ಕುದುರೆ ಮೇಲಿಂದ ಬಿದ್ರೂ ಕ್ಯಾರೆ ಅನ್ಲಿಲ್ಲ ಕತ್ರಿನಾ ಕೈಫ್
ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಸದ್ಯಕ್ಕೆ 'ಫಿತೂರ್' ಚಿತ್ರದಲ್ಲಿ ಅಭಿನಯಿಸುತ್ತಾ ಬಿಜಿಯಾಗಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಕತ್ರಿನಾ ಕೈಫ್ ಗೆ ಆದಿತ್ಯ ರಾಯ್ ಕಪೂರ್ ಜೊತೆಯಾಗಿದ್ದು, ತೆರೆಯ ಮೇಲೆ ಇವರಿಬ್ಬರ ರೊಮ್ಯಾನ್ಸ್ ನೋಡಲು ಚಿತ್ರಪ್ರೇಮಿಗಳು ಕಾದಿದ್ದಾರೆ.
ಚಿತ್ರದಲ್ಲಿ ಇಬ್ಬರ ನಡುವಿನ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಕುದುರೆ ಸವಾರಿ ಸನ್ನಿವೇಶಗಳು ಇದ್ದು, ಕತ್ರಿನಾಗೆ ಕುದುರೆ ಸವಾರಿ ಮಾಡಲು ಬಹಳ ಕಷ್ಟಪಡುತ್ತಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. [ಕತ್ರಿನಾ ಕೈಫ್ ನಾಪತ್ತೆ, ಎಲ್ಲಿ ಹೋದರು ಏನಾದರು?]

ಕತ್ರಿಕಾ ಕೈಫ್ ಕುದುರೆ ಸವಾರಿ ಮಾಡುತ್ತಿರಬೇಕಾದರೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ ಚಿತ್ರತಂಡ ಕೂಡಲೆ ಅವರನ್ನು ಹಿಡಿದುಕೊಂಡ ಕಾರಣ ಭಾರಿ ಅನಾಹುತದಿಂದ ಅವರು ಪಾರಾಗಿದ್ದಾರೆ. ಇನ್ನೊಬ್ಬರಾಗಿದ್ದರೆ ಆ ದಿನದ ಶೂಟಿಂಗ್ ಕ್ಯಾನ್ಸಲ್ ಮಾಡಿ ಹಾಯಾಗಿ ಮನೆಯಲ್ಲಿ ರಗ್ಗು ಹೊದ್ದುಕೊಂಡು ಮಲಗುತ್ತಿದ್ದರು.
ಆದರೆ ಕತ್ರಿಕಾ ಕೈಫ್ ಮಾತ್ರ ಕೊಂಚವೂ ಧೃತಿಗೆಡದೆ ಮತ್ತೆ ಕುದುರೆ ಸವಾರಿಗೆ ಅಣಿಯಾಗಿದ್ದಾರೆ. ಚಿತ್ರತಂಡಕ್ಕೂ ಇದರಿಂದ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಕಡೆಗೂ ಅಂದುಕೊಂಡಂತೆ ಆ ಸನ್ನಿವೇಶಗನ್ನು ಪೂರ್ಣಗೊಳಿಸಿದ್ದಾರೆ ಕತ್ರಿನಾ.
ಅಭಿಷೇಕ್ ಕಪೂರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಕತ್ರಿನಾ ಕೈಫ್ ಅವರ ಕುದುರೆ ಸವಾರಿ ಸನ್ನಿವೇಶಗಳು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿವೆ ಎನ್ನುತ್ತದೆ ಚಿತ್ರತಂಡ. ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ ವೇಳೆಗೆ 'ಫಿತೂರ್' ಚಿತ್ರ ತೆರೆ ತರಲು ಪ್ಲಾನ್ ಮಾಡಲಾಗಿದೆ.


Click it and Unblock the Notifications