ಸೀಕ್ರೆಟ್ ಸ್ಥಳದಲ್ಲಿ ಅರ್ಜುನ್ ಕಪೂರ್ ಹುಟ್ಟುಹಬ್ಬ ಆಚರಿಸಿದ ಮಲೈಕಾ
ಬಾಲಿವುಡ್ ನಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಚಾರ ಅಂದ್ರೆ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ಅವರ ಪ್ರೀತಿ ಮ್ಯಾಟರ್. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇರವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಯಾವಾಗಲು ಅಂಟಿಕೊಂಡೆ ಇರುವ ಈ ಜೋಡಿ ಇಂದು ವಿದೇಶದಲ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಹೌದು, ನಟ ಅರ್ಜುನ್ ಕಪೂರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್ ಹುಟ್ಟುಹಬ್ಬವನ್ನು, 46 ವರ್ಷದ ರೂಮರ್ ಗರ್ಲ್ ಫ್ರೆಂಡ್ ಮಲೈಕಾ ಅರೋರ ವಿಭಿನ್ನವಾಗಿ ಆಚರಿಸಿದ್ದಾರೆ. ಅರ್ಜುನ್ ಕಪೂರ್ ಅನ್ನು ವಿದೇಶಕ್ಕೆ ಕರೆದುಕೊಂಡು ಹೋಗಿರುವ ಮಲೈಕಾ ಸೀಕ್ರೆಟ್ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿ ರೂಮರ್ ಬಾಯ್ ಫ್ರೆಂಡ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಅಷ್ಟೆಯಲ್ಲ ಸಾಮಾಜಿಕ ಜಾಲತಾಣದಲ್ಲಿ ಮಲೈಕಾ ತುಂಬಾನೆ ಪ್ರೀತಿಯಿಂದ ಅರ್ಜುನ್ ಗೆ ಶುಭಾಶಯ ತಿಳಿಸಿದ್ದಾರೆ. "ನನ್ನ ಕ್ರೇಜಿ ಅರ್ಜುನ್ ಗೆ ಹುಟ್ಟುಹಬ್ಬದ ಶುಭಾಷಯಗಳು. ಯಾವಾಗಲು ಸಂತೋಷದಿಂದ ಇರು" ಇಬ್ಬರ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.
ಮಲೈಕ 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮದುವೆಯಾಗಿದ್ದರು. 2017ರಲ್ಲಿ ವಿಚ್ಚೇದನ ಪಡೆಯುವ ಮೂಲಕ 18 ವರ್ಷದ ವಿವಾಹ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈಗ ಮಲೈಕಾ, ಅರ್ಜುನ್ ಕಪೂರ್ ಜೊತೆ ಓಡಾಡಿಕೊಂಡಿದ್ದಾರೆ.
ಆದ್ರೆ ಇವರ ಸಂಬಂಧದ ಬಗ್ಗೆ ಕೇಳಿದ್ರೆ, ಇಬ್ಬರು ಸ್ನೇಹಿತರು ಅಷ್ಟೆ ಅದೂ ಬಿಟ್ಟರೆ ಬೇರೆನು ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದ್ರೆ ಇಬ್ಬರು ಮದುವೆ ಆಗುತ್ತಾರೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ಈ ಜೋಡಿ ಈಗಾಗಲೆ ಮದುವೆ ಆಗಬೇಕಿತ್ತು. ಆದ್ರೆ ಇಬ್ಬರು ಮದುವೆ ಆಗದೆ ಆರಾಮಾಗಿ ದೇಶ-ವಿದೇಶ ಸುತ್ತಿಕೊಂಡು ಎಂಜಾಯ್ ಮಾಡಿಕೊಂಡಿದ್ದಾರೆ.


Click it and Unblock the Notifications











