»   » ಬಿಕಿನಿಯಲ್ಲಿ 'ಧೋಬಿ ಘಾಟ್' ಬೆಡಗಿ ಹಾಟ್ ಚಿತ್ತಾರ

ಬಿಕಿನಿಯಲ್ಲಿ 'ಧೋಬಿ ಘಾಟ್' ಬೆಡಗಿ ಹಾಟ್ ಚಿತ್ತಾರ

Posted By: ಉದಯರವಿ
Subscribe to Filmibeat Kannada

ಬಾಲಿವುಡ್ ನ ಧೋಬಿ ಘಾಟ್ ಚಿತ್ರದ ನೋಡಿದ್ದರೆ ನಿಮಗೆ ಈ ಬೆಡಗಿಯ ಪರಿಚಯ ಇರುತ್ತದೆ. ಈಕೆಯ ಹೆಸರು ಮೋನಿಕಾ ದೊಗ್ರಾ. ಭಾರತೀಯ ಮೂಲದವರಾದರೂ ಅಮೆರಿಕಾದಲ್ಲಿ ಗಾಯಕಿಯಾಗಿ, ನಟಿಯಾಗಿ ಗುರುತಿಸಿಕೊಂಡವರು.

ಈ ತಾರೆಗಳು ಆಗಾಗ ತಮ್ಮನ್ನು ತಾವು ಹೊರಜಗತ್ತಿಗೆ ತೆರೆದಿಟ್ಟುಕೊಳ್ಳಲು ಹಾತೊರೈಯುತ್ತಿರುತ್ತಾರೆ. ಈ ಮಾತಿಗೆ ಮೋನಿಕಾ ಸಹ ಹೊರತಲ್ಲ. ಪುರುಷರ ಅಚ್ಚುಮೆಚ್ಚಿನ ಪತ್ರಿಕೆ 'ಮ್ಯಾಕ್ಸಿಮ್'ನಲ್ಲಿ ಆಗಾಗ ನಟಿಯರು ತಮ್ಮ ಚೆಲುವನ್ನು ಅನಾವರಣಗೊಳಿ ನಿರ್ಮಾಪಕ, ನಿರ್ದೇಶಕ ಗಮನಸೆಳೆಯುತ್ತಿರುತ್ತಾರೆ. [ಶ್ವೇತವರ್ಣದ ಬಿಕಿನಿಯಲ್ಲಿ ಶೃಂಗಾರ ದೇವತೆ ಎಮಿ]

ಇದೀಗ ಮೋನಿಕಾ ಸಹ 'ಮ್ಯಾಕ್ಸಿಮ್'ನಲ್ಲಿ ದೇಹದ ಸಿರಿಯನ್ನು ತೆರೆದಿಟ್ಟಿದ್ದಾರೆ. ಮೇ ಸಂಚಿಕೆಯಲ್ಲಿ ಅವರ ಚೆಲುವನ್ನು ಕಣ್ತುಂಬಿಕೊಳ್ಳಬಹುದು. "ಮೇನಿಕಾ ದೋಗ್ರಾ ಫೀಲ್ಸ್ ದ ಹೀಟ್" ಎಂಬ ಅಡಿಬರದಲ್ಲಿ ಸಂಚಿಕೆ ಹಾಟ್ ಹಾಟ್ ಫೋಟೋಗಳನ್ನು ಹೊತ್ತುತಂದಿದೆ, ಒಂದು ಲುಕ್ ಹಾಕಿ.

ಮ್ಯಾಕ್ಸಿಮ್ ನಲ್ಲಿ ಹಾಟ್ ಚೆಲುವು ಅನಾವರಣ

ಇದೇ ಮೊದಲಲ್ಲ ಮ್ಯಾಕ್ಸಿಮ್ ನಲ್ಲಿ ಮೋನಿಕಾ ಕಾಣಿಸುತ್ತಿರುವುದು. ಈ ಹಿಂದೊಮ್ಮೆ ಕಾಣಿಸಿಕೊಂಡಿದ್ದರಂತೆ. ಈ ಬಾರಿಯ ಫೋಟೋಗಳನ್ನು ಸೆರೆಹಿಡಿರುವುದು Toranj Kayvon, ಕೇಶವಿನ್ಯಾಸ ಮತ್ತು ಮೇಕಪ್ Elton J Fernandez.

