For Quick Alerts
  ALLOW NOTIFICATIONS  
  For Daily Alerts

  ಜೋ ಬೈಡನ್ 'ಗಜಿನಿ' ಇದ್ದಂತೆ ಎಂದ ಬಾಲಿವುಡ್ ನಟಿ ಕಂಗನಾ ರಣಾವತ್

  |

  ಅಮೆರಿಕಾದ ನೂತನ ಅಧ್ಯಕ್ಷರಾಗಿರುವ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವಿಶ್ವದ ಹಲವು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಸಹ ಜೋ ಬೈಡನ್ ಕುರಿತು ಟ್ವೀಟ್ ಮಾಡಿದ್ದು, 'ಬೈಡನ್ ಗಜಿನಿ ಇದ್ದಂತೆ' ಎಂದಿದ್ದಾರೆ.

  ಅಮೆರಿಕಾ ಚುನಾವಣೆ ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಕಂಗನಾ ''ಬೈಡನ್ ಓರ್ವ ಗಜಿನಿ, ಪ್ರತಿ ಐದು ನಿಮಷಕ್ಕೂ ತನ್ನ ಡೇಟಾ ಕ್ರ್ಯಾಶ್ ಆಗುತ್ತದೆ'' ಎಂದು ಟೀಕಿಸಿದ್ದಾರೆ.

  ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

  ''ಬೈಡನ್‌ಗೆ ನೀಡಿದ ಎಲ್ಲ ಔಷಧಿಗಳು ಪರಿಣಾಮಕಾರಿಯಾಗಿಲ್ಲ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇದು ಕೆಲಸ ಮಾಡಲ್ಲ. ನಿಶ್ಚಿತವಾಗಿ ಕಮಲಾ ಹ್ಯಾರೀಸ್ ನಿಜವಾದ ಅಧ್ಯಕ್ಷೆ'' ಎಂದು ಪರೋಕ್ಷವಾಗಿ ಅಭಿಪ್ರಾಯ ಪಟ್ಟಿದ್ದಾರೆ.

  ಕಮಲಾ ಹ್ಯಾರೀಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆ ಆಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಂಗನಾ ''ಒಬ್ಬ ಮಹಿಳೆ ಉತ್ತುಂಗಕ್ಕೆ ಏರಿದಾಗ, ಇತರೆ ಮಹಿಳೆಯರಿಗೆ ಆಕೆ ದಾರಿಯಾಗುತ್ತಾಳೆ'' ಎಂದು ಟ್ವೀಟ್ ಮಾಡಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಶುಭಾಶಯ

  ''ಅಮೆರಿಕಾ ಐತಿಹಾಸಿಕ ಫಲಿತಾಂಶದ ಮೂಲಕ ಮಾತನಾಡಿದೆ. ಪ್ರತಿಯೊಂದು ಮತವೂ ಎಷ್ಟು ಪ್ರಮುಖ. ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರದರ್ಶಿಸಲು ಮತ ಚಲಾಯಿಸಿದ ಪ್ರತಿಯೊಬ್ಬರನ್ನು ನಾನು ಶ್ಲಾಘಿಸುತ್ತೇನೆ. ಯುಎಎಸ್‌ನ ಈ ಚುನಾವಣೆಗೆ ಸಾಕ್ಷಿಯಾಗಿರುವುದು ಅದ್ಭುತ. ಅಧ್ಯಕ್ಷ ಬೈಡನ್ ಹಾಗೂ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಶುಭಾಶಯ'' ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.

  English summary
  America president election result: Bollywood actress Kangana Ranaut calls Joe Biden is Ghajini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X