Don't Miss!
- Sports
ಶತಕದ ಮೇಲೆ ಶತಕ ಬಾರಿಸುತ್ತಿರುವ ಪೂಜಾರ: ಇಂಗ್ಲೆಂಡ್ನಲ್ಲಿ ತನ್ನ ಮತ್ತೊಂದು ಮುಖ ತೋರಿಸಿದ ಭಾರತೀಯ!
- News
ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
'ಧಾಕಡ್' ರಿಲೀಸ್ಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದ ಕಂಗನಾ ರನೌತ್
ಬಾಲಿವುಡ್ ಕ್ಷೀನ್ ಕಂಗನಾ ರನೌತ್ ನಟಿಸಿರುವ ಬಹುನೀರಿಕ್ಷಿತ ಸಿನಿಮಾ 'ಧಾಕಡ್' ಮೇ 20 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಹಿನ್ನಲೆ ಕಂಗನಾ ರನೌತ್ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್ಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾ ಬಿಡುಗಡೆಯಾಗಬೇಕಿದೆ.
ಇಂದು (ಮೇ 16 ) ಬುದ್ದ ಪೂರ್ಣಿಮೆ ಇರುವ ಹಿನ್ನಲೆ ನಟಿ ಕಂಗನಾ ರನೌತ್ ಆಂಧ್ರಪ್ರದೇಶದ ಪ್ರತಿಷ್ಟಿತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬಸ್ಥರು ಹಾಗೂ 'ಧಾಕಡ್' ಸಿನಿಮಾದ ನಿರ್ಮಾಪಕರಾದ ದೀಪಕ್ ಮುಕುಟ್, ಪತ್ನಿ ಕೃಷ್ಣ ಮುಕಟ್ ಕೂಡ ದೇಗುಲಕ್ಕೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
'ಧಾಕಡ್' ಸಿನಿಮಾದ ಮೇಲೆ ಕಂಗನಾ ಹೆಚ್ಚಿನ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಮಿಂಚಿರುವ ನಟಿ ಕಂಗನಾ ಈಗಾಗಲೇ ಟ್ರೈಲರ್ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
'ಧಾಕಡ್' ಸಿನಿಮಾ ಇನ್ನು ಎರಡೂ ಮೂರು ದಿನಗಳಲ್ಲಿ ಥಿಯೇಟರ್ನಲ್ಲಿ ಅಬ್ಬರಿಸಲಿದೆ. ಈ ಹಿನ್ನಲೆ ಕಂಗನಾ ಪ್ರಚಾರದ ನಡವೆಯೂ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದಾರೆ. ನಟಿ ಕಂಗನಾ ದೇಗುಲಕ್ಕೆ ಆಗಮಿಸುವ ಹಿನ್ನಲೆ ದೇಗುಲದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು. ಕುಟುಂಬ ಸಮೇತರಾಗಿ ಬಂದು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸದ್ಯ ಬಾಲಿವುಡ್ ನಟಿ ಕಂಗನಾ ತಿಮ್ಮಪ್ಪನ ಸನ್ನಿಧಾನಕ್ಕೆ ಅಗಮಿಸಿರುವ ಪೋಟೊಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇತ್ತೀಚಿಗಷ್ಟೇ 'ಧಾಕಡ್' ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಈ ಟ್ರೈಲರ್ ನೋಡಿದ ಸಲ್ಮಾನ್ ಖಾನ್ ಚಿತ್ರತಂಡಕ್ಕೆ ಶುಭಕೋರಿದ್ದರು. ಅಲ್ಲದೆ ಟ್ರೈಲರ್ನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇನ್ನು ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ 'ಧಾಕಡ್' ಚಿತ್ರದ ಹಾಡು ನೋಡಿ ಟ್ವೀಟರ್ನಲ್ಲಿ ಚಿತ್ರತಂಡಕ್ಕೆ ವಿಶ್ ಮಾಡಿದ್ದರೂ ತದ ನಂತರ ಆ ಟ್ವೀಟ್ನ್ನು ಡಿಲೀಟ್ ಮಾಡಿದ್ದರು. ಈ ಬಗ್ಗೆ ಕಂಗನಾ ಕೂಡ ಬೇಸರ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಇತ್ತೀಚಿಗೆ ದಕ್ಷಿಣ ಭಾರತದ ಸಿನಿಮಾಗಳ ಆರ್ಭಟದಿಂದ ಬಾಲಿವುಡ್ ಕಂಗಲಾಗಿದೆ. ಬಾಲಿವುಡ್ನ ಯಾವುದೇ ಸಿನಿಮಾಗಳು ಕಲೆಕ್ಷನ್ ಮಾಡುತ್ತಿಲ್ಲ. ಹೀಗಾಗಿ ನಟಿ ಕಂಗನಾ ಅಭಿನಯಿಸಿರುವ 'ಧಾಕಡ್' ಸಿನಿಮಾವಾದರೂ ಹೆಚ್ಚಿನ ಕಲೆಕ್ಷನ್ ಮಾಡುತ್ತಾ ಅಂತ ಕಾದು ನೋಡಬೇಕಿದೆ.