ನನಗೆ ವಯಸ್ಸಾಗಿದೆ, ಯಂಗ್ ಆಗಿ ಕಾಣಲು ಆ ಇಂಜೆಕ್ಷನ್ ಬೇಡ ಎಂದ ಕರೀನಾ!

ನಟಿ ಕರೀನಾ ಕಪೂರ್ ಮದುವೆ ಆಗಿ ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಬೊ ನಟಿಸಿರುವ 'ದಿ ಬಕ್ಕಿಂಗ್ಯಾಮ್ ಮರ್ಡರ್ಸ್' ಸಿನಿಮಾ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾ ಪ್ರಚಾರದಲ್ಲಿ ಚೆಲುವೆ ಬ್ಯುಸಿಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕರೀನಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಮುಖ್ಯವಾಗಿ ತಮ್ಮ ವಯಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ರೋಲ್ ವಿಚಾರ ಪ್ರಸ್ತಾಪ ಆದಾಗ ಬೆಬೋ ಈ ಬಗ್ಗೆ ಚರ್ಚಿಸಿದ್ದಾರೆ. ಸೆಲೆಬ್ರೆಟಿಗಳು ಅಂದ್ರೆ ಸದಾ ಚೆಂದವಾಗಿ ಕಾಣಬೇಕು ಎಂದು ಕೆಲವರು ಭಾವಿಸುತ್ತಾರೆ. ಅದೇ ಕಾರಣಕ್ಕೆ ನಟ- ನಟಿಯರು ಸೌಂದರ್ಯದಲ್ಲಿ ಕೊಂಚ ಬದಲಾವಣೆ ಕಂಡರೂ ಕಾಮೆಂಟ್ ಮಾಡುತ್ತಾರೆ.

Actress Kareena kapoor say no to Botox What Is Botox

ನಟ-ನಟಿಯರು ಕೂಡ ಮನುಷ್ಯರೇ ಅಲ್ಲವೇ? ಅವರಿಗೂ ವಯಸ್ಸಾಗುತ್ತದೆ. ಮುಖದ ಮೇಲೆ ಸುಕ್ಕು ಬರುತ್ತದೆ. ಕೂದಲು ಬೆಳ್ಳಗಾಗುತ್ತದೆ. ಕೆಲವರು ಮಾತ್ರ ಇದನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿ ಕೆಲ ಚಿಕಿತ್ಸೆಗಳನ್ನು ಪಡೆಯುವುದುಂಟು. ಆದರೆ ಈ ಬಗ್ಗೆ ಕರೀನಾ ಇದೀಗ ಮಾತನಾಡಿದ್ದಾರೆ. ನನಗೆ ಅಂತಹ ಚಿಕಿತ್ಸೆಗಳ(ಬೋಟಾಕ್ಸ್) ಅಗತ್ಯವಿಲ್ಲ, ನಾನು ನಾನಾಗಿಯೇ ಇರ್ತೀನಿ ಎಂದಿದ್ದಾರೆ.

ಇತ್ತೀಚೆಗೆ ಕರೀನಾ ಹಾಕುವ ಫೋಟೊಗಳನ್ನು ನೋಡಿ ಕೆಲವರು ಆಂಟಿ, ಅಜ್ಜಿ ಎಂದು ಕಾಮೆಂಟ್ ಮಾಡಿದ್ದರು. ಇಂತಹ ಟ್ರೋಲ್ ಬಗ್ಗೆ ಸಂದರ್ಶನದಲ್ಲಿ ಕರೀನಾ ಮಾತನಾಡಿದ್ದಾರೆ. ಇದೇ ವಿಚಾರದ ಬಗ್ಗೆ ಮಾತನಾಡಿರುವ ಕರೀನಾ "ವಯಸ್ಸು ಸೌಂದರ್ಯದ ಒಂದು ಭಾಗ. ಸೌಮದರ್ಯ ಅಂದರೆ ಮುಖದ ಮೇಲಿನ ನೆರಿಗೆ, ಸುಕ್ಕಿನ ವಿರುದ್ಧ ಹೋರಾಡುವುದು ಅಥವಾ ಕಿರಿಯರಾಗಿ ಕಾಣಲು ಪ್ರಯತ್ನಿಸುವುದಿಲ್ಲ, ಇದು ನೀವು ಇರುವ ವಯಸ್ಸನ್ನು ಅಪ್ಪಿಕೊಳ್ಳುವುದು ಮತ್ತು ಪ್ರೀತಿಸುವುದು" ಎಂದಿದ್ದಾರೆ.

