For Quick Alerts
  ALLOW NOTIFICATIONS  
  For Daily Alerts

  ತಾರೆ ಮನೀಷಾ ಕೋಯಿರಾಲಾ ಆಸ್ಪತ್ರೆಗೆ ದಾಖಲು

  By Rajendra
  |
  'ಭೂತ್ ರಿಟರ್ನ್' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ತಾರೆ ಮೊನೀಷಾ ಕೋಯಿರಾಲಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಲವತ್ತೆರಡರ ಹರೆಯದ ಮೋನಿಷಾ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಕೂಡಲೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

  ಆದರೆ ಅವರ ಆರೋಗ್ಯ ಸ್ಥಿರವಾಗಿದ್ದು ಅಂತಹ ಗಂಭೀರ ಪರಿಣಾಮವೇನು ಆಗಿಲ್ಲ ಎನ್ನುತ್ತವೆ ಬಾಲಿವುಡ್ ಮೂಲಗಳು. ಇತ್ತೀಚೆಗಷ್ಟೇ ತಮ್ಮ ಪತಿಯಿಂದಲೂ ದೂರ ಸರಿದಿದ್ದರು ಮನೀಷಾ ಕೋಯಿರಾಲಾ.

  ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರ 'ಭೂತ್ ರಿಟರ್ನ್ಸ್' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಮಲಯಾಳಂನ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಇದಾದ ಬಳಿಕ ನಾನೇ ಚಿತ್ರವನ್ನು ನಿರ್ದೇಶಿಸುತ್ತೇನೆ ಎಂದು ತಿಳಿಸಿದ್ದರು.

  ಒಂದು ಕಡೆ ದಾಂಪತ್ಯ ಕಲಹಗಳು, ಇನ್ನೊಂದು ಕಡೆ ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಮನೀಷಾ ಅವರು ಪರದಾಡುತ್ತಿದ್ದರು. ಈ ಕಾರಣಕ್ಕೆ ಆಕೆ ಒತ್ತಡಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎನ್ನಲಾಗಿದೆ.

  ಇದರ ಜೊತೆಗೆ ಕುಡಿತದ ಚಟಕ್ಕೆ ಬಿದ್ದಿದ್ದರು. ಕುಡಿಯೋದೆ ನನ್ನ ಬಿಜಿನೆಸ್ಸು ಎಂದು ಪರಮಾತ್ಮನಿಗೆ ಶರಣಾಗಿದ್ದರು. ತಾನು ಕುಡಿಯುವುದನ್ನೂ ಬಿಟ್ಟಿದ್ದೇನೆ. ಸಿನೆಮಾ ಪ್ರಪಂಚ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ ಎಂದು ಹೊಸ ಕಥೆಯನ್ನೂ ಹೇಳಿದ್ದರು. (ಏಜೆನ್ಸೀಸ್)

  English summary
  Bollywood actress Manisha Koirala is warded at the Jaslok Hospital here for check-ups. The 42-year-old reportedly fell unconscious, leading to her hospitalization, according to some published reports. These could not be confirmed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X