'ಪುಲ್ಕಿತ್ ಜೊತೆ ಡೇಟಿಂಗ್ ನಲ್ಲಿದ್ದೀನಿ' ಎಂದು ಬಹಿರಂಗ ಪಡಿಸಿದ 'ಗೂಗ್ಲಿ' ಸುಂದರಿ
'ಗೂಗ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದ ನಟಿ ಕೃತಿ ಕರಬಂಧ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಮುದ್ದು ಮುಖದ ಈ ಸುಂದರಿ ಮುದ್ದಾದ ಅಭಿನಯದ ಮೂಲಕ ಯುವಕರ ನಿದ್ದೆ ಗೆಡಿಸಿದ್ದ ಚೆಲುವೆ, ಈಗ ತಾನೆ ನಿದ್ದೆ ಗೆಟ್ಟಿದ್ದಾರೆ. ಬಾಲಿವುಡ್ ನಟನಿಗೆ ಕ್ಲೀನ್ ಬೋಲ್ಡ್ ಆಗಿರುವ ಕೃತಿ ಸಧ್ಯದಲ್ಲೇ ಹಸೆಮಣೆ ಏರುವ ಸುಳುವು ನೀಡಿದ್ದಾರೆ.
ಅಂದಹಾಗೆ ಕೃತಿ ಮನಸ್ಸು ಕದ್ದ ಆ ಚೋರ ನಟ ಪುಲ್ಕಿತ್ ಸಾಮ್ರಾಟ್. ಕಳೆದ ಒಂದು ವರ್ಷದಿಂದ ಕೃತಿ ಪುಲ್ಕಿತ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಇಬ್ಬರು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಆದರೀಗ ನಟಿ ಕೃತಿ ಈ ಬಗ್ಗೆ ಮಾತನಾಡಿದ್ದಾರೆ. ಪುಲ್ಕಿತ್ ಜೊತೆ ಡೇಟಿಂಗ್ ನಿಲ್ಲಿ ಇರುವುದು ನಿಜ ಎಂದು ಹೇಳಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕೃತಿ, "ಹರಿದಾಡುತ್ತಿರುವ ಸುದ್ದಿ ರೂಮರ್ಸ್ ಆಲ್ಲ ನಿಜ. ನಾನು ಮತ್ತು ಪುಲ್ಕಿತ್ ಇಬ್ಬರು ಡೇಟಿಂಗ್ ನಲ್ಲಿ ಇದ್ದೀವಿ. ನಾನು ಒಬ್ಬರ ಜೊತೆ ಡೇಟಿಂಗ್ ನಲ್ಲಿ ಇದ್ದೀನಿ ಎನ್ನುವುದು ಮೊದಲು ನನ್ನ ತಂದೆ-ತಾಯಿಗೆ ಗೊತ್ತಾಗಬೇಕು. ಕೆಲವು ಸಲ ಗೊತ್ತಾಗಲು ಐದು ವರ್ಷ ಹಿಡಿಯ ಬಹುದು. ಆದರೆ ನನ್ನ ವಿಷಯದಲ್ಲಿ ಐದು ತಿಂಗಳು ಸಾಕಾಯಿತು. ನಾನು ಈಗ ತುಂಬ ಸಂತೋಷವಾಗಿದ್ದೀನಿ" ಎಂದು ಹೇಳಿಕೊಂಡಿದ್ದಾರೆ.

ಈ ಮೊದಲು ಕೃತಿ ಡೇಟಿಂಗ್ ವಿಚಾರ ಕೇಳಿದಾಗ ಸಿಟ್ಟಿಗೆದ್ದಿದ್ದರು. ಸುಮ್ಮನೆ ರೂಮರ್ಸ್ ಹಬ್ಬಿಸುತ್ತಿದ್ದಾರಾ ಎಂದು ರೇಗಾಡಿದ್ದರು. ಆದರೀಗ ಅವರೆ ಒಪ್ಪಿಕೊಂಡಿದ್ದಾರೆ. ಅಂದ್ಹಾಗೆ ಪುಲ್ಕಿತ್ ಸಾಮ್ರಾಟ್ ಗೆ ಈಗಾಗಲೆ ಮದುವೆಯಾಗಿ ಡೈಮೋರ್ಸ್ ಕೂಡ ಮಾಡಿಕೊಂಡಿದ್ದಾರೆ.
2014ರಲ್ಲಿ ಪುಲ್ಕಿತ್ ಶ್ವೇತಾ ರೋಹಿರಾ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ ಒಂದೇ ವರ್ಷದಲ್ಲಿ ಬೇರೆಬೇರೆಯಾಗಿದ್ದಾರೆ. ನಂತರ ನಟಿ ಯಾಮಿ ಗೌತಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೀಗ ಕೃತಿ ಕರಬಂಧ ಜೊತೆ ಡೇಟಿಂಗ್ ನಲ್ಲಿ ಇರುವುದು ಬಹಿರಂಗವಾಗಿದೆ.


Click it and Unblock the Notifications











