For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ 90ರ ದಶಕದ 'ಗೋಲ್ಡನ್ ಜೋಡಿ'

  By ಸೋನು ಗೌಡ
  |

  ಹಿಂದೊಂದು ಕಾಲದಲ್ಲಿ ತೆರೆ ಮುಂದೆ ಮಾತ್ರವಲ್ಲದೇ, ತೆರೆ ಹಿಂದೆ ಕೂಡ ಜೋಡಿ ಹಕ್ಕಿಗಳಾಗಿದ್ದ ನಟ ಸಂಜಯ್ ದತ್ ಮತ್ತು ನಟಿ ಮಾಧುರಿ ದೀಕ್ಷಿತ್ ಅವರು ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ.

  90ರ ದಶಕದಲ್ಲಿ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿ, ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ಈ 'ಬಂಗಾರದ ಜೋಡಿ'ಯನ್ನು ಮತ್ತೆ ತೆರೆಯ ಮೇಲೆ ಒಟ್ಟಾಗಿ ಸೇರಿಸುವ ಸಾಹಸಕ್ಕೆ ಕೈ ಹಾಕಿದ್ದು, ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು.[ಮಾಧ್ಯಮದ ಮುಂದೆ ಜೈಲಿನ ಅನುಭವ ಬಿಚ್ಚಿಟ್ಟ ಸಂಜಯ್ ದತ್]

  'ಖಳನಾಯಕ್', 'ಸಾಜನ್', 'ಖತರೋಂಕಿ ಕಿಲಾಡಿ', 'ಮಹಾನತಾ', 'ಠಾಣೇದಾರ್' ಮುಂತಾದ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ಈ ಜೋಡಿಯನ್ನು, ಸುಮಾರು 20 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ವಿನೋದ್ ಅವರು ಕರೆ ತರಲಿದ್ದಾರೆ.

  'ಮಾರ್ಕೋ ಭಾವು' (Marco Bhau) ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಲಿದ್ದು, ಸಂಜಯ್ ದತ್ ಅವರ ಎಮೋಷನಲ್ ಜರ್ನಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.

  ಈಗಾಗಲೇ ಸಿನಿಮಾ ನಿರ್ಮಾಪಕರು ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿ ಈ ಚಿತ್ರದ ಬಗ್ಗೆ ಮಾತಾಡಿದ್ದು, ಅವರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಬರೀ ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ಆಗೂ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಅಷ್ಟರಲ್ಲಿ ಸಂಜು ಬಾಬಾ ಕೇಸ್-ಕೋರ್ಟ್ ಅಂತ ಸಿಕ್ಕಿ ಹಾಕಿಕೊಂಡ ಕಾರಣ ಮಾಧುರಿ ಅವರು, ಅವರಿಂದ ದೂರವಾಗಿದ್ದರು.[ಸ್ಯಾಂಡಲ್ ವುಡ್ ಗೆ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್?]

  ಇದೀಗ ಹಲವು ಕಾಲಗಳ ಬಳಿಕ ಮತ್ತೆ ತೆರೆಯ ಮೇಲೆ ಮಿನುಗಲು ಸಜ್ಜಾಗುತ್ತಿದ್ದಾರೆ. ಇನ್ನು ಇವರಿಬ್ಬರನ್ನು ಮಗದೊಮ್ಮೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕೂಡ ಸಾಕಷ್ಟು ಕುತೂಹಲದಿಂದ ಕಾದಿದ್ದಾರೆ.

  English summary
  Actress Madhuri Dixit and Actor Sanjay Dutt who last worked together in Mahaanta (1997), will reportedly star in Vidhu Vinod Chopra’s next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X