ನನ್ನ ಮೈಕಿಯನ್ನು ಕ್ರೂರವಾಗಿ ಕೊಂದಿದ್ದಾರೆ ; ಪ್ರೀತಿಯ ನಾಯಿಯ ಸಾವಿಗೆ ನ್ಯಾಯ ಬೇಡುತ್ತಾ ಗಳಗಳನೆ ಅತ್ತ ಗಣೇಶ್ ನಾಯಕಿ
ಪ್ರಾಣಿ ಹತ್ಯೆ ಮಹಾಪಾಪ..ಪ್ರಾಣಿ ಹಿಂಸೆ ಮಾಡಬಾರದು.. ಪ್ರಾಣಿಗಳ ಮೇಲಿನ ದೌರ್ಜನ್ಯ ಅಥವಾ ಕ್ರೌರ್ಯವನ್ನು ತಡೆಯಲು ಭಾರತದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ (Prevention of Cruelty to Animals Act), 1960 ಜಾರಿಯಲ್ಲಿದೆ. ಪ್ರಾಣಿಗಳಿಗೆ ಅನಗತ್ಯ ನೋವು, ಹಿಂಸೆ ನೀಡುವುದನ್ನು ತಡೆಯುವುದು ಮತ್ತು ಅವುಗಳ ರಕ್ಷಣೆ ಈ ಕಾಯಿದೆಯ ಮುಖ್ಯ ಉದ್ದೇಶ. ಆದರೂ ಕೂಡ ಪ್ರಾಣಿ ಹತ್ಯೆ ನಡೆಯುತ್ತಲೇ ಇದೆ.
ಇನ್ನು ನಾಯಿಗಳ ಮೇಲೆ ನಡೆಯುವ ದೈಹಿಕ ಹಿಂಸೆ, ಅಮಾನುಷ ಹಲ್ಲೆಗಳು ಮತ್ತು ಲೈಂಗಿಕ ದೌರ್ಜನ್ಯಗಳು ಖಂಡನೀಯ. ಮಾತನಾಡಲಾಗದ ಮೂಕಜೀವಿಗಳ ಮೇಲೆ ಕ್ರೂರಿಗಳ ಈ ಅಟ್ಟಹಾಸಕ್ಕೆ ಕಡಿವಾಣ ಬೀಳುತ್ತಿಲ್ಲ. ಕಾನೂನಿನ ಭಯ ಕೂಡ ಇವರಿಗೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮಂಜರಿ ಫಡ್ನಿಸ್ ಅವರ ಪ್ರೀತಿಯ ನಾಯಿ ಮೈಕಿಯ ಬರ್ಬರ ಹತ್ಯೆಯನ್ನು ಮಾಡಲಾಗಿದೆ.

ಹೌದು.. ಮಂಜರಿ ಫಡ್ನಿಸ್.. ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿರುವ ಚೆಲುವೆ. ಹಿಂದಿ.. ಬೆಂಗಾಲಿ..ಮರಾಠಿ.. ತೆಲುಗು.. ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಮಂಜರಿ ಫಡ್ನಿಸ್, ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ''ಮುಂಜಾನೆ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು.
ಇಂಥಾ ಮಂಜರಿ ಫಡ್ನಿಸ್ ಸದ್ಯ ಕಣ್ಣೀರು ಹಾಕಿದ್ಧಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನಿನ ಅಗತ್ಯ ಇದೆ ಎಂದು ಬಿಕ್ಕಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಮಂಜರಿ, ನನ್ನ ಸಾಕು ನಾಯಿ ಮೈಕಿಯನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.
ಮೈಕಿ ನಿದ್ರೆ ಮಾಡುತ್ತಿದ್ದ ಸಮಯದಲ್ಲಿ, ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿರುವ ಮಂಜರಿ, ಕೋಲು ಅಥವಾ ಕಬ್ಬಿಣದ ರಾಡ್‌ದಿಂದ ಹೊಡೆದಿದ್ದಾರೆ ಎಂದು ಅತ್ತಿದ್ದಾರೆ. ಆ ನಂತರ ಮೈಕಿಯನ್ನು ಮೆಟ್ಟಿಲು ಬಳಿ ಎಳೆದುಕೊಂಡು ಹೋಗಿ ಮತ್ತೆ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿರುವ ಮಂಜರಿ ಮೈಕಿ ಬಾಯಿಂದ ರಕ್ತ ಬರುತ್ತಿತ್ತು ಎಂದು ಕಣ್ಣೀರು ಹಾಕಿದ್ದಾರೆ.
ಪ್ರಜ್ಞೆ ತಪ್ಪಿದ್ದ ಮೈಕಿಯನ್ನು ಆ ನಂತರ ಚೀಲದಲ್ಲಿ ಹಾಕಿ ಹತ್ತಿರದ ಕೊಳ್ಳಕ್ಕೆ ಎಸೆಯಲಾಗಿದೆ ಎಂದು ಹೇಳಿರುವ ಮಂಜರಿ ಫಡ್ನಿಸ್, ಮೈಕಿ ಬದುಕುಳಿದಿದ್ದಾನಾ..? ಇಲ್ಲವಾ..? ಎನ್ನುವುದು ನನಗೆ ಗೊತ್ತಿಲ್ಲ, ಮೃತದೇಹಕ್ಕಾಗಿ ನಾನು ಹುಡುಕಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ.

