For Quick Alerts
  ALLOW NOTIFICATIONS  
  For Daily Alerts

  'ವೈ ಪ್ಲಸ್' ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ 'ಕ್ವೀನ್' ಕಂಗನಾ

  |

  'ನಾನು ಬಂದೇ ಬರ್ತೀನಿ, ತಾಕತ್ತಿದ್ದರೆ ತಡೆಯಿರಿ' ಎಂದು ಸವಾಲು ಹಾಕಿದ್ದ ನಟಿ ಕಂಗನಾ ರಣಾವತ್ ಇಂದು ಭಾರಿ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದಾರೆ. ಶಿವಸೇನೆ ಜೊತೆಗಿನ ವಾಕ್ಸಮರದ ನಡುವೆಯೂ ಕಂಗನಾ ಮುಂಬೈಗೆ ಬಂದಿಳಿದಿದ್ದಾರೆ. ಬುಧವಾರ ಬೆಳಗ್ಗೆ ಹಿಮಾಚಲ ಪ್ರದೇಶದಿಂದ ವಿಮಾನ ಮೂಲಕ ಹೊರಟ ಕಂಗನಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಂಬೈಗೆ ತಲುಪಿದರು.

  ಕಂಗನಾ ರಣಾವತ್ ಮುಂಬೈ ಭೇಟಿಗೆ ವೈ ಪ್ಲಸ್ ಭದ್ರತೆ ನೀಡಲಾಗಿತ್ತು. ಮುಂಬೈ ಏರ್ ಪೋರ್ಟ್ ಗೆ ಬಂದಿಳಿಯುತ್ತಿದಂತೆ ಅಭಿಮಾನಿಗಳು, ಬೆಂಬಲಿಗರು ಕಂಗನಾರನ್ನು ಸ್ವಾಗತಿಸಿದರು. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕಂಗನಾ ಭೇಟಿಯಿಂದ ಏರ್ ಪೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

  ಕಂಗನಾ ಮುಂಬೈ ಏರ್ ಪೋರ್ಟ್ ನಿಂದ ನೇರವಾಗಿ ಮುಂಬೈನ ತನ್ನ ನಿವಾಸಕ್ಕೆ ತೆರಳಿದ್ದಾರೆ. ಬಳಿಕ ತನ್ನ ಕಚೇರಿಯನ್ನು ನೆಲಸಮ ಮಾಡಿದ ಬಗ್ಗೆ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಂಗನಾ ಜೊತೆ ಸಹೋದರಿ ರಂಗೋಲಿ ಸಹ ಮುಂಬೈಗೆ ಆಗಮಿಸಿದ್ದಾರೆ.

  ಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಬಾಂಬೆ ಹೈಕೋರ್ಟ್ ತಡೆಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಬಾಂಬೆ ಹೈಕೋರ್ಟ್ ತಡೆ

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada

  ಸುಶಾಂತ್ ಸಿಂಗ್ ಸಾವಿನ ಬಳಿಕ ಕಂಗನಾ ರಣಾವತ್ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ನೆಪೋಟಿಸಂ ವಿರುದ್ಧ ಸಮರ, ಒಳಗಿನವರು ಮತ್ತು ಹೊರಗಿನವರು ಎನ್ನುವ ವಾದ, ಡ್ರಗ್ಸ್ ಮಾಫಿಯಾ ವಿರುದ್ಧ ಕಿಡಿಕಾರಿದ್ದ ಕಂಗನಾ, ಇದೀಗ ಮುಂಬೈ ಪೊಲೀಸ್ ಮತ್ತು ಶಿವಸೇನೆಯ ವಿರುದ್ಧ ಪ್ರತಿಭಟಿಸಿದ್ದರು. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಕಂಗನಾ ಮೂವಿ ಮಾಫಿಯಾಗಿಂತ ಮುಂಬೈ ಪೊಲೀಸರಿಗೆ ಹೆದರುತ್ತೇನೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

  ಕಂಗನಾ ಮತ್ತು ಆಡಳಿತರೂಢ ಶಿವಸೇನೆ ನಡುವಿನ ಜಗಳದಿಂದ ಕಂಗನಾ ಅವರ ಮುಂಬೈ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಕೆಡವಲು ಮುಂದಾಗಿತ್ತು. ಬಿಎಂಸಿಯ ಅಕ್ರಮ ಖಂಡಿಸಿ ಕಂಗನಾ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದ್ದರು.

  English summary
  Bollywood Actress Kangana Ranaut returns to Mumbai with Y plus security.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X