ತೆಲುಗು ನಟಿ ಕಾವ್ಯಾ ತಾಪರ್ ಮುಂಬೈನಲ್ಲಿ ಬಂಧನ

ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಯುವ ನಟಿ ಕಾವ್ಯಾ ತಾಪರ್ ಅನ್ನು ನಿನ್ನೆ ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 17ರಂದು ತಡರಾತ್ರಿ ಕಾವ್ಯಾ ತಾಪರ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೆ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದರು. ಸ್ಥಳೀಯರ ದೂರಿನ ಆಧಾರದ ಮೇಲೆ ಸ್ಥಳಕ್ಕೆ ಬಂದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದರು.

ಮಹಿಳಾ ಪೊಲೀಸ್ ಒಬ್ಬರ ಕೊರಳು ಪಟ್ಟಿ ಹಿಡಿದು ಜಗಳ ಮಾಡಿದ ಕಾವ್ಯಾ ತಾಪರ್ ಮಹಿಳಾ ಪೊಲೀಸ್‌ ಮೇಲೆ ಹಲ್ಲೆಗೆ ಸಹ ಯತ್ನಿಸಿದ್ದಾರೆ. ಹಾಗಾಗಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

Actress Kavya Thapar Arrested By Mumbai Police

ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣ, ಅಪಘಾತ ಮಾಡಿದ ಪ್ರಕರಣ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದ್ದು ಹೀಗೆ ಹಲವು ದೂರುಗಳನ್ನು ಕಾವ್ಯಾ ವಿರುದ್ಧ ದಾಖಲಿಸಲಾಗಿದೆ. ಸೆಕ್ಷನ್ 353, 504, 427 ಗಳನ್ನು ಕಾವ್ಯಾ ಮೇಲೆ ಹೂಡಲಾಗಿದೆ.

ಮುಂಬೈನವರೇ ಆಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು ಹಾಗೂ ಒಂದು ತಮಿಳು ಸಿನಿಮಾದಲ್ಲಿ. 2013 ರಲ್ಲಿ 'ತತ್ಕಾಲ್' ಹೆಸರಿನ ಕಿರು ಸಿನಿಮಾದ ಮೂಲಕ ನಟನೆ ಆರಂಭಿಸಿದ ಕಾವ್ಯಾ ಬಳಿಕ ತೆಲುಗಿನಲ್ಲಿ 'ಈ ಮಾಯ ಪೇರೇಮಿಟೊ', ತಮಿಳಿನಲ್ಲಿ 'ಮಾರ್ಕೆಟ್ ರಾಜ ಎಂಬಿಬಿಎಸ್', ತೆಲುಗಿನಲ್ಲಿ 'ಒಕ ಮಿನಿ ಕಥಾ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳಿನ ವಿಜಯ್ ಆಂಟೊನಿ ಎದುರು ಹೊಸ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Kavya Thapar arrested by Mumbai police. She was driving her car on the influence of alcohol. She also argued and tried to hit police officers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X