ಹೆಚ್ಚು ಜನ ಹಿಂದಿ ಮಾತಾಡ್ತಿರೋದ್ರಿಂದ ದಕ್ಷಿಣದ ಸಿನಿಮಾ ರಿಮೇಕ್ ಆಗ್ತಿವೆ- ಕಿಯಾರಾ ಅಡ್ವಾಣಿ

ಬಾಲಿವುಡ್‌ನಲ್ಲಿ ಈಗೆನಿದ್ದರೂ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ ಜೋರಾಗಿದೆ. 'ಕೆಜಿಎಫ್‌ 2', 'RRR', 'ಪುಷ್ಪ' ಸಿನಿಮಾಗಳು ಹಿಂದಿಗೆ ಡಬ್‌ ಆಗಿ ಬಾಲಿವುಡ್‌ ಬಾಕ್ಸ್‌ ಆಫೀಸ್‌ನ್ನು ಕೊಳ್ಳೆ ಹೊಡೆದಿವೆ. ಇದಿಷ್ಟೇ ಅಲ್ಲದೆ ದಕ್ಷಿಣ ಭಾರತದ ಕೆಲವು ಹಿಟ್‌ ಸಿನಿಮಾಗಳು ಹಿಂದಿ ರಿಮೇಕ್‌ ಕೂಡ ಆಗುತ್ತಿದೆ. ಈ ಬಗ್ಗೆ ಬಾಲಿವುಡ್‌ನ ಕೆಲ ನಟ ನಟಿಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್‌ಗೆ ದಕ್ಷಿಣ ಭಾರತದಲ್ಲಿ ಹಿಟ್‌ ಆದ ಸಿನಿಮಾಗಳನ್ನು ರಿಮೇಕ್‌ ಮಾಡುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ. ಈ ಬಗ್ಗೆ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

'ಲಸ್ಟ್ ಸ್ಟೋರಿಸ್‌', 'ಕಬೀರ್ ಸಿಂಗ್', 'ಶೇರ್ಷಾ' ಮೊದಲಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಕಿಯಾರಾ, ರಿಮೇಕ್ ಸಿನಿಮಾ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಬಾಲಿವುಡ್‌ಗೆ ಇತ್ತೀಚಿಗೆ ದಕ್ಷಿಣ ಭಾರತದ ಸಿನಿಮಾಗಳು ರಿಮೇಕ್‌ ಆಗುತ್ತಿರುವ ಕುರಿತು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. "ಸಿನಿಮಾ ಕಥೆಗಾಗಿ ನಾವು ದಕ್ಷಿಣ ಭಾರತವನ್ನು ಅವಲಂಬಿತವಾಗಿದ್ದೇವೆ ಎಂಬುದು ತಪ್ಪು. ಯಾವುದೇ ಭಾಷೆಯಲ್ಲಿ ಮಾಡಿದ ಸಿನಿಮಾ ಇರಬಹುದು. ಅದು ಒಂದು ಭಾಷೆಗೆ ಮಾತ್ರ ಸೀಮಿತವಾಗಿರುತ್ತದೆ. ಹಿಂದಿಯನ್ನು ನಮ್ಮ ದೇಶದಲ್ಲಿ ಹೆಚ್ಚು ಜನರು ಮಾತನಾಡುತ್ತಾರೆ. ಹೀಗಾಗಿ ಉತ್ತಮ ಸಿನಿಮಾಗಳನ್ನು ಹಿಂದಿಯಲ್ಲಿ ಮಾಡಿದರೆ ಆ ಸಿನಿಮಾಗಳು ಜನರನ್ನು ತಲುಪುತ್ತವೆ. ಹೀಗಾಗಿ ರಿಮೇಕ್‌ ಮಾಡಲಾಗುತ್ತಿದೆ." ಎಂದು ಕಿಯಾರಾ ಹೇಳಿಕೊಂಡಿದ್ದಾರೆ.

Actress Kiara Advani Says She’d Think Twice to Do Remakes

ಅಲ್ಲದೆ ಈ ಹಿಂದೆ ವಿಜಯ ದೇವರಕೊಂಡ ನಟಿಸಿದ್ದ ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ 'ಅರ್ಜುನ್ ರೆಡ್ಡಿ' ಸಿನಿಮಾ ಕೂಡ ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. ಆ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಆದರೆ ಆಗ ಒಟಿಟಿಯ ವಿಸ್ತಾರ ಈಗಿನಷ್ಟು ಇರಲಿಲ್ಲ. ಆದರೆ, ಇಂದು ಒಟಿಟಿ ಪ್ಲಾಟ್‌ ಫಾರ್ಮ್‌ ವ್ಯಾಪ್ತಿ ಹೆಚ್ಚಿದೆ. ಈ ಸಂದರ್ಭದಲ್ಲಿ ರಿಮೇಕ್‌ ಮಾಡುವಾಗ ಎರಡು ಬಾರಿ ಯೋಚಿಸುತ್ತೇನೆ. ನಾನು ಸಾಕಷ್ಟು ರಿಮೇಕ್ ಚಿತ್ರಗಳನ್ನು ನೋಡುತ್ತೇನೆ. ಇತರ ಭಾಷೆಯಲ್ಲಿ ಬಹಳಷ್ಟು ಚಿತ್ರಗಳನ್ನು ನೋಡುತ್ತೇನೆ. ರಿಮೇಕ್ ಮಾಡುವಾಗ ಪಾತ್ರದಲ್ಲಿ ಕೆಲ ಬದಲಾವಣೆ ಮಾಡುತ್ತಾರೆ ಎಂದರೆ ನಾನು ಅಂತಹ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಕಿಯಾರಾ ಹೇಳಿದ್ದಾರೆ.

Actress Kiara Advani Says She’d Think Twice to Do Remakes

ಇನ್ನು ಕಿಯಾ ಬ್ರೇಕಪ್ ವಿಚಾರದಲ್ಲೂ ಸುದ್ದಿಯಲ್ಲಿದ್ದರು. ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂಬುದು ಸುದ್ದಿಯಲ್ಲಿತ್ತು. ಆದರೆ ಇತ್ತೀಚಿಗೆ ಅವರಿಬ್ಬರು ಬ್ರೇಕ್ ಆಪ್ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಬಾಲಿವುಡ್‌ ಅಂಗಳದಲ್ಲಿ ಹರಿದಾಡ್ತಿದೆ. ಸದ್ಯ ಇದಕ್ಕೆಲ್ಲಾ ತಲೆ ಕೆಡೆಸಿಕೊಳ್ಳದ ಕಿಯಾರಾ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಗಮನ ಹರಿಸಿದ್ದಾರೆ. ತಮ್ಮ ಮುಂದಿನ 'ಭೂಲ್ ಭುಲಯ್ಯ 2' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಕಿಯಾರಾ ಕೂಡ ಸಿನಿಮಾ ಪ್ರಚಾರವನ್ನು ಆರಂಭಿಸಿದ್ದಾರೆ. ಮೇ 20 ರಂದು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಲಿದೆ. ಇದರ ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕಿಯಾರಾ ನಟಿಸಲಿದ್ದು, ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Kiara Advani also spoke about whether or not the Hindi film industry is backing on the South film industry while revealing why she would think twice before doing any remakes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X