ಬೆಂಗಳೂರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದ ಬಾಲಿವುಡ್ ಯುವ ನಟಿ

ಬೆಂಗಳೂರಿನ ಆಸ್ಪತ್ರೆಯಲ್ಲಿ ಬಾಲಿವುಡ್ ಹಾಗೂ ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿರುವ ಯುವನಟಿಯೊಬ್ಬರು ನಿಧನಹೊಂದಿದ್ದಾರೆ. ಆಕೆಗೆ ಕೇವಲ 27 ವರ್ಷ ವಯಸ್ಸಾಗಿತ್ತು.

ಬಂಗಾಳಿ ಹಾಗೂ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಮಿಷ್ಟಿ ಮುಖರ್ಜಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಶನಿವಾರ) ಅವರು ನಿಧನಹೊಂದಿದ್ದು, ಬೆಂಗಳೂರಿನಲ್ಲಿಯೇ ಅವರ ಅಂತ್ಯಕ್ರಿಯೆಗಳು ನಡೆದಿವೆ.

ನಟಿಯ ಕುಟುಂಬದವರು ನೀಡಿರುವ ಮಾಹಿತಿಯಂತೆ ನಟಿಯು 'ಕಿಟೋ ಡೈಯೆಟ್' (ಅತಿಯಾದ ಕೊಬ್ಬಿನಂಶ, ಕಡಿಮೆ ಕಾರ್ಬೊಹೈಡ್ರೇಟ್ ಯುಕ್ತ ಆಹಾರ ಸೇವನೆ) ಅಭ್ಯಾಸ ಮಾಡಿಕೊಂಡಿದ್ದರಂತೆ. ಇದೇ ಕಾರಣದಿಂದಲೇ ಆಕೆಯ ಆರೋಗ್ಯ ಹದಗೆಟ್ಟು ಅದು ಹಾಗೆಯೇ ಮುಂದುವರೆದು ನಟಿ ಮರಣ ಹೊಂದಿದ್ದಾರೆ.

Actress Mishti Mukharjee Passed Away Due To Kidney Failure

ಬಂಗಾಳಿ ಸಿನಿಮಾಗಳಲ್ಲಿ ನಟನೆ ಆರಂಭಿಸಿದ್ದ ನಟಿ ಮಿಷ್ಟಿ ಮುಖರ್ಜಿ, ನಂತರ ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆ ಮಾಡಿದರು, ಮೇ ಕೃಷ್ಣಾ ಹೂಂ, ಲೈಫ್ ಕಿ ತೋ ಲಗ್‌ ಗಯಿ ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಆದರೆ ಅವರಿಗೆ ಬಾಲಿವುಡ್‌ನಲ್ಲಿ ಹೆಚ್ಚು ಹೆಸರು ಗಳಿಸಿಕೊಟ್ಟಿದ್ದು ಐಟಂ ಹಾಡುಗಳು. ಹಲವು ಐಟಂ ಹಾಡುಗಳಿಗೆ ಅವರು ಹೆಜ್ಜೆ ಹಾಕಿದ್ದಾರೆ. ಮ್ಯೂಸಿಕ್ ವಿಡಿಯೋಗಳಲ್ಲೂ ಸಹ ನಟಿಸಿದ್ದಾರೆ.

More from Filmibeat

English summary
Bollywood and Bengali actress Mishti Mukharjee passed away due to kidney failure in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X