ಸಿನಿಮಾ ಗೆದ್ದ ಖುಷಿಯಲ್ಲಿ ದುಬಾರಿ ಕಾರ್ ಖರೀದಿಸಿದ ಪ್ರಭಾಸ್ ನಾಯಕಿ

ಸಿನಿಮಾ ನಟ-ನಟಿಯರು ಸಾಲು-ಸಾಲಾಗಿ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಕನ್ನಡದಲ್ಲಿ ಹಾಗೂ ಬಾಲಿವುಡ್‌ನಲ್ಲಿ ಹಲವು ನಟ-ನಟಿಯರು ಹೊಸ ಕಾರುಗಳನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಇದೀಗ ನಟಿ ಕೃತಿ ಸಾನನ್ ಹೊಸ, ಭಾರಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

ಕೃತಿ ಸಾನನ್ ನಟಿಸಿರುವ 'ಮೀಮಿ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ. ಸಿನಿಮಾ ಬಗ್ಗೆ ಬಹಳಷ್ಟು ಮಂದಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಈಗಾಗಲೇ ಹಲವು ಭಾಷೆಗಳಿಗೆ ರೀಮೇಕ್ ಹಕ್ಕುಗಳು ಸಹ ಮಾರಾಟವಾಗಿವೆ.

'ಮೀಮಿ' ಸಿನಿಮಾವು ಕೃತಿ ಸಾನನ್ ಅವರೇ ಮುಖ್ಯಪಾತ್ರದಲ್ಲಿದ್ದ ಸಿನಿಮಾ. ಹಾಗಾಗಿ ಸಿನಿಮಾ ಗೆದ್ದ ಖುಷಿಯಲ್ಲಿ ದುಬಾರಿ ಬೆಲೆಯ ಐಶಾರಾಮಿ ಕಾರನ್ನು ಕೃತಿ ಸಾನನ್ ಖರೀದಿಸಿದ್ದು, ಕಾರಿನೊಂದಿಗೆ ಮುಂಬೈನಲ್ಲಿ ಸುತ್ತಾಟ ನಡೆಸಿದ್ದಾರೆ ಕೃತಿ ಸಾನನ್.

ಕೃತಿ ಸಾನನ್, ಮರ್ಸಿಡೀಸ್ ಸಂಸ್ಥೆಯ ದುಬಾರಿ ಹಾಗೂ ಐಶಾರಾಮಿ ಕಾರಾದ 'ಮೈಬಾಹ್' ಅನ್ನು ಖರೀದಿಸಿದ್ದಾರೆ. ಮರ್ಸಿಡೀಸ್ ಮೈಬಾಹ್‌ ಜಿಎಲ್‌ಎಸ್ 600 ಎಸ್‌ಯುವಿ ಮಾದರಿಯ ಕಾರನ್ನು ಕೃತಿ ಸಾನನ್ ಖರೀದಿಸಿದ್ದಾರೆ. ಈ ದುಬಾರಿ ಕಾರು ಕೆಲವು ತಿಂಗಳ ಹಿಂದಷ್ಟೆ ಭಾರತದಲ್ಲಿ ಲಾಂಚ್ ಆಗಿದೆ.

ಕಾರಿನ ಬೆಲೆ ಎಷ್ಟು?

ಕಾರಿನ ಬೆಲೆ ಎಷ್ಟು?

ಮರ್ಸಿಡೀಸ್ ಮೈಬಾಹ್‌ ಜಿಎಲ್‌ಎಸ್ 600 ಎಸ್‌ಯುವಿ ಮಾದರಿ ಕಾರಿನ ಎಕ್ಸ್ ಶೋರೂಂ ಬೆಲೆಯೇ 2.43 ಕೋಟಿ ಇದೆ ಭಾರತದಲ್ಲಿ. ಇದಕ್ಕೆ ರಸ್ತೆ ತೆರಿಗೆ ಇನ್ನಿತರೆ ತೆರಿಗೆ, ವಿಮೆ ಎಲ್ಲವೂ ಸೇರಿ ಸುಮಾರು 4 ಕೋಟಿ ಆಗುತ್ತದೆ. ಇಷ್ಟು ದೊಡ್ಡ ಮೊತ್ತ ತೆತ್ತು ನಟಿ ಕೃತಿ ಸಾನನ್ ಕಾರನ್ನು ಖರೀದಿಸಿದ್ದಾರೆ.

