twitter
    For Quick Alerts
    ALLOW NOTIFICATIONS  
    For Daily Alerts

    ವಿರಾಟ್ ಕೊಹ್ಲಿ ಮೇಲಿದ್ದ ಹುಚ್ಚು ಪ್ರೀತಿ ಬಗ್ಗೆ ಬಹಿರಂಗ ಪಡಿಸಿದ ಬಾಲಿವುಡ್ ಸ್ಟಾರ್ ನಟಿ

    By ಫಿಲ್ಮಿಬೀಟ್ ಡೆಸ್ಕ್
    |

    ಬಾಲಿವುಡ್ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಮೃಣಾಲ್ ಠಾಕೂರ್ ಕ್ರಿಕೆಟ್ ಮೇಲಿನ ಆಸಕ್ತಿ ಮತ್ತು ವಿರಾಟ್ ಕೊಹ್ಲಿ ಮೇಲಿದ್ದ ಹೆಚ್ಚು ಪ್ರೀತಿಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತನ್ನ ಸಹೋದರನಿಂದ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯಿತು ಎಂದಿರುವ ಮೃಣಾಲ್ ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಯನ್ನು ಹುಚ್ಚರಂತೆ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ.

    ನಟಿ ಮೃಣಾಲ್ ಸದ್ಯ ತೂಫಾನ್ ಸಿನಿಮಾದ ಸೂಪರ್ ಸಕ್ಸಸ್ ನಲ್ಲಿದ್ದಾರೆ. ತೂಫಾನ್ ಸಿನಿಮಾ ಇತ್ತೀಚಿಗಷ್ಟೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಮೃಣಾಲ್ ತೆಲುಗಿನ ಸೂಪರ್ ಹಿಟ್ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಸರೇ ಹೇಳುವ ಹಾಗೆ ಈ ಸಿನಿಮಾ ಕ್ರಿಕೆಟ್ ಬಗ್ಗೆ ಇರುವ ಸಿನಿಮಾವಾಗಿದೆ.

    ತೆಲುಗಿನಲ್ಲಿ ನಟ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದರು. ಶ್ರದ್ಧಾ ಪಾತ್ರದಲ್ಲಿ ಬಾಲಿವುಡ್ ನಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಮೃಣಾಲ್ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡಿದ್ದಾರೆ. "ನಾನು ವಿರಾಟ್ ಕೊಹ್ಲಿಯನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದ ಒಂದು ಕಾಲವಿತ್ತು. ನನ್ನ ಸಹೋದರನಿಂದಾಗಿ ನಾನು ಕ್ರಿಕೆಟ್ ನೋಡಲು ಆರಂಭಿಸಿದೆ. ಸುಮಾರು ಐದು ವರ್ಷಗಳ ಹಿಂದೆ ಆತನ ಜೊತೆ ಕ್ರೀಡಾಂಗಣದಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಿದ್ದೆ. ನಾನು ಕೂಡ ನೀಲಿ ಜೆರ್ಸಿಯನ್ನು ಧರಿಸಿ ಟೀಂ ಇಂಡಿಯಾವನ್ನು ಹುರಿದುಂಬಿಸಿದ್ದೆ. ಈಗ ಜರ್ಸಿಯಂತಹ ಕ್ರಿಕೆಟ್ ಆಧಾರಿತ ಚಿತ್ರದ ಭಾಗವಾಗಿದ್ದೇನೆ ಇದು ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.

    Actress Mrunal Thakur says she was madly in love with Virat Kohli

    ಅಂದಹಾಗೆ ಜರ್ಸಿ ಸಿನಿಮಾಗೆ ಗೌತಮ್ ತಿನ್ನನೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ ಸೂಪರ್ ಸಕ್ಸಸ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ತೆಲುಗಿನಲ್ಲಿ ಸಕ್ಸಸ್ ಕಂಡ ಬಳಿಕ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ ಜರ್ಸಿ. ಅಂದಹಾಗೆ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ.

    ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜರ್ಸಿ ಸಿನಿಮಾ ನವೆಂಬರ್ 5 ಅಂದರೆ ದೀಪಾವಳಿಗೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮೃಣಾಲ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಉಮೇಶ್ ಶುಕ್ಲಾ ಅವರ ಆಂಖ್ ಮಿಚೋಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪರೇಶ್ ರಾವಲ್, ಶರ್ಮನ್ ಜೋಶಿ ಮತ್ತು ಅಭಿಮನ್ಯು ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮೃಣಾಲ್ ದಕ್ಷಿಣ ಭಾರತದ ಮತ್ತೊಂದು ಹಿಟ್ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ತಮಿಳಿನ ಹಿಟ್ ಸಿನಿಮಾ ಥಡಂ ಸಿನಿಮಾದ ರಿಮೇಕ್ ನಲ್ಲಿ ಮೃಣಾಲ್ ನಟಿಸುತ್ತಿದ್ದು, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಮೃಣಾಲ್ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ತೆಲುಗು ಸಿನಿಮಾದಲ್ಲಿ ಮೃಣಾಲ್ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಟಾಲಿವುಡ್ ಗೆ ಕಾಲಿಡುತ್ತಿದ್ದಾರೆ.

    English summary
    Bollywood Actress Mrunal Thakur says she was madly in love with Virat Kohli.
    Thursday, September 9, 2021, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X