10ನೇ ತರಗತಿ ಓದುತ್ತಿರುವಾಗಲೇ ಲವ್ವಲ್ಲಿ ಬಿದ್ದಿದ್ರಂತೆ ಈ ನಟಿ
ಬಾಲಿವುಡ್ ನಟಿ ಕೈರಾ ಅಡ್ವಾನಿ ಸದ್ಯ 'ಕಬೀರ್ ಸಿಂಗ್' ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್ ಸಮಯದಲ್ಲಿ ಕೈರಾ ಒಂದು ಶಾಕಿಂಗ್ ಸದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಲವ್ವಲ್ಲಿ ಬಿದ್ದು ಒದ್ದಾಡಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೌದು, ಕೈರಾಗೆ 10ನೇ ತರಗತಿ ಓದುತ್ತಿರುವಾಗ್ಲೆ ಒಬ್ಬ ಹುಡುಗನ ಜೊತೆ ಲವ್ ಆಗಿತ್ತಂತೆ. ಮೊದಲ ಬಾಯ್ ಫ್ರೆಂಡ್ ಯಾರು ಅಂತ ಮಾತ್ರ ಕೈರಾ ಹೇಳಲಿಲ್ಲಾ. ಆದ್ರೆ ಲವ್ ಸ್ಟೋರಿಯನ್ನು ಮಾತ್ರ ಹೇಳಿಕೊಂಡಿದ್ದಾರೆ. ಲವ್ ಮಾಡೋಕೆ ಶುರುಮಾಡಿದ ಸ್ವಲ್ಪ ದಿನಗಳಲ್ಲೆ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದರಂತೆ.
ದಿಢೀರನೆ ಲವ್ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣ ಕೂಡ ಹೇಳಿದ್ದಾರೆ. ಆಗಿನ್ನು 10ನೇ ತರಗತಿ ಹಾಗಾಗಿ ಓದಿನ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಪ್ರೀತಿಗೆ ಎಳ್ಳು ನೀರು ಬಿಟ್ಟು ಓದಿನ ಕಡೆ ಗಮನ ಹರಿಸಿದ್ರಂತೆ. ಈ ಬಗ್ಗೆ ಧೈರ್ಯವಾಗಿಯೇ ಹೇಳಿಕೊಂಡಿದ್ದಾರೆ ನಟಿ ಕೈರಾ. ಅಷ್ಟಕ್ಕು ಕೈರಾ 'ಕಬೀರ್ ಸಿಂಗ್' ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಚಿತ್ರದ 'ರೀಮೇಕ್ ಕಬೀರ್' ಸಿಂಗ್ ಸಿನಿಮಾ. ಶಾಹಿದ್ ಕಪೂರ್ ಕಬೀರ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹಾಟ್ ದೃಶ್ಯಗಳಿವೆ. ಇಬ್ಬರು ಸಹ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 'ಕಬೀರ್ ಸಿಂಗ್' ಇದೇ ತಿಂಗಳು 21ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











