ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್: ಲೋಕಸಭೆಯಲ್ಲ...ಈ ಚುನಾವಣೆ ಮೇಲೆ ಬಾಲಿವುಡ್ ನಟಿಯ ಕಣ್ಣು!
ರಾಜಕೀಯ ಮತ್ತು ಸಿನಿಮಾ ರಂಗಕ್ಕೆ ಬಿಡಿಸಲಾರದ ನಂಟಿದೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಯಾವುದೇ ಚಿತ್ರರಂಗವಾದರು ಒಂದಲ್ಲ ಒಂದು ರೀತಿಯಲ್ಲಿ ರಾಜಕಾರಣದ ಜೊತೆಗೆ ಸಂಬಂಧ ಬೆಳೆಸಿಕೊಂಡಿರುತ್ತದೆ. ನಟ ನಟಿಯರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಮುಖ್ಯಮಂತ್ರಿ ಹುದ್ದೆಗೇರಿದವರನ್ನು ನೋಡಿದ್ದೇವೆ. ಈಗ ಮತ್ತೊಬ್ಬ ಖ್ಯಾತ ನಟಿ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಸಕತ್ ಟ್ರೆಂಡಿಂಗ್‌ನಲ್ಲಿದೆ. ಬಿಟೌನ್ ಮಾತ್ರವಲ್ಲದೆ, ರಾಜಕೀಯ ರಂಗದಲ್ಲೂ ಈ ಸುದ್ದಿ ಸಂಚಲನ ಮೂಡಿಸಿದೆ. ಈಗಾಗಲೇ ಸಿನಿಮಾ ರಂಗದ ಹಲವರು ರಾಜಕೀಯದಲ್ಲಿದ್ದು, ನಟಿ ಮಾಧುರಿ ದೀಕ್ಷಿತ್ ಕೂಡ ರಾಜಕಾರಣಿಯಾಗಲಿದ್ದಾರೆ.

ರಾಜಕೀಯಕ್ಕೆ ನಟಿ ಮಾಧುರಿ ದೀಕ್ಷಿತ್
90 ರ ದಶಕದ ನಟಿ ಮಾಧುರಿ ದೀಕ್ಷಿತ್, ಮದುವೆಯ ನಂತರ ಸಿನಿಮಾಗಳಿಂದಲೇ ದೂರವಿದ್ದವರು. ಬಳಿಕ ಒಂದೆಂದೆ ಚಿತ್ರಗಖ ಮೂಲಕ ಕಂಬ್ಯಾಕ್ ಮಾಡಿ ಮತ್ತೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದರ ನಡುವೆ ಚುನಾವಣೆ ಬರುತ್ತಿದ್ದು, 2024ರ ಲೋಕಸಭೆ ಚುನಾವಣೆ ಮುಂಚಿತವಾಗಿ ರಾಜಕೀಯಕ್ಕೆ ಸೇರುತ್ತಾರೆ ಎಂದು ವದಂತಿಗಳಿವೆ.
ನಟನೆ, ನೃತ್ಯಗಳಿಂದ ಅಭಿಮಾನಿಗಳ ಮನಸ್ಸಾಳುವ ನಟಿ ಮಾಧುರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾಯುವ್ಯ ಮುಂಬೈನಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಗಳು ಹೇಳಿದ್ದರು. ಇದಕ್ಕೆ ಅವರು ಕೆಲ ಸಮಯದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಕೂಡ ಕಾರಣವಾಗಿದ್ದವು.
ಬಿಜೆಪಿ ನಾಯಕರೊಂದಿಗೆ ನಟಿ ಮಾಧುರಿ ದೀಕ್ಷಿತ್!
ಇಲ್ಲಿ ಗಮನಿಸಬೇಕಾದ ಅಂಶವೆಂದರೇ ನಟಿ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಶ್ರೀರಾಮ್ ನೆನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಬಿಜೆಪಿ ನಾಯಕ ಆಶಿಶ್ ಶೆಲಾರ್ ಅವರೊಂದಿಗೆ ಭಾಗವಹಿಸಿದ್ದರು. ಇನ್ನು ಅವರು ರಾಜಕೀಯ ಜೊತೆಗೆ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿಗೆ ಪುಷ್ಠಿ ನೀಡಿದೆ.

ಪಂದ್ಯದ ನಂತರ ಟೀಮ್ ಇಂಡಿಯಾವನ್ನು ಅಭಿನಂದಿಸಿ ಮಾಧುರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ, ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರೊಂದಿಗೂ ಕಾಣಿಸಿಕೊಂಡಿದ್ದಾರೆ. ಇವೆಲ್ಲದರ ನಡುವೇ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಪ್ಲ್ಯಾನ್ ಹೊಂದಿಲ್ಲ ಎಂದು ಮೂಲವೊಂದನ್ನು ಉಲ್ಲೇಖಿಸಿ ಫ್ರಿಪ್ರೆಸ್ ಜರ್ನಲ್ ವರದಿ ಮಾಡಿದೆ.
ಲೋಕಸಭೆಯಲ್ಲ...ರಾಜ್ಯ ಸಭೆ ಮೇಲೆ ಮಾಧುರಿ ಕಣ್ಣು!
ಇನ್ನು, ರಾಜಕೀಯ ವದಂತಿಗಳ ಬೆನ್ನಲ್ಲೆ ನಟಿ ಮಾಧುರಿ ದಿಕ್ಷೀತ್ ಒಂದು ವೇಳೆ ಅವರು ರಾಜಕೀಯಕ್ಕೆ ಬಂದರೆ, ಅವರು ಬಹುಶಃ ರಾಜ್ಯಸಭೆಯಲ್ಲಿ ಪ್ರತಿನಿಧಿಸಬಹುದು. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಪ್ಲ್ಯಾನ್ ಹೊಂದಿಲ್ಲ ಎಂದು ಅವರ ಕುಟುಂಬ ದೃಢಪಡಿಸಿದೆ.
ಇನ್ನು, ಲೋಕಸಭೆ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಅವರು ಬಿಜೆಪಿಯಿಂದ ಟಿಕೆಟ್ ಪಡೆಯುವ ಸಾಧ್ಯತೆ ಇದೆ ಎಂದು ಮತ್ತೊಂದು ವರದಿ ಹೇಳಿದ್ದು, ಅವರನ್ನು ಪುಣೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಹೇಳಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ, ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು. ನಟಿಯಾಗಿ ಬೆಳ್ಳಿ ಪರದೆಯ ಮೇಲೆ ರಾರಾಜಿಸುವ ನಟಿ ಮಾಧುರಿ ರಾಜಕೀಯಕ್ಕೆ ಬರುವ ಬಗ್ಗೆ ಅಧಿಕೃತವಾಗಿ ಘೋಷಿಸಬೇಕಾಗಿದೆ.


Click it and Unblock the Notifications










