For Quick Alerts
  ALLOW NOTIFICATIONS  
  For Daily Alerts

  48 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಮಾಧುರಿ ದೀಕ್ಷಿತ್

  |

  ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅಂದಿಗೂ ಇಂದಿಗೂ ಬಹುಬೇಡಿಕೆಯ ನಟಿ. ಭಾರತೀಯ ಚಿತ್ರರಂಗದಲ್ಲಿ ಸದಾ ಸಕ್ರಿಯರಾಗಿರುವ ಮಾಧುರಿ ದೀಕ್ಷಿತ್‌ ಮುಂಬೈನ ಲೋವರ್ ಪರೇಲ್ ಪ್ರದೇಶದಲ್ಲಿ 48 ಕೋಟಿ ರೂಪಾಯಿ ಮೌಲ್ಯದ ಹೊಸ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

  ಇಂಡಿಯಾ ಬುಲ್ಸ್‌ ಬ್ಲೂ ಪ್ರಾಜೆಕ್ಟ್‌ನವರ ಈ ಆಸ್ತಿಯನ್ನು ಸೆಪ್ಟೆಂಬರ್ 28, 2022 ರಂದು ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಅವರ ಹೆಸರಿಗೆ ನೋಂದಾಯಿಸಲಾಗಿದೆ. ಸಮುದ್ರದ ಸಮೀಪ ಹಾಗೂ ಉತ್ತಮ ವೀವ್ ಹೊಂದಿರುವ ಮಾಧುರಿ ದೀಕ್ಷಿತ್‌ ಅವರ ಹೊಸ ಅಪಾರ್ಟ್‌ಮೆಂಟ್‌ ಈಜುಕೊಳಗಳು, ಫುಟ್‌ಬಾಲ್ ಕೋರ್ಟ್‌, ಜಿಮ್, ಸ್ಪಾ ಮತ್ತು ಕ್ಲಬ್‌ನಂತಹ ಸೌಲಭ್ಯಗಳನ್ನು ಹೊಂದಿದೆ ಎಂದು ವರದಿಯಾಗಿದೆ.

  Madhuri Dixit: 12 ಲಕ್ಷಕ್ಕೆ ಬಾಡಿಗೆ ಪಡೆದ ಮಾಧುರಿ ದೀಕ್ಷಿತ್ ಅಪಾರ್ಟ್ಮೆಂಟ್‌ನಲ್ಲಿ ಏನೇನಿದೆ?Madhuri Dixit: 12 ಲಕ್ಷಕ್ಕೆ ಬಾಡಿಗೆ ಪಡೆದ ಮಾಧುರಿ ದೀಕ್ಷಿತ್ ಅಪಾರ್ಟ್ಮೆಂಟ್‌ನಲ್ಲಿ ಏನೇನಿದೆ?

  ಮಾಧುರಿ ದೀಕ್ಷಿತ್ ಅವರ ಅಪಾರ್ಟ್‌ಮೆಂಟ್‌ 53ನೇ ಮಹಡಿಯಲ್ಲಿದ್ದು, 5,384 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂದು ದಾಖಲೆ ಪತ್ರದಲ್ಲಿ ತೋರಿಸಲಾಗಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಏಳು ಕಾರ್ ಪಾರ್ಕಿಂಗ್‌ ವ್ಯವಸ್ಥೆ ಸಹ ಇದೆಯಂತೆ.

  ಈ ಹಿಂದೆ ಮಾಧುರಿ ದೀಕ್ಷಿತ್ ಮುಂಬೈನಲ್ಲಿ ಮೂರು ವರ್ಷಗಳ ಕಾಲ ತಿಂಗಳಿಗೆ 12.5 ಲಕ್ಷ ರೂಪಾಯಿಯಂತೆ ಬಾಡಿಗೆಗೆ ಮನೆ ತೆಗೆದುಕೊಂಡಿದ್ದರು. ಸದ್ಯ 48 ಕೋಟಿ ರೂಪಾಯಿ ಮೌಲ್ಯದ ಹೊಸ ಅಪಾರ್ಟ್‌ಮೆಂಟ್‌ ಖರೀದಿಸಿರುವ ನಟಿ ಮಾಧುರಿ ದೀಕ್ಷಿತ್‌ ತಾವು ಖರೀದಿಸಿರುವ ಹೊಸ ಅಪಾರ್ಟ್ಮೆಂಟ್‌ ಬಗ್ಗೆ ಸದ್ಯ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

