»   » ಇನ್ನೂ ನಾನು ಕನ್ಯತ್ವ ಕಳೆದುಕೊಂಡಿಲ್ಲ ಎಂದ ನಟಿ

ಇನ್ನೂ ನಾನು ಕನ್ಯತ್ವ ಕಳೆದುಕೊಂಡಿಲ್ಲ ಎಂದ ನಟಿ

By: ರವಿಕಿಶೋರ್
Subscribe to Filmibeat Kannada

ನರ್ಗೀಸ್ ಫಕ್ರಿ, ಪಾಕಿಸ್ತಾನಿ ಮೂಲದ ಅಮೆರಿಕನ್ ರೂಪದರ್ಶಿ. ಇಂತಿಯಾಜ್ ಅಲಿ ನಿರ್ದೇಶನದ ರಣಬೀರ್ ಕಪೂರ್ ಹೀರೋ ಆಗಿ ಅಭಿನಯಿಸಿದ್ದ 'ರಾಕ್ ಸ್ಟಾರ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟು ಪ್ರೇಕ್ಷಕರ ಹೃದಯದ ಮೇಲೆ ಚಿತ್ತಾರ ಬಿಡಿಸಿದ್ದರು.

ಈಗ ಫಿಲಂಫೇರ್ ಮ್ಯಾಗಜಿನ್ ನ ಅಕ್ಟೋಬರ್ 2013ರ ಸಂಚಿಕೆಗಾಗಿ ಹಾಟ್ ಫೋಟೋಗಳನ್ನು ನೀಡಿದ್ದಾರೆ. ಮೂವತ್ತಮೂರರ ಹರೆಯದ ಈ ತಾರೆ ಸದ್ಯಕ್ಕೆ ಬಾಲಿವುಡ್ ಮೇಲೆ ತಮ್ಮ ಸಂಪೂರ್ಣ ದೃಷ್ಟಿನೆಟ್ಟಿದ್ದಾರೆ. 'ರಾಕ್ ಸ್ಟಾರ್' ಚಿತ್ರದ ಬಳಿಕ ನರ್ಗೀಸ್ ಅಭಿನಯದ 'ಮದ್ರಾಸ್ ಕೆಫೆ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ತಲುಪಲಿಲ್ಲ.

ಆ ಬಳಿಕ 'ಪತಾ ಪೋಸ್ಟರ್ ನಿಕ್ಲಾ ಹೀರೋ' ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸಿದ್ದರು. ಆ ಚಿತ್ರ ಫ್ಲಾಪ್ ಆಯಿತು. 2014ರಲ್ಲಿ 'ಮೆಯಿನ್ ತೇರಾ ಹೀರೋ, ಷೌಕೀನ್' ಎಂಬ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ನರ್ಗೀಸ್ ಹಾಟ್ ಫೋಟೋಗಳ ಕಡೆಗೆ ಒಂದು ಲುಕ್ ಹಾಕುತ್ತಾ ಅವರ ಹಾಟ್ ಸ್ಟೇಟ್ ಮೆಂಟ್ ಗಳನ್ನೂ ಓದಿ...

ರಾಕ್ ಸ್ಟಾರ್ ಜೊತೆ ಕಣ್ಣಾಮುಚ್ಚಾಲೆ

ರಾಕ್ ಸ್ಟಾರ್ ಚಿತ್ರದಲ್ಲಿ ಹಾಟ್ ಸನ್ನಿವೇಶಗಳು ಧಾರಾಳವಾಗಿದ್ದವು. ಆ ಕಾರಣಕ್ಕೆ ಇವರಿಬ್ಬರ ನಡುವೆ ಗುಸುಗುಸು ಸುದ್ದಿಯೂ ಕೇಳಿಬಂದಿತ್ತು. ರಣಬೀರ್ ಕಪೂರ್ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು.

ರಣಬೀರ್ ನನ್ನ ಬೆಸ್ಟ್ ಬಾಯ್ ಫ್ರೆಂಡ್

ಈ ಬಗ್ಗೆ ನರ್ಗೀಸ್ ಫಕ್ರಿ ಸ್ಪಷ್ಟೀಕರಣವನ್ನೂ ನೀಡಿದ್ದರು, ನಮ್