twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ರಾಜಕಾರಣಿ ವಿರುದ್ಧ ಪೋಸ್ಟ್‌: ನಟಿ ಬಂಧನ

    |

    ಹಿರಿಯ ರಾಜಕಾರಣಿಯೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಮರಾಠಿ ನಟಿಯೊಬ್ಬರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

    ಮರಾಠಿ ನಟಿ ಕೇತಕಿ ಚಿತಾಲೆ, ಮಹರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಹಾಗಾಗಿ ನಟಿಯ ವಿರುದ್ಧ ದೂರು ದಾಖಲಾಗಿತ್ತು, ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ನಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಟಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    ನಟಿ ಕೇತಕಿ ಚಿತಾಲೆ, ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಎನ್‌ಸಿಪಿ ಪಕ್ಷದ ಹಿರಿಯ ಮುಖಂಡ ಶರದ್ ಪವಾರ್ ಬಗ್ಗೆ ಅವಹೇಳನಕಾರಿ ಕವಿತೆಯೊಂದನ್ನು ಪ್ರಕಟಿಸಿದ್ದರು. ನಟಿಯ ವಿರುದ್ಧ ರಾಜ್ಯದ ಹಲವೆಡೆ ಎನ್‌ಸಿಪಿ ಕಾರ್ಯಕರ್ತರು ದೂರು ನೀಡಿದ್ದರು. ಹಾಗಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಥಾಣೆ ಪೊಲೀಸರು ಮೇ 15 ರಂದು ನಟಿಯನ್ನು ಬಂಧಿಸಿದ್ದರು.

    Actress Ketaki Chitale Arrested For Defaming Politician Sharad Pawar On Social Media

    ನಟಿಯ ವಿರುದ್ಧ ಐಪಿಸಿ ಸೆಕ್ಷನ್ 500, 501 ಹಾಗೂ 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಟಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಗೊರೆಗಾಂವ್ ಪೊಲಿಸ್ ಅಧಿಕಾರಿಗಳು, ನಟಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಹಾಗಾಗಿ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಇನ್ನಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ.

    ನಟಿ ಕೇತಕಿ, ಎನ್‌ಸಿಪಿ ಮುಖಂಡ ಶರದ್ ಪವಾರ್ ವಿರುದ್ಧ ಮಾಡಿರುವ ಪೋಸ್ಟ್‌ನಲ್ಲಿ ಸಂತ ತುಕಾರಾಮ್ ಹೆಸರನ್ನು ಅವಹೇಳನಕಾರಿಯಾಗಿ ಬಳಸಿದ ಬಗ್ಗೆಯೂ ಪ್ರತ್ಯೇಕ ದೂರುಗಳು ದಾಖಲಾಗಿವೆ. ವರ್ಕರಿ ಸಮುದಾಯದ ನಿತಿನ್ ಮೋರೆ ಎಂಬುವರು ನಟಿ ಕೇತಕಿ ವಿರುದ್ಧ ದೂರು ನೀಡಿದ್ದಾರೆ. ಸಂತ ತುಕಾರಾಂ ದೇಹು ಸಂತಾನಂನ ಮುಖ್ಯಸ್ಥರೊಬ್ಬರು ಸಹ ನಟಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.

    Actress Ketaki Chitale Arrested For Defaming Politician Sharad Pawar On Social Media

    ಶರದ್ ಪವಾರ್‌ ಬಗ್ಗೆ ಬರೆದಿರುವ ಅವಹೇಳನಕಾರಿ ಕವಿತೆಯ ಕೊನೆಯಲ್ಲಿ 'ತುಕಾ ಮಹಾನೆ' ಎಂದು ಕೇತಕಿ ಬಳಸಿದ್ದಾರಂತೆ. ಸಂತ ತುಕಾರಾಮರು ತಮ್ಮ ದೋಹೆಗಳ ಕೊನೆಯಲ್ಲಿ ಹೀಗೆ ತುಕಾ ಮಹಾನೆ ಎಂದು ಬರೆದಿದ್ದಾರೆ. ಅವಹೇಳನಕಾರಿ ಕವಿತೆಗೆ ತುಕಾರಾಮರ ಸಾಲನ್ನು ಬಳಸಿದ್ದರ ಬಗ್ಗೆ ದೂರು ನೀಡಲಾಗಿದೆ.

    ಶರದ್ ಪವಾರ್, ಮಹರಾಷ್ಟ್ರದ ಹಿರಿಯ ರಾಜಕಾರಣಿ ಆಗಿದ್ದು ಮಹರಾಷ್ಟ್ರದ ಮಾಜಿ ಸಿಎಂ ಸಹ ಆಗಿದ್ದರು. ಜೊತೆಗೆ ಕೇಂದ್ರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಮಹರಾಷ್ಟ್ರ ರಾಜ್ಯ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    English summary
    Marathi actress Ketaki Chitale arrested for defaming politician Sharad Pawar. She has been sent to judicial custody for 14 days.
    Thursday, May 19, 2022, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X