For Quick Alerts
  ALLOW NOTIFICATIONS  
  For Daily Alerts

  ಜೂಜು ಅಡ್ಡೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಲೈಕಾ: ಭಾರಿ ಸಂಭಾವನೆ!

  |

  ಸಿನಿಮಾ ತಾರೆಯರು ಸಿನಿಮಾ, ಟಿವಿ, ಜಾಹೀರಾತುಗಳಲ್ಲಿ ಮಾತ್ರ ನಟಿಸುತ್ತಾರೆ ಎಂದುಕೊಂಡರೆ ತಪ್ಪು, ಸಿನಿಮಾ ಬಿಟ್ಟು ಹೊರಗಡೆಯೂ ಪ್ರದರ್ಶನ ನೀಡುತ್ತಾರೆ ಇದಕ್ಕಾಗಿ ದುಬಾರಿ ಸಂಭಾವನೆಯನ್ನು ಪಡೆಯುತ್ತಾರೆ.

  ಮಳಿಗೆ ಉದ್ಘಾಟನೆ, ಬಹಿರಂಗ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ, ಫ್ಯಾನ್ಸ್ ಟೂರ್, ಲೈವ್ ಶೋ ಇನ್ನಿತರೆಗಳಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳು ಇದರಿಂದ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಾರೆ.

  'ರಾಮ್ ಸೇತು' ರಕ್ಷಣೆಗೆ ನಿಂತ ಕಿಲಾಡಿ ಅಕ್ಷಯ್!: 'ರಾಮ್‌ ಸೇತು' ಸಿನಿಮಾ ಟೀಸರ್ ಸೂಪರ್ ಹಿಟ್'ರಾಮ್ ಸೇತು' ರಕ್ಷಣೆಗೆ ನಿಂತ ಕಿಲಾಡಿ ಅಕ್ಷಯ್!: 'ರಾಮ್‌ ಸೇತು' ಸಿನಿಮಾ ಟೀಸರ್ ಸೂಪರ್ ಹಿಟ್

  ತಮ್ಮ ಬಳುಕುವ ದೇಹ, ಅದ್ಭುತ ನೃತ್ಯದಿಂದ ಹೆಸರಾಗಿರುವ ನಟಿ ಮಲೈಕಾ ಅರೋರಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು ಬಹಳ ಕಡಿಮೆ ಆದರೆ ಹೊರಗೆ ಸಾಕಷ್ಟು ಲೈವ್ ಶೋಗಳನ್ನು ಅವರು ನೀಡುತ್ತಾರೆ ಇದರಿಂದ ಸಾಕಷ್ಟು ಹಣವನ್ನೂ ಗಳಿಸುತ್ತಾರೆ.

  ವಿದೇಶಿ ಕೆಸಿನೋದಲ್ಲಿ ಮಲೈಕಾ ಡ್ಯಾನ್ಸ್

  ವಿದೇಶಿ ಕೆಸಿನೋದಲ್ಲಿ ಮಲೈಕಾ ಡ್ಯಾನ್ಸ್

  ಇತ್ತೀಚೆಗಷ್ಟೆ ನಟಿ ಮಲೈಕಾ ಅರೋರಾ ಯೂರೋಪ್‌ನ ಜಾರ್ಜಿಯಾನಲ್ಲಿ ಕೆಸಿನೊ (ಜೂಜು ಅಡ್ಡೆ)ಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾರೆ. ಸುಮಾರು ಎರಡು ಗಂಟೆಯ ಶೋ ನೀಡಿರುವ ಮಲೈಕಾ ಅವರ ಜನಪ್ರಿಯ 'ಮುಚ್ಚಿ ಬದ್‌ನಾಮ್ ಹುಯಿ' ಹಾಡಿಗೆ ಸೇರಿದಂತೆ ಇನ್ನೂ ಕೆಲವು ಹಾಡುಗಳಿಗೆ ಸೊಂಟ ಬಳುಕಿಸಿ ಜೂಜುಕೋರರನ್ನು ರಂಜಿಸಿದ್ದಾರೆ. ಈ ಕಾರ್ಯಕ್ಕೆ ಅವರು ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ.

