ರಿಯಲ್ ಲೈಫ್ ಲವ್ ನಲ್ಲಿ 'ಗೂಗ್ಲಿ' ಗರ್ಲ್ ಕೃತಿ ಕರಬಂಧ

Recommended Video

ರಿಯಲ್ ಲೈಫ್ ಲವ್ ನಲ್ಲಿ 'ಗೂಗ್ಲಿ' ಗರ್ಲ್ ಕೃತಿ ಕರಬಂಧ | Kriti Kharbanda | FILMIBEAT KANNADA

'ಗೂಗ್ಲಿ' ಸಿನಿಮಾದ ಮೂಲಕ ಅದೆಷ್ಟೋ ಹುಡುಗರನ್ನು ಲವ್ ನಲ್ಲಿ ಬೀಳಿಸಿದ್ದ ನಟಿ ಕೃತಿ ಕರಬಂಧ ಈಗ ತಾವೇ ಲವ್ ಸ್ಟೋರಿ ಶುರು ಮಾಡಿದ್ದಾರೆ. ಅಂದಹಾಗೆ, ಇದು ಸಿನಿಮಾದ ಲವ್ ಸ್ಟೋರಿ ಅಲ್ಲ, ರಿಯಲ್ ಲವ್ ಸ್ಟೋರಿ.

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಪ್ರವೇಶ ಮಾಡಿದ್ದ ಕೃತಿ ಈಗ ಬಾಲಿವುಡ್ ನಟನ ಜೊತೆಗೆ ಪ್ರೇಮಕಥೆ ಶುರು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ತಮ್ಮ ಜೊತೆಗೆ ಸಿನಿಮಾ ಮಾಡಿದ್ದ, ನಟ ಪುಲ್ಕಿಟ್ ಸಾಮ್ರಾಟ್ ಜೊತೆಗೆ ಕೃತಿ ಪ್ರೇಮಗೀತೆ ಹಾಡುತ್ತಿದ್ದಾರಂತೆ.

Actress Kriti Kharbanda and Are Pulkit Samrat Dating Each Other ?

ಪುಲ್ಕಿಟ್ ಸಾಮ್ರಾಟ್ ಹಾಗೂ ಕೃತಿ ಕರಬಂಧ ಮೊದಲು 'ವೀರೇ ಕೀ ವೆಡ್ಡಿಂಗ್' ಸಿನಿಮಾದಲ್ಲಿ ಒಂದಾಗಿದ್ದರು. ಈ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಈ ಚಿತ್ರದ ನಂತರ ಅವರ ನಡುವಿನ ಆತ್ಮೀಯತೆ ಇನ್ನೂ ಹೆಚ್ಚಾಗಿದೆಯಂತೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಇದೆ.

ಇದೀಗ 'ಪಾಗಲ್ ಪಂತಿ' ಎಂಬ ಸಿನಿಮಾದ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ. ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಇಬ್ಬರನ್ನು ನೋಡಿದವರಿಗೆ ಲವ್ ಮಾಡುತ್ತಿರುವ ಸುಳಿವು ಸಿಕ್ಕಿದೆ. ಪ್ರತಿ ದಿನ ಕೃತಿ ಮೇಕಪ್ ಕೋಣೆಗೆ ಪುಲ್ಕಿಟ್ ಹೂ, ಚಾಕಲೇಟ್ ಕಳುಹಿಸುತ್ತಾರಂತೆ. ಇದೆಲ್ಲದರಿಂದ ಈ ಜೋಡಿ ಲವ್ ಮಾಡುತ್ತಿದ್ದಾರೆ ಎನ್ನುವ ಟಾಕ್ ಬಾಲಿವುಡ್ ತುಂಬ ಕೇಳಿ ಬಂದಿದೆ.

Actress Kriti Kharbanda and Are Pulkit Samrat Dating Each Other ?

ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಕೃತಿ ನಂತರ 'ಚಿರು' ಚಿತ್ರದಿಂದ ಕನ್ನಡಕ್ಕೆ ಬಂದರು. ಆ ನಂತರ 'ಪ್ರೇಮ್ ಅಡ್ಡ', 'ಗೂಗ್ಲಿ', 'ಸೂಪರ್ ರಂಗ', 'ಬೆಳ್ಳಿ' ಚಿತ್ರಗಳಲ್ಲಿ ನಟಿಸಿದರು. 2016 ರಲ್ಲಿ ಬಾಲಿವುಡ್ ಸಿನಿಮಾ ಶುರು ಮಾಡಿದರು.

More from Filmibeat

English summary
Actress Kriti Kharbanda and Are Pulkit Samrat Dating Each Other ?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X