ಇವರ ಈ ಹೋರಾಟಕ್ಕೆ ಹೋರಾಟಗಾರ ಕ್ಸೇವಿಯರ್ ಸ್ಯಾಂಟಿಯಾಗೊ ಬೆಂಬಲ ನೀಡಿದ್ದು, ವಸತಿ ಸಮುಚ್ಚಯದ ಸದಸ್ಯರು ತಮ್ಮ ಹುಡುಕಾಟಕ್ಕೆ ಸಹಕರಿಸಿದ್ದಾರೆ ಎಂದು ಮಂಜರಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸದ್ಯ ಮಂಜರಿ ಅವರ ಈ ಭಾವುಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ರಿಷಿನಾ ಕಂಧಾರಿ ಸೇರಿ ಚಿತ್ರರಂಗದ ಹಲವರು ಮಂಜರಿಗೆ ಧೈರ್ಯ ತುಂಬಿದ್ದಾರೆ. ಮೈಕಿಯ ಸ್ಥಿತಿ ಕಂಡು ಮರುಗಿದ್ದಾರೆ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಒಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿಗಳ ಮೇಲೆ ನಡೆಯುತ್ತಿರುವ ಆಸಿಡ್ ದಾಳಿ, ಕಾಲು-ಕೈಗಳನ್ನು ಕಟ್ಟಿ ಕೆರೆಯಲ್ಲಿ ಎಸೆಯುವುದು, ಮತ್ತು ಲೈಂ*ಗಿಕವಾಗಿ ಹಿಂಸಿಸುವ ವಿಕೃತ ಕೃತ್ಯಗಳು ಸಮಾಜವು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಮೂಡಿಸುತ್ತಿವೆ. ಪ್ರಾಣಿಗಳ ಮೇಲಿನ ಇಂತಹ ಕ್ರೌರ್ಯವನ್ನು ಕೇವಲ 'ಪ್ರಾಣಿ ಹಿಂಸೆ' ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಮನಶ್ಶಾಸ್ತ್ರಜ್ಞರ ಪ್ರಕಾರ, ಮೂಕಜೀವಿಗಳ ಮೇಲೆ ಇಷ್ಟೊಂದು ಕ್ರೂರವಾಗಿ ದೌರ್ಜನ್ಯ ಎಸಗುವ ವ್ಯಕ್ತಿಗಳು ಮುಂದೆ ಸಮಾಜದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಮೇಲೂ ಹಲ್ಲೆ ಮಾಡುವಂತಹ ಅಪಾಯಕಾರಿ ಕ್ರಿಮಿನಲ್ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹೀಗಾಗಿ ಪ್ರಾಣಿ ಹಿಂಸೆಯ ವಿರುದ್ಧದ ಕಾನೂನುಗಳನ್ನು ತಕ್ಷಣವೇ ಬಲಪಡಿಸಬೇಕಾದ ಅನಿವಾರ್ಯತೆ ಇದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡಲು ಅಧಿಕೃತ ಸಂಪರ್ಕಗಳು ಇಲ್ಲಿವೆ.
| ಸಂಸ್ಥೆ | ಉದ್ದೇಶ | ಸಂಪರ್ಕ |
|---|---|---|
| ಪೊಲೀಸ್ ಇಲಾಖೆ | ಪ್ರಾಣಿಗಳ ಮೇಲಿನ ಕ್ರೌರ್ಯ / ದೌರ್ಜನ್ಯ ವರದಿ | ಸ್ಥಳೀಯ ಪೊಲೀಸ್ ಠಾಣೆ |
| AWBI | ಪ್ರಾಣಿ ಕಲ್ಯಾಣ | ಜಿಲ್ಲಾ ಕಚೇರಿ |
| PETA ಇಂಡಿಯಾ | ತುರ್ತು ಸಹಾಯ | 98201 22602 |


Click it and Unblock the Notifications