  ನ್ಯೂ ಇಯರ್ ಪಾರ್ಟಿಗಳಲ್ಲಿಯೂ ಡ್ಯಾನ್ಸ್

  ನ್ಯೂ ಇಯರ್ ಪಾರ್ಟಿಗಳಲ್ಲಿಯೂ ಡ್ಯಾನ್ಸ್

  ಕೆಸಿನೋ ಓಪನಿಂಗ್‌ನಲ್ಲಿ ಕುಣಿದಿರುವ ಮಲೈಕಾ ಐಶಾರಾಮಿ ನ್ಯೂಯಿಯರ್ ಪಾರ್ಟಿಗಳಲ್ಲಿಯೂ ಡ್ಯಾನ್ಸ್ ಮಾಡುತ್ತಾರೆ. ಇದಕ್ಕೂ ಸಹ ಕೋಟ್ಯಂತರ ರುಪಾಯಿ ಸಂಭಾವನೆ ಪಡೆಯುತ್ತಾರೆ. ಡ್ಯಾನ್ಸ್ ಕಾರ್ಯಕ್ರಮ ಮಾತ್ರವೇ ಅಲ್ಲದೆ ಕೆಲವು ಕೆಸಿನೋಗಳು ಸೆಲೆಬ್ರಿಟಿಗಳನ್ನು ವಿಶೇಷ ಅತಿಥಿಗಳನ್ನಾಗಿ ತಮ್ಮ ಕಸೀನೋಕ್ಕೆ ಕರೆಯುತ್ತಿರುತ್ತಾರೆ. ಕನ್ನಡದ ಕೆಲವು ನಟ-ನಟಿಯರು ಸಹ ಶ್ರೀಲಂಕಾದ ಕೆಸಿನೋಗಳಿಗೆ ಅತಿಥಿಯಾಗಿ ಹೋಗಿದ್ದು ಸುದ್ದಿಯಾಗಿತ್ತು.

  ಐಟಂ ಹಾಡಿಗೆ ಪಡೆವ ಸಂಭಾವನೆ ಎಷ್ಟು?

  ಐಟಂ ಹಾಡಿಗೆ ಪಡೆವ ಸಂಭಾವನೆ ಎಷ್ಟು?

  ನಟಿಸುವುದಕ್ಕಿಂತಲೂ ಐಟಂ ಹಾಡುಗಳಲ್ಲಿ ಕಾಣಿಸುವುದಕ್ಕೆ ಜನಪ್ರಿಯವಾಗಿರುವ ಮಲೈಕಾ ಅರೋರ ಒಂದು ಐಟಂ ಹಾಡಿಗೆ ಸುಮಾರು 1 ಕೋಟಿ ಯಿಂದ ಎರಡು ಕೋಟಿ ಚಾರ್ಜ್ ಮಾಡುತ್ತಾರಂತೆ. ಒಂದು ಹಾಡಿಗೆ ಎರಡು ದಿನ ಮಾತ್ರವೇ ಕಾಲ್ ಶೀಟ್ ಕೊಡುತ್ತಾರೆ. ಒಂದು ದಿನ ತರಬೇತಿಗೆ ಒಂದು ದಿನ ಶೂಟಿಂಗ್‌ಗೆ. ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರವೇ ಎರಡು ಅಥವಾ ಮೂರು ದಿನ ನೀಡುತ್ತಾರೆ. ಹಿಂದಿ ಮಾತ್ರೇ ಅಲ್ಲದೆ ತೆಲುಗು ತಮಿಳು ಸಿನಿಮಾಗಳಲ್ಲಿಯೂ ಐಟಂ ಹಾಡುಗಳಿಗೆ ಸೊಂಟ ಕುಣಿಸಿದ್ದಾರೆ ಈ ಚೆಲುವೆ.

  ಅರ್ಜುನ್ ಕಪೂರ್ ಜೊತೆ ಡೇಟಿಂಗ್‌

  ಅರ್ಜುನ್ ಕಪೂರ್ ಜೊತೆ ಡೇಟಿಂಗ್‌

  ಐಟಂ ಡ್ಯಾನ್ಸರ್ ಆಗಿರುವ ಜೊತೆಗೆ ನಿರ್ಮಾಪಕಿ ಹಾಗೂ ನವೋದ್ಯಮಿಯೂ ಆಗಿದ್ದಾರೆ ಮಲೈಕಾ ಅರೋರ ಇದೀಗ ಹೊಸ ಕಂಟೆಂಟ್ ಕ್ರಿಯೇಷನ್ ಪ್ಲಾಟ್‌ಫಾರ್ಮ್ ನಿರ್ಮಿಸುವ ಯೋಜನೆಯಲ್ಲಿದ್ದಾರೆ. ಕಂಟೆಂಟ್ ಕ್ರಿಯೇಶನ್‌ಗೆ ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ಕೆಲವು ಐಡಿಯಾಗಳು ನನ್ನ ಮಂದಿವೆ ಅವುಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇನ್ನು 48 ವರ್ಷದ ಮಲೈಕಾ ಅರೋರಾ, 37 ವರ್ಷದ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈ ಹಿಂದೆ ಇವರು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ವಿವಾಹವಾಗಿದ್ದರು. ಬಳಿಕ ವಿಚ್ಛೇಧನ ಪಡೆದುಕೊಂಡರು. ಇವರಿಗೆ ಅರ್ಬಾಜ್‌ ಜೊತೆ ಅರ್ಹಾನ್ ಹೆಸರಿನ ಮಗ ಇದ್ದಾನೆ.

  English summary
  Actress Malaika Arora dance in Georgia's casino. She charge heavy fee for live shows usually. She is planing to launch content creation business
  Monday, September 26, 2022, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X