For Quick Alerts
  ALLOW NOTIFICATIONS  
  For Daily Alerts

  ಈ ಒಂದು ಕಾರಣಕ್ಕೆ ಹೆಣ್ಣು ಮಗು ಬೇಕೆಂದ ನಟಿ ಮಲೈಕಾ ಆರೋರಾ

  |

  ಬಾಲಿವುಡ್ ನ ಖ್ಯಾತ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೋರಾ ಇತ್ತೀಚಿಗೆ ಬಾಯ್ ಫ್ರೆಂಡ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಫಿಟ್ ನೆಸ್ ಫ್ರೀಕ್ ಮಲೈಕಾ ಇದೀಗ ತನ್ನ ದೊಡ್ಡ ಬಯಕೆಯನ್ನು ಬಹಿರಂಗ ಪಡಿಸಿದ್ದಾರೆ. ಪತಿ ಅರ್ಬಾಜ್ ಖಾನ್ ನಿಂದ ದೂರ ಆಗಿರುವ ಮಲೈಕಾ ಸದ್ಯ ಪುತ್ರ ಅರ್ಹಾನ್ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

  47 ವರ್ಷದ ನಟಿ ಮಲೈಕಾ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಮಲೈಕಾ ಸದ್ಯದಲ್ಲೇ ಅರ್ಜುನ್ ನನ್ನು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಮಲೈಕಾ ಆರೋರಾಗೆ ಮೊದಲ ಪತಿಯಿಂದ ಸಿಕ್ತು ವಿಶೇಷ ಉಡುಗೊರೆ; ಏನದು?ಮಲೈಕಾ ಆರೋರಾಗೆ ಮೊದಲ ಪತಿಯಿಂದ ಸಿಕ್ತು ವಿಶೇಷ ಉಡುಗೊರೆ; ಏನದು?

  ಈ ನಡುವೆ ಮಲೈಕಾ ತನಗೆ ಹೆಣ್ಣು ಮಗು ಬೇಕೆನ್ನುವ ಆಸೆಯನ್ನು ಹೊರಹಾಕಿದ್ದಾರೆ. ಡಾನ್ಸ್ ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದ ಮಲೈಕಾ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮಲೈಕಾ ಬಯಕೆ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

  'ನನ್ನ ಮನೆಯಲ್ಲಿ ಒಬ್ಬ ಮಗನಿದ್ದಾನೆ. ನನಗೆ ತುಂಬಾ ದಿನಗಳಿಂದ ನಾನು ಹೆಣ್ಣು ಮಗುವನ್ನು ಪಡೆಯಬೇಕು ಎಂದು ಅಂದುಕೊಂಡಿದ್ದೀನಿ. ನನ್ನ ಬಳಿ ಸುಂದರವಾದ ಬೂಟುಗಳು ಮತ್ತು ಬಟ್ಟೆಗಳು ಇವೆ. ಅವುಗಳನ್ನು ಧರಿಸಲು ಯಾರು ಇಲ್ಲ' ಎಂದಿದ್ದಾರೆ. ಮಲೈಕಾ ಮಾತು ಕೇಳಿ ಅಭಿಮಾನಿಗಳು ನಿಮ್ಮ ಬಯಕೆಯನ್ನು ಅರ್ಜುನ್ ಕಪೂರ್ ಈಡೇರಿಸುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  :ನಟಿ ರೇಖಾ‌ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಮುರಿದು ಬಿದ್ದಿದ್ದು ಯಾಕೆ? | Filmibeat Kannada

  ಮಲೈಕಾ ಇತ್ತೀಚಿಗೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ರಿಯಾಲಿಟಿ ಶೋ ಮತ್ತು ಕೆಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಮಗನಿಗಾಗಿ ಅಡುಗೆ ಮಾಡುವುದನ್ನು ಕಲಿತಿರುವುದಾಗಿ ಮಲೈಕಾ ಹೇಳಿದ್ದಾರೆ. ಮಲೈಕಾ ತನ್ನ ಆಸೆಯಂತೆ ಹೆಣ್ಣುಮಗುವನ್ನು ಪಡೆಯುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Actress Malaika Arora express her wish to have a Girl baby.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X