  ಶ್ರೀದೇವಿ ಉಟ್ಟಿದ್ದ ಸೀರೆಗಳ ಹರಾಜು: 'ಇಂಗ್ಲಿಷ್‌-ವಿಂಗ್ಲಿಷ್‌' ಸಿನಿತಂಡದಿಂದ ಹೀಗೊಂದು ಸಮಾಜ ಸೇವೆ!ಶ್ರೀದೇವಿ ಉಟ್ಟಿದ್ದ ಸೀರೆಗಳ ಹರಾಜು: 'ಇಂಗ್ಲಿಷ್‌-ವಿಂಗ್ಲಿಷ್‌' ಸಿನಿತಂಡದಿಂದ ಹೀಗೊಂದು ಸಮಾಜ ಸೇವೆ!

  ಇನ್ನು ಮಾಧುರಿ ದೀಕ್ಷಿತ್‌ ಅಭಿನಯದ ಮೊದಲ ಓಟಿಟಿ ಚಿತ್ರ ಮಜಾ ಮಾ ನಾಳೆ(ಅಕ್ಟೋಬರ್‌ 6)ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ನಟಿ ಮಾಧುರಿ ದೀಕ್ಷಿತ್‌ ಉತ್ತಮ ತಾಯಿ ಹಾಗೂ ಗೃಹಿಣಿ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಮಾಧುರಿ ದೀಕ್ಷಿತ್‌ ಅವರ ಚಿತ್ರಕ್ಕಾಗಿ ಅವರ ಅಪಾರ ಅಭಿಮಾನಿಗಳು ಕಾತುರರಾಗಿದ್ದಾರೆ.

  ಮಜಾ ಮಾ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಧುರಿ ದೀಕ್ಷಿತ್‌ ಮಾತನಾಡಿದ್ದಾರೆ. ನಾನು ಯಾವಗಲೂ ನನಗೆ ಸವಾಲು ಹಾಕುವಂತಹ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಮೊದಲ ಓಟಿಟಿ ಚಿತ್ರದಲ್ಲೂ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನನಗೆ ನಾನು ಸವಾಲು ಹಾಕಿಕೊಳ್ಳುತ್ತೇನೆ. ಹೀಗಾಗಿ ನಾನು ಎನನ್ನಾದರೂ ಮಾಡಲು ಸಾಧ್ಯವಾಗುತ್ತಿದೆ. ನೀವು ಯಾವುದನನ್ನಾದರೂ ಸವಾಲಿನ ರೀತಿ ತೆಗೆದುಕೊಂಡರೆ ಅದು ನಿಮ್ಮನ್ನು ಮೈಲುಗಳ ದೂರ ನಡೆಸುತ್ತದೆ ಎಂದರು.

  ಉತ್ತರ ದಕ್ಷಿಣ ಒಂದಾದರೆ ₹3000 ರಿಂದ 4000 ಕೋಟಿ ಗಳಿಕೆ ಖಚಿತ ಎಂದ ಸಲ್ಮಾನ್ ಖಾನ್!ಉತ್ತರ ದಕ್ಷಿಣ ಒಂದಾದರೆ ₹3000 ರಿಂದ 4000 ಕೋಟಿ ಗಳಿಕೆ ಖಚಿತ ಎಂದ ಸಲ್ಮಾನ್ ಖಾನ್!

  ಆನಂದ್‌ ತಿವಾರಿ ನಿರ್ದೇಶನದ ಮಜಾ ಮಾ ಚಿತ್ರವು ಅಕ್ಟೋಬರ್‌ 6, 2022ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಮಾಧುರಿ ದೀಕ್ಷಿತ್, ಗಜರಾಜ್ ರಾವ್,ಋತ್ವಿಕ್ ಭೌಮಿಕ್,ಸೃಷ್ಟಿ ಶ್ರೀವಾಸ್ತವಮತ್ತುಬರ್ಖಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಜಾ ಮಾ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್‌ ಆಗಿದ್ದು, ಒಂದಿಷ್ಟು ಕಾಮಿಡಿ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡಲು ಮಜಾ ಮಾ ತಂಡ ಸಿದ್ಧವಾಗಿದೆ.

  English summary
  Bollywood Actress Madhuri Dixit buys Rs 48 crore worth luxurious flat in Mumbai.
  Wednesday, October 5, 2022, 18:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X