ಆ ನಟಿಗೆ ''ಟಾಪ್ ಮೇಲೆ ಎತ್ತು'' ಎಂದು ಹೇಳಿದ್ದ ಆ ನಿರ್ಮಾಪಕ ಯಾರು?
ಮೀಟೂ ಮತ್ತು ಕಾಸ್ಟಿಂಗ್ ಕೌಚ್ ಅಭಿಯಾನಗಳು ಬಂದ್ಮೇಲೆ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದವು. ಸುಮಾರು ವರ್ಷಗಳ ಹಿಂದೆ ತಾವು ಎದುರಿಸಿದ ಸಮಸ್ಯೆಗಳನ್ನು ನಟಿಯರು ಬಹಿರಂಗಪಡಿಸಿದರು.
ಇದೀಗ, ಬಾಲಿವುಡ್ ಇಂಡಸ್ಟ್ರಿಯ ನಟಿ ಮಲ್ಹಾರ್ ರಾಥೋಡ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಹೊರಹಾಕಿದ್ದಾರೆ. 64 ವರ್ಷದ ಹಿರಿಯ ನಿರ್ಮಾಪಕರೊಬ್ಬರು ''ನಿನ್ನ ಟಾಪ್ ಮೇಲೆ ಎತ್ತು'' ಎಂದು ಅಸಭ್ಯವಾಗಿ ಮಾತನಾಡಿದ್ದಾರಂತೆ.
ಆ ನಿರ್ಮಾಪಕ ಹೀಗೆ ಯಾಕೆ ಹೇಳಿದರು ಎಂಬುದು ಗೊತ್ತಾಗದ ಆ ನಟಿ ಭಯಗೊಂಡಿದ್ದರಂತೆ. ಬಳಿಕ ಅಲ್ಲಿಂದ ಹೊರಬಂದಳಂತೆ. ಯಾರು ಆ ನಿರ್ಮಾಪಕ ಎಂದು ಹೇಳದ ಮಲ್ಹಾರ್ ರಾಥೋಡ್ ಘಟನೆಯನ್ನ ಮಾತ್ರ ಸ್ಮರಿಸಿಕೊಂಡಿದ್ದಾರೆ.

ಮಲ್ಹಾರ್ ರಾಥೋಡ್ ಯಾರು ಎಂಬುವುದನ್ನು ನೋಡುವುದಾದರೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೋಸ್ಟೇಜ್ಸ್, ತೇರೆ ಲಿಯೆ ಬ್ರೋ, ಸನ್ ಸಿಲ್ಕ್ ರಿಯಲ್ ಎಂಎಂ ಅಂತಹ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
English summary
Actress Malhaar Rathod reveals casting couch. one of the senior producer of bollywood asked to lift her top.


Click it and Unblock the Notifications