ಮುಖಪುಟಕ್ಕೆ ಇದು ಎರಡನೇ ಸಲ

ಮೋನಿಕಾ ಮೊದಲು ಮ್ಯಾಕ್ಸಿಮ್ ಸಂಚಿಕೆ ಅಲಂಕರಿಸಿದ್ದು 2013ರಲ್ಲಿ. "ಒಂದು ವೇಳೆ ನಿಮಗೆ ನಂಬಿಕೆ ಬರಲಿಲ್ಲ ಅಂದ್ರೆ ಮಾರ್ಚ್ 2013ರ ಸಂಚಿಕೆ ತೆರೆದು ನೋಡಿ" ಎನ್ನುತ್ತಾರೆ ಮೋನಿಕಾ.

ಧೋಬಿ ಘಾಟ್ ಮೂಲಕ ಗಮನಸೆಳೆದ ಬೆಡಗಿ

ಇನ್ನೂ 30ರ ಹರೆಯದ ಈ ಚೆಲುವೆ ಅಭಿನಯಿಸಿದ್ದು ಕೆಲವೇ ಕೆಲವು ಚಿತ್ರಗಳಳ್ಳಾದರೂ ತಮ್ಮ ಚೆಲುವಿನ ಮೂಲಕ ಎಲ್ಲರ ಗಮನಸೆಳೆದವರು. ಅಮೀರ್ ಖಾನ್ ಜೊತೆಗಿನ 'ಧೋಬಿ ಘಾಟ್' ಚಿತ್ರದ ಮೂಲಕ ಬಾಲಿವುಡ್ ಈಕೆಯ ಕಡೆಗೆ ತಿರುಗಿ ನೋಡುವಂತಾಯಿತು.

ಮೋನಿಕಾ ಉತ್ತರಕ್ಕೆ ಪಡ್ಡೆಗಳು ತತ್ತರ

ಅದೆಲ್ಲಾ ಸರಿ ಬೆಡ್ ರೂಂ ಬಗ್ಗೆ ನಿಮ್ಮ ಕಾಮೆಂಟ್ ಏನು ಎಂದು ಕೇಳಿದ್ದಕ್ಕೆ ಈ ಬೆಡಗಿ ಕೊಟ್ಟ ಉತ್ತರಕ್ಕೆ ಪಡ್ಡೆಗಳು ತತ್ತರಿಸಿ ಹೋಗಿದ್ದಾರೆ. ಅವರ ಉತ್ತರ ಹೀಗಿತ್ತು, ""Sounds are good, words can be annoying!"

ಸದಾ ಬಿಸಿಬಿಸಿ ಚಿತ್ರಗಳನ್ನು ಹೊತ್ತು ತರುವ ಮ್ಯಾಕ್ಸಿಮ್

ಸದಾ ಬಿಸಿಬಿಸಿ ಚಿತ್ರಗಳನ್ನು ಹೊತ್ತು ತರುವ ಮ್ಯಾಕ್ಸಿಮ್ ಸಂಚಿಕೆ ಎರಡನೇ ಬಾರಿ ಮೋನಿಕಾಗೆ ಮಣೆ ಹಾಕಿದೆ. ಮ್ಯಾಕ್ಸಿಮ್ ಎಂದರೆ ಬಿಕಿನಿ ಚೆಲುವೆಯರಿಗೆ ವೇದಿಕೆ ಇದ್ದಂತೆ. ಧೋಬಿ ಘಾಟ್ ಬೆಡಗಿಯ ಬಿಕಿನಿ ಬೆಡಗು ಹೇಗಿದೆ?

English summary
'Dhobi Ghat' actress Monica Dogra has added oomph on cover of the May issue of Maxim magazine. The tagline of the magazine is 'Monica Dogra Feels the Heat' which is very apt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada