕ್ ವಿಡಿಯೋ ಮಾಡಿದ್ದ ದೀಪಿಕಾ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ದೀಪಿಕಾ ಕ್ಷಮೆ ಕೇಳಬೇಕೆಂದು ಒತ್ತಾಯಮಾಡಿದ್ದಾರೆ. ಅಂದ್ಹಾಗೆ ವಿವಾದ ಸೃಷ್ಟಿಸುವಂತೆ ದೀಪಿಕಾ ಟಿಕ್ ಟಾಕ್ ನಲ್ಲಿ ಏನು ಮಾಡಿದ್ದಾರೆ ಅಂತೀರಾ?

  ದೀಪಿಕಾ ಮೇಕಪ್ ಕಲಾವಿದೆಗೆ ಒಂದು ಚಾಲೆಂಜ್ ನೀಡುತ್ತಾರೆ. ದೀಪಿಕಾ ಅಭಿನಯದ ಮೂರು ಸಿನಿಮಾಗಳಲ್ಲಿನ ಲುಕ್ ಅನ್ನು ರಿ ಕ್ರಿಯೇಟ್ ಮಾಡಿ ತೋರಿಸುವಂತೆ ಕೇಳಿಕೊಳ್ಳುತ್ತಾರೆ. ಅದರಲ್ಲಿ ಚಪಾಕ್ ಸಿನಿಮಾದ ಲುಕ್ ಕೂಡ ಇದೆ. ದೀಪಿಕಾ ಸಿನಿಮಾ ಪ್ರಚಾರಕ್ಕಾಗಿ ಆಸಿಡ್ ದಾಳಿಗೆ ಒಳಗಾದವರ ಲುಕ್ ಅನ್ನು ಹೀಗೆಲ್ಲ ಬಳಸಿಕೊಳ್ಳುತ್ತಿರುವುದು ಸರಿಯಲ್ಲ, ಅಷ್ಟು ಗೊತ್ತಾಗಲ್ಲಾ ನಟಿಗೆ ಎಂದು ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಇದರ ಬೆನ್ನಲ್ಲೆ ನಟಿ ಕಂಗನಾ ರಣಾವತ್ ಕೂಡ ಖಂಡಿಸಿ ದೀಪಿಕಾ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಕಂಗನಾ ಸಹೋದರಿ ರಂಗೋಲಿ ಕೂಡ ಆಸಿಡ್ ದಾಳಿ ತಂತ್ರಸ್ತೆ, ಈ ವಿಡಿಯೋ ನೋಡಿದಾಗ ರಂಗೋಲಿಗೂ ತುಂಬ ನೋವಾಯಿತು. ಕೆಲವೊಮ್ಮೆ ಮಾರ್ಕೇಟಿಂಗ್ ತಂಡ ಪ್ರಚಾರಕ್ಕಾಗಿ ಅತಿರೇಕಕ್ಕೆ ಹೋಗುತ್ತವೆ. ದೀಪಿಕಾಗಾದರು ಅರಿವಿರಬೇಕಿತ್ತು. ಎಲ್ಲರು ತಪ್ಪುಗಳನ್ನು ಮಾಡುತ್ತಾರೆ. ಕ್ಷಮೆ ಕೇಳುವುದರಲ್ಲಿ ಯಾವುದೇ ಹಾನಿ ಇಲ್ಲ" ಎಂದು ಹೇಳಿದ್ದಾರೆ.

  English summary
  Bollywood Actress Kangana Ranaut opposed to Deepika Padukone Tik Tok video. Deepika Padukone throws Tik Tok challenge about Chhapaak look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X