Actress Kareena kapoor say no to Botox What Is Botox

"ನನಗೆ 44 ವರ್ಷ. ಬೊಟೊಕ್ಸ್ ಅಥವಾ ಯಾವುದೇ ಕಾಸ್ಮೆಟಿಕ್ ಚಿಕಿತ್ಸೆ ಬೇಕು ಎಂದು ನನಗೆ ಅನ್ನಿಸುವುದಿಲ್ಲ. ನನ್ನ ಪತಿಗೆ ನಾನು ಸೆಕ್ಸಿಯಾಗಿ ಕಾಣುತ್ತೇನೆ. ಸ್ನೇಹಿತರು ನಾನು ಅದ್ಭುತವಾಗಿ ಕಾಣುತ್ತಿದ್ದೇನೆ ಎನ್ನುತ್ತಾರೆ. ನನ್ನ ಸಿನಿಮಾಗಳು ಗೆಲ್ಲುತ್ತಿವೆ ಅಷ್ಟು ಸಾಕು. ನಾನು ನನ್ನ ವಯಸ್ಸನ್ನು ಪ್ರತಿಬಿಂಬಿಸುವಂತಹ ಮತ್ತು ಅದರ ಬಗ್ಗೆ ಹೆಮ್ಮೆಪಡುವ ಪಾತ್ರಗಳನ್ನು ನಿರ್ವಹಿಸುತ್ತೇನೆ. ನಾನು ಹೇಗಿದ್ದೇನೋ ಅದೇ ರೀತಿ ಜನರು ನನ್ನನ್ನು ನೋಡಬೇಕೆಂದು ಮತ್ತು ಅದನ್ನು ಪ್ರಶಂಸಿಸಬೇಕೆಂದು ನಾನು ಬಯಸುತ್ತೇನೆ" ಎಂದು ಕರೀನಾ ಹೇಳಿದ್ದಾರೆ.

ಅಷ್ಟಕ್ಕೂ ಕರೀನಾ ಕಪೂರ್ ಹೇಳಿದ ಬೊಟೊಕ್ಸ್ ಚಿಕಿತ್ಸೆ ಎಂದರೆ ಏನು ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ. ತಮ್ಮ ವಯಸ್ಸನ್ನು ಮರೆಮಾಚಲು, ಸದಾ ಯಂಗ್ ಆಗಿ ಕಾಣಲು ಸಾಕಷ್ಟು ಸೌಂದರ್ಯವರ್ಧಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದೇ ರೀತಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲವರು ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ವಿವಿಧ ರೀತಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬೊಟೊಕ್ಸ್ ಚಿಕಿತ್ಸೆ ಹೆಚ್ಚು ಜನಪ್ರಿಯತೆ ಪಡೆದಿದೆ.

ಬೊಟೊಕ್ಸ್ ಎಂದರೆ ಚುಚ್ಚುಮದ್ದು ಬಳಳಿ ನೀಡುವ ಚಿಕಿತ್ಸೆ. ಮುಖದ ಮೇಲಿನ ನರಿಗೆ, ಸುಕ್ಕು ಹಾಗೂ ಚರ್ಮ ಜೋತು ಬೀಳುವುದನ್ನು ತಪ್ಪಿಸಲು ಈ ಚಿಕಿತ್ಸೆ ಇದೆ. ನಿರ್ದಿಷ್ಟ ಸ್ನಾಯುಗಳಿಗೆ ಚುಚ್ಚುಮದ್ದು ನೀಡಿ ತ್ವಚೆಗೆ ವಿಶ್ರಾಂತಿ ಹಾಗೂ ಮೃದುತ್ವ ನೀಡಲಾಗುತ್ತದೆ. ಶ್ರೀಮಂತರು, ಕೆಲ ಸಿನಿಮಾ ತೆರೆಯರು ಇಂತಹ ಚಿಕಿತ್ಸೆ ಪಡೆದು ಚೆಂದವಾಗಿ ಕಾಣುವ ಪ್ರಯತ್ನ ಮಾಡುತ್ತಾರೆ.

ಹಲವು ಸಿನಿಮಾಗಳಲ್ಲಿ ನಟಿಸಿದರೂ ಹಾಲಿವುಡ್‌ಗೆ ಯಾಕೆ ಹೋಗಲಿಲ್ಲ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ನನಗೆ ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸುವ ಅವಶ್ಯಕತೆ ಇದೆ ಎನಿಸಲೇ ಇಲ್ಲ. ಬಾಲಿವುಡ್‌ನಲ್ಲಿ ನಾನು ಅಂದುಕೊಂಡಿದ್ದನ್ನೆಲ್ಲಾ ಸಾಧಿಸಿದ್ದೀನಿ. ಕರಿಯರ್‌ನಲ್ಲಿ ಸಿಕ್ಕ ಯಶಸ್ಸಿನ ಬಗ್ಗೆ ತೃಪ್ತಿಯಿದೆ. ನಾನು ಹೊಂದಿದ್ದ ಗುರಿಗಳನ್ನು ಸಾಧಿಸಿದ್ದೀನಿ. ನನ್ನ ಪರಿಶ್ರಮವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅಷ್ಟು ಸಾಕು. ಹಾಲಿವುಡ್ ಸಿನಿಮಾ ಯಾಕೆ? ಎಂದು ಕರೀನಾ ವಿವರಿಸಿದ್ದಾರೆ.

More from Filmibeat

English summary
Why Kareena kapoor Say no to Botox treatment;
Read more about: kareena kapoor bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X