ಕೃತಿ ಖರೀದಿಸಿರುವ ಕಾರಿನ ವೈಶಿಷ್ಟತೆಗಳು

ಕೃತಿ ಖರೀದಿಸಿರುವ ಕಾರಿನ ವೈಶಿಷ್ಟತೆಗಳು

ಕೃತಿ ಸಾನನ್ ಖರೀದಿಸಿರುವ ಕಾರು ಸಾಮಾನ್ಯದ್ದಲ್ಲ ಬಹಳ ವಿಶೇಷತೆಗಳು ಕಾರಿನಲ್ಲಿವೆ. ವಿಮಾನದ ಫರ್ಸ್ಟ್ ಕ್ಲಾಸ್‌ ಮಾದರಿಯ ಸೀಟು ವ್ಯವಸ್ಥೆ, ಮಿನಿ ಸ್ಪಾ ಕಾರಿನಲ್ಲಿದೆ. ಫ್ರಿಡ್ಜ್, ಅತ್ಯುತ್ತಮ ಮ್ಯೂಸಿಕ್ ಸಿಸ್ಟಂ, ಹೈ ಎಂಡ್ ತಂತ್ರಜ್ಞಾನ, ಅದ್ಭುತ ವೇಗ ಎಲ್ಲವೂ ಕಾರಿನ ವಿಶೇಷತೆಗಳು. ಪ್ರಮುಖ ವಿಶೇಷತೆಯೆಂದರೆ ಈ ಕಾರು ಡ್ಯಾನ್ಸ್ ಮಾಡುತ್ತದೆ. ಹೌದು, ಈ ಕಾರಿನಲ್ಲಿ ಆಯ್ಕೆಯೊಂದಿದ್ದು, ಅದನ್ನು ಆರಿಸಿಕೊಂಡರೆ ಕಾರು ತನ್ನಂತಾನೆ ಕುಣಿಯುತ್ತದೆ.

'ಆದಿಪುರುಷ್‌' ನಲ್ಲಿ ಕೃತಿ ಸಾನನ್ ನಾಯಕಿ

'ಆದಿಪುರುಷ್‌' ನಲ್ಲಿ ಕೃತಿ ಸಾನನ್ ನಾಯಕಿ

ಕೃತಿ ಸಾನನ್ ಕೈಲಿ ಹಲವು ಸ್ಟಾರ್ ನಟರ ಸಿನಿಮಾಗಳಿವೆ. ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಎಂದೇ ಕರೆಯಲಾಗುತ್ತಿರುವ 'ಆದಿಪುರುಷ್‌'ನಲ್ಲಿ ಪ್ರಭಾಸ್‌ ಜೊತೆಗೆ ನಾಯಕಿಯಾಗಿ ಕೃತಿ ಸಾನನ್ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ 'ಬಚ್ಚನ್ ಪಾಂಡೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವರುಣ್ ಧವನ್ ಜೊತೆಗೆ 'ಬೇಡಿಯಾ' ಹೆಸರಿನ ಆಕ್ಷನ್ ಸಿನಿಮಾದಲ್ಲಿ ಕೃತಿ ಸಾನನ್ ನಟಿಸುತ್ತಿದ್ದಾರೆ. 2014 ಮಹೇಶ್ ಬಾಬು ನಟಿಸಿದ್ದ 'ನೇನೊಕ್ಕಡಿನೆ' ತೆಲುಗು ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಕೃತಿ ಈವರೆಗೆ ತೆಲುಗು ಹಾಗೂ ಹಿಂದಿಯಲ್ಲಿ 11 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

ಚಂದನವನದ ಹಲವು ನಟ-ನಟಿಯರು ಹೊಸ ಕಾರು ಖರೀದಿಸಿದ್ದಾರೆ

ಚಂದನವನದ ಹಲವು ನಟ-ನಟಿಯರು ಹೊಸ ಕಾರು ಖರೀದಿಸಿದ್ದಾರೆ

ಇನ್ನು ಇತ್ತೀಚಿನ ದಿನಗಳಲ್ಲಿ ತೆಲುಗಿನ ನಟ ಜೂ.ಎನ್‌ಟಿಆರ್ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಇದೇ ಕಾರು ದರ್ಶನ್‌ ಹಾಗೂ ಪುನೀತ್ ರಾಜ್‌ಕುಮಾರ್ ಬಳಿಯೂ ಇದೆ. ಕನ್ನಡದಲ್ಲೂ ಹಲವು ನಟ-ನಟಿಯರು ಹೊಸ ಕಾರುಗಳನ್ನು ಖರೀದಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಆಡಿ ಕಂಪೆನಿ ಕಾರು ಕೊಂಡಿದ್ದಾರೆ. ಕಿರುತೆರೆ ನಟಿ ಮೇಘಶೆಟ್ಟಿ ಬಿಎಂಡಬ್ಲು ಹಾಗೂ ಎಂಜಿ ಹೆಕ್ಟರ್ ಕಾರು ಖರೀದಿಸಿದ್ದಾರೆ. ಶೈನ್ ಶೆಟ್ಟಿ ಸಹ ಬಿಎಂಡಬ್ಲು ಕಾರು ಖರೀದಿಸಿದ್ದಾರೆ. ನಿರ್ದೇಶಕ ಸಂತೋಶ್ ಆನಂದ್ ರಾಮ್ ಬಿಎಂಡಬ್ಲು 520 ಡಿ ಕಾರು ಖರೀದಿಸಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಶಶಿ ಮಿನಿ ಕೂಪರ್ ಖರೀದಿಸಿದ್ದಾರೆ. 'ಕನ್ನಡತಿ' ಕಿರಣ್ ರಾಜ್ ಮರ್ಸಿಡಿಜ್ ಬೆಂಜ್‌ ಕಾರು ಖರೀದಿಸಿದ್ದಾರೆ. ಚಂದು ಗೌಡ ಆಡಿ ಕಾರು ಖರೀದಿಸಿದ್ದಾರೆ.

More from Filmibeat

English summary
Actress Kriti Sanon purchased Mercedes Maybach gls 600 car worth nearly 4 crore rs. She is acting in 'Aadipurush' movie with Prabhas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X