ನನ್ನನ್ನೂ ಕೂಡ ಆ ಪ್ರಸಿದ್ಧ ವ್ಯಕ್ತಿ ಮಂಚಕ್ಕೆ ಕರೆದಿದ್ದ ಎಂದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕಿ

ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಮಂಜರಿ ಫಡ್ನಿಸ್ ಮತ್ತೊಂದು ಉದಾಹರಣೆ.

ಹೌದು.. ಮಂಜರಿ ಫಡ್ನಿಸ್.. ಇನ್ನೇನು ಈ ಡಿಸೆಂಬರ್‌ಗೆ ಚಿತ್ರರಂಗದಲ್ಲಿ ಎರಡು ದಶಕ ಪೂರೈಸಲಿರುವ ಚೆಲುವೆ. ಹಿಂದಿ.. ಬೆಂಗಾಲಿ..ಮರಾಠಿ.. ತೆಲುಗು.. ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಮಂಜರಿ ಫಡ್ನಿಸ್, ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ''ಮುಂಜಾನೆ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. ಇಂಥಾ ಮಂಜರಿ ಫಡ್ನಿಸ್ ಹಿಂದಿಯ ''ಫಿಲ್ಮಿಬೀಟ್'' ಜೊತೆ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

actress-manjari-fadnis-opens-up-about-her-casting-couch-experience

ಹಿಂದಿ ಫಿಲ್ಮಿಬೀಟ್‌ಗೆ ಸುಧೀರ್ಘವಾದ ಸಂದರ್ಶನವನ್ನು ನೀಡಿರುವ ಮಂಜರಿ, ತಮ್ಮ ವೃತ್ತಿ ಬದುಕಿನ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಹೃತಿಕ್ ರೋಶನ್.. ರಣ್‌ವೀರ್ ಸಿಂಗ್..ರಣ್‌ಬೀರ್ ಕಪೂರ್.. ರಾಜ್ ಕುಮಾರ್ ರಾವ್.. ವಿಕ್ಕಿ ಕೌಶಲ್.. ಹೀಗೆ ಇನ್ನೂ ಅನೇಕರ ಜೊತೆ ತೆರೆಹಂಚಿಕೊಳ್ಳಬೇಕೆಂಬ ಆಸೆ ಇದೆ ಅಂದಿದ್ದಾರೆ. ಇದೇ ಸಮಯದಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಬೇಡಿಕೆಯನ್ನು ನಿಮ್ಮ ಮುಂದೆ ಯಾರಾದರೂ ಇಟ್ಟಿದ್ದರಾ ಎನ್ನುವ ಪ್ರಶ್ನೆಗೆ ಹೌದು ಎಂದಿದ್ದಾರೆ.

ಪ್ರಸಿದ್ಧ ವ್ಯಕ್ತಿಯಿಂದಲೇ ನನಗೆ ಪ್ರಸ್ತಾಪ ಬಂದಿತ್ತು ಎಂದಿರುವ ಮಂಜರಿ, ಅಲ್ಲಿ ಹೋಗುವುದು ಬಿಡುವುದು ನಿಮ್ಮ ಇಷ್ಟ, ಅದನ್ನು ನೀವೆ ನಿರ್ಧಾರ ಮಾಡಬೇಕು ಎಂದಿದ್ದಾರೆ. ಇಲ್ಲಿ ಯಾರು ಯಾರನ್ನೂ ಒತ್ತಾಯಿಸುವುದಿಲ್ಲ ಎಂದಿರುವ ಮಂಜರಿ, ನಾನು ಆ ದಿಕ್ಕಿನಲ್ಲಿ ನಡೆಯಲು ನಿರಾಕರಿಸಿದೆ ಎಂದಿದ್ದಾರೆ. ಹೋಗದೇ ಇದ್ದರೆ ಅಬ್ಬಬ್ಬಾ ಅಂದರೆ ಏನಾಗಬಹುದು, ನಿಮ್ಮ ಕೆಲಸ ಹೋಗಬಹುದು. ಮುಂದೆ ಕೆಲಸ ನಿಮಗೆ ಸಿಗದೇ ಇರಬಹುದು ಎಂದಿರುವ ಮಂಜರಿ, ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ.

actress-manjari-fadnis-opens-up-about-her-casting-couch-experience

ಮುಂದುವರೆದು ಮಾತನಾಡಿರುವ ಮಂಜರಿ, ದುರಾದೃಷ್ಟವಶಾತ್ ಕೆಲ ಹುಡುಗಿಯರು ಇಲ್ಲ ಅಂದು ಹೇಳಲು ಆಗದೇ ಶೋಷಣೆಗೆ ಒಳಗಾಗುತ್ತಾರೆ ಎಂದಿದ್ದಾರೆ. ಎಲ್ಲವೂ ನಿಮ್ಮ ಕೈಯಲ್ಲಿದೆ. ನೀವು ಅದನ್ನು ಅರ್ಥಮಾಡಿಕೊಳ್ಳಬೇಕಷ್ಟೇ ಎಂದು ಕೂಡ ಮಂಜರಿ ಫಡ್ನಿಸ್ ಹೇಳಿದ್ದಾರೆ.

ಅಂದ್ಹಾಗೇ ಮಂಜರಿ ಫಡ್ನಿಸ್ ಅಭಿನಯದ ''ಚಲ್ತಿ ರಹೇ ಜಿಂದಗಿ'' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇನ್ನೂ ''ದಿ ಫ್ರೀಲ್ಯಾನ್ಸರ್''.. ''ಮಿಯಾ ಬೀವಿ ಔರ್ ಮರ್ಡರ್''.. ''ಮಾಸೂಮ್'' ವೆಬ್ ಸರಣಿಗಳಲ್ಲಿ ಕೂಡ ನಟಿಸಿರುವ ಮಂಜರಿ, ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಹೌದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X