For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವನ್ನು ದತ್ತು ಪಡೆದ ಸಂತಸದಲ್ಲಿ ನಟಿ ಮಂದಿರಾ ಬೇಡಿ

  |

  ಬಾಲಿವುಡ್ ನಟಿ ಮತ್ತು ಮಾಡೆಲ್ ಮಂದಿರಾ ಬೇಡಿ 4 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಮನೆಗೆ ಹೊಸ ಸದಸ್ಯೆ ಆಗಮಿಸಿದ ಸಂತಸವನ್ನು ನಟಿ ಮಂದಿರಾ ಬೇಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಹೆಣ್ಣು ಮಗು ದತ್ತು ಪಡೆದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

  ಮನೆಗೆ ಮಗಳನ್ನು ಅದ್ದೂರಿಯಾಗಿ ಸ್ವಾಗತ ಮಾಡಿರುವ ಕುಟುಂಬ, ಮಗಳಿಗೆ ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದಾರೆ. ಅಂದ್ಹಾಗೆ ಮಂದಿರಾ ದಂಪತಿ ಜುಲೈ ತಿಂಗಳಲ್ಲೇ ಮಗುವನ್ನು ದತ್ತು ಪಡೆದಿದ್ದಾರೆ. ಆದರೆ ಈಗ ಮಗಳನ್ನು ಪರಿಚಯಿಸಿದ್ದಾರೆ. ಮಂದಿರ ಬೇಡಿ ಮತ್ತು ಪತಿ ರಾಜ್ ಕೌಶಲ್ ದಂಪತಿಗೆ ವೀರ್ ಕೌಶಲ್ ಎನ್ನುವ 9 ವರ್ಷದ ಮಗನಿದ್ದಾನೆ.

  ಸೀರೆ ಅಂದ್ರೆ ಮೂಗು ಮುರಿಯುವವರು ಸ್ವಲ್ಪ ಮಂದಿರಾ ಬೇಡಿ ಕಡೆ ನೋಡಿ...ಸೀರೆ ಅಂದ್ರೆ ಮೂಗು ಮುರಿಯುವವರು ಸ್ವಲ್ಪ ಮಂದಿರಾ ಬೇಡಿ ಕಡೆ ನೋಡಿ...

  ಮಂದಿರಾ ಬೇಡಿ ಶೇರ್ ಮಾಡಿರುವ ಫೋಟೋದಲ್ಲಿ ಹೆಣ್ಣುಮಗಳು ತಾರಾ ಜೊತೆಗೆ ಪತಿ ರಾಜ್ ಕೌಶಲ್ ಮತ್ತು ಪುತ್ರ ವೀರ್ ಸಹ ಇದ್ದಾರೆ. ಫೋಟೋಜೊತೆಗೆ ಮಂದಿರಾ ಬೇಡಿ ಮಗಳ ಬಗ್ಗೆ ಬರೆದುಕೊಂಡಿದ್ದಾರೆ.

  "ತಾರಾ ನಮ್ಮ ಕುಟುಂಬಕ್ಕೆ ಆಶೀರ್ವಾದದಂತೆ ಬಂದಿದ್ದಾಳೆ. ನನ್ನ ಮಗ ವೀರ್ ಗೆ ಅವಳು ಸಹೋದರಿ. ಶುದ್ಧ ಪ್ರೀತಿಯಿಂದ ಆಕೆಯನ್ನು ಸ್ವಾಗತಿಸುತ್ತೇನೆ." ಎಂದಿದ್ದಾರೆ. ಇದೆ ವರ್ಷ ಜುಲೈ 28ರಿಂದ ತಾರಾ ತಮ್ಮ ಕುಟುಂಬದ ಭಾಗವಾಗಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಹೆಣ್ಣು ಮಗುವನ್ನು ದತ್ತು ಪಡೆಯುವ ಬಗ್ಗೆ ನಟಿ ಮಂದಿರಾ ಬೇಡಿ ಕಳೆದ ವರ್ಷ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. ದತ್ತು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದರು. ಶೀಘ್ರದಲ್ಲೇ ಮಗಳನ್ನು ಕುಟುಂಬಕ್ಕೆ ಸ್ವಾಗತ ಮಾಡುವುದಾಗಿ ಬಹಿರಂಗಪಡಿಸಿದ್ದರು. 'ಸಂದರ್ಶನದಲ್ಲಿ ಮಂದಿರಾ ಬೇಡಿ, ರಾಜ್ ಮತ್ತು ನಾನು ವೀರ್ ಗೆ ಸಹೋದರಿಯನ್ನು ಬಯಸಿದ್ದೇವೆ. ನನ್ನ ಮಗನಿಗೆ ಎಂಟು ವರ್ಷ. 2ರಿಂದ 4 ವರ್ಷದೊಳಗಿನ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದೇವೆ. ಈಗಾಗಲೇ ಅವಳ ಹೆಸರನ್ನು ಯೋಚಿಸಿದ್ದೇವೆ, ಅವಳಿಗೆ ತಾರಾ ಎಂದು ಕರೆಯುತ್ತೇವೆ' ಎಂದು ಕಳೆದ ವರ್ಷವೇ ಹೇಳಿದ್ದರು.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ನಟಿ ಮಂದಿರಾ ಬೇಡಿ 1999ರಲ್ಲಿ ರಾಜ್ ಕೌಶಲ್ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 2011ರಲ್ಲಿ ಮೊದಲ ಮಗು ವೀರ್ ಗೆ ಜನ್ಮ ನೀಡಿದ್ದಾರೆ. ಇದೀಗ 20 ವರ್ಷಗ ಬಳಿಕ ಎರಡನೇ ಮಗುವನ್ನು ದತ್ತು ಪಡೆದಿದ್ದಾರೆ.

  English summary
  Actress mandira bedi And her husband Raj kaushal on adopt 4 years baby girl. Mandira Bedi introduces Daughter Tara bedi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X