ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ನಟಿ ಮಿನಿಷಾ ಲಂಬಾ
'ಮೀ ಟೂ' ಅಭಿಯಾನದ ಬಳಿಕ ಹಲವು ಪಾತ್ರಕ್ಕೆ ಪಲ್ಲಂಗ (ಕಾಸ್ಟಿಂಗ್ ಕೌಚ್) ಕತೆಗಳು ಹೊರಗೆ ಬಂದವು, ಈಗಲೂ ಬರುತ್ತಿವೆ.
ಬಾಲಿವುಡ್ ನಟಿ ಮಿನಿಷಾ ಲಂಬಾ ತಾವು ಎದುರಿಸಿದ ಕೆಲವು ಅಂಥಹುವೇ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್‌ನಿಂದ ಹೇಗೆ ಬಚಾವಾದೆ ಎಂಬುದನ್ನು ಸಹ ಅವರು ಹೇಳಿದ್ದಾರೆ.
ರೇಡಿಯೋ ಸಂದರ್ಶನದಲ್ಲಿ ಮಾತನಾಡಿರುವ ನಟಿ ಮಿನಿಷಾ ಲಂಬಾ, ''ಎಲ್ಲ ಉದ್ಯಮಗಳಲ್ಲಿಯೂ ಪುರುಷರು ಇದ್ದೇ ಇದ್ದಾರೆ. ಹಲವು ಉದ್ಯಮಗಳಲ್ಲಿ ಮಹಿಳೆಯರನ್ನು ಲೈಂಗಿಕ ವಾಂಛೆಗೆ ಬಳಸಿಕೊಳ್ಳುವ ಪ್ರಯತ್ನಗಳು ಆಗಿವೆ. ಸಿನಿಮಾ ಉದ್ಯಮ ಸಹ ಇದರಿಂದ ಹೊರತೇನಲ್ಲ'' ಎಂದಿದ್ದಾರೆ ಮಿನಿಷಾ.

''ಸಿನಿಮಾದ ಪಾತ್ರಕ್ಕಾಗಿ ಚರ್ಚೆಗೆ ಹೋದಾಗ ಪಾತ್ರ ನೀಡುವುದಾಗಿ ಖಚಿತಗೊಳಿಸುವ ಮುನ್ನ ಹೋಟೆಲ್‌ಗೆ ಕರೆಯುವುದು ಮನೆಗೆ ಕರೆಯುವು ಹೀಗೆ ಹಲವರು ಮಾಡಿದ್ದಾರೆ. ಆದರೆ ನಾನು ಕಚೇರಿಯಲ್ಲಿಯೇ ಭೇಟಿಯಾಗೋಣ ಎಂದು ಒತ್ತಾಯಿಸಿದ್ದೇನೆ'' ಎಂದಿದ್ದಾರೆ.
''ಸಾಮಾನ್ಯವಾಗಿ ಹೀಗೆ ಮನೆಗೆ, ಹೋಟೆಲ್‌ಗೆ ಕರೆದಾಗ ನಾನು ಅವರ ಉದ್ದೇಶ ಗೊತ್ತಿಲ್ಲದವಳಂತೆ ವರ್ತಿಸುತ್ತಿದ್ದೆ. ನೀವು ಏನು ಹೇಳುತ್ತಿದ್ದೀರೊ ಗೊತ್ತಾಗುತ್ತಿಲ್ಲ ಎಂದು ಅಮಾಯಕಳಂತೆ ವರ್ತಿಸಿ ಅಂಥಹವರಿಂದ ದೂರ ಸರಿಯುತ್ತಿದ್ದೆ'' ಎಂದಿದ್ದಾರೆ ಮಿನಿಷಾ.
''ಅಂಥವರೊಂದಿಗೆ ನಾನು ಸಹಕರಿಸಲಿಲ್ಲವೆಂದು ಕೆಲವು ಅವಕಾಶಗಳನ್ನು ನಾನು ಕಳೆದುಕೊಂಡಿದ್ದೇನೆ. ಆದರೆ ಅದೆಲ್ಲ ನನ್ನ ವೃತ್ತಿಯ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಲಿಲ್ಲ'' ಎಂದಿದ್ದಾರೆ ಮಿನಿಷಾ.
Recommended Video
2005 ರಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ಮಿನಿಷಾ ದೊಡ್ಡ ಅವಕಾಶಗಳನ್ನೇನು ಗಳಿಸಿಕೊಂಡಿಲ್ಲ. ಅವರ ವೃತ್ತಿ ಆರಂಭದಿಂದಲೂ ನಿಧಾನ ಗತಿಯಲ್ಲಿಯೇ ಸಾಗುತ್ತಿದೆ. ಎರಡು ಪಂಜಾಬಿ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ.


Click it and Unblock the Notifications










