ಆ ಹೀರೋಗಳ ಜೊತೆ ರೋಮಾನ್ಸ್ ಎಂದರೆ ವಾಂತಿ ಬರುತ್ತಿತ್ತು

By Rajendra

ಬೆಳ್ಳಿತೆರೆಯ ಮೇಲೆ ಹೀರೋ ಹೀರೋಯಿನ್ ರೋಮಾಂಟಿಕ್ ಸನ್ನಿವೇಶಗಳು ಪ್ರೇಕ್ಷಕರನ್ನು ಪರವಶಗೊಳಿಸುತ್ತಿರುತ್ತವೆ. ಆ ರೀತಿಯ ಸನ್ನಿವೇಶಗಳಿಗೆ ಜೀವ ತುಂಬಿದರೆ ಸಿನಿಮಾ ಬಹುತೇಕ ಹಿಟ್ ಆದಂತೆ. ಆದರೆ ತೆರೆಯ ಮೇಲೆ ಕಾಣಿಸುವುದೆಲ್ಲಾ ನಿಜವಲ್ಲ.

ವೃತ್ತಿ ಧರ್ಮದ ಕಾರಣ ಇಷ್ಟವಿಲ್ಲದಿದ್ದರೂ ನಿರ್ದೇಶಕ ಮಹಾಶಯ ಹೇಳಿದಂತೆ ಕೇಳಬೇಕಾಗುತ್ತದೆ. ಈ ರೀತಿಯ ಸನ್ನಿವೇಶಗಳನ್ನು ಮಾಡಬೇಕಾದರೆ ಕೊಂಚ
ಪೇಚಾಟ, ಪರದಾಟ, ಕಸಿವಿಸಿ ತಪ್ಪಿದ್ದಲ್ಲ ಬಿಡಿ. ಆದರೂ ವಿಧಿಯಿಲ್ಲದೆ ಮಾಡಬೇಕಾಗುತ್ತದೆ. [ಕತ್ರಿನಾ, ರಣಬೀರ್ ಈಗ ಒಂದೇ ಗೂಡಿನ ಹಕ್ಕಿಗಳು]

Actress Katrina Kaif
ಈ ಬಗ್ಗೆ ಬಾಲಿವುಡ್ ಹಾಟ್ ಬೆಡಗಿ ಕತ್ರಿನಾ ಕೈಫ್ ತಡವಾಗಿಯಾದರೂ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಸನ್ನಿವೇಶಗಳಲ್ಲಿ ಅಭಿನಯಿಸಬೇಕಾದರೆ ತಮಗೆ ಎದುರಾಗ ಕಹಿ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಹೆಚ್ಚಾಗಿ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಕತ್ರಿನಾ ಕೈಫ್ ಏನು ಹೇಳಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

"ಕೆಲವರು ಹೀರೋಗಳು ಸ್ನಾನ ಮಾಡದೆಯೇ ಸೆಟ್ ಗೆ ಬಂದು ಮೇಕಪ್ ಮಾಡಿಕೊಳ್ಳುತ್ತಿದ್ದರು. ರಾತ್ರಿ ಪಾರ್ಟಿಗಳಲ್ಲಿ ಗಡದ್ದಾಗಿ ತಿಂದು ಕುಡಿದು ಬೆಳಗ್ಗೆ ಎದ್ದು ಸ್ನಾನವನ್ನೂ ಮಾಡದೆ ಬರುತ್ತಿದ್ದರು. ಅಂತಹ ಹೀರೋಗಳಿಂದ ಬರುತ್ತಿದ್ದ ದುರ್ನಾತ ಸಹಿಸಲಸಾಧ್ಯವಾಗುತ್ತಿತ್ತು. ಕನಿಷ್ಠಪಕ್ಷ ಯಾವುದಾದರೂ ಡಿಯೋಡರೆಂಟ್ ಸಹ ಬಳಸುತ್ತಿರಲಿಲ್ಲ..." ಎಂದಿದ್ದಾರೆ.

ಆ ರೀತಿಯ ಹೀರೋಗಳ ಜೊತೆಗೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಪಾಲ್ಗೊಳ್ಳಬೇಕಾದರೆ ವಾಂತಿ ಬರುವಂತಾಗುತ್ತಿತ್ತು. ಶೂಟಿಂಗ್ ಎಂಬ ಕಾರಣಕ್ಕೆ ಆ ನರಕವನ್ನೂ ಸಹಿಸಿಕೊಳ್ಳುತ್ತಿದ್ದೆ. ಆದರೆ ದಕ್ಷಿಣದ ಹೀರೋಗಳು ಮಾತ್ರ ಆ ರೀತಿ ಇರಲಿಲ್ಲ. ಸೆಟ್ಸ್ ನಲ್ಲಿ ಅವರು ಫ್ರೆಶ್ ಆಗಿ, ನೀಟಾಗಿ ಇರುತ್ತಿದ್ದರು ಎಂದಿದ್ದಾರೆ.

ಆದರೆ ವಾಂತಿ ಬರುವಷ್ಟು ಕೆಟ್ಟದಾಗಿ ಸೆಟ್ಸ್ ಗೆ ಬರುತ್ತಿದ್ದ ನಟರು ಯಾರು ಎಂಬುದನ್ನು ಮಾತ್ರ ಕತ್ರಿನಾ ಕೈಫ್ ಬಾಯಿಬಿಟ್ಟು ಹೇಳಿಲ್ಲ. ಆ ಕೆಟ್ಟ ನಟರು ಯಾರಿರಬಹುದು ಎಂಬ ಊಹೆಗಳು ಬಾಲಿವುಡ್ ವಲಯದಲ್ಲಿ ಶುರುವಾಗಿವೆ. (ಏಜೆನ್ಸೀಸ್)

More from Filmibeat

English summary
Actress Katrina Kaif has made shocking statements in this regards and said, few Bollywood heroes don't even take bath before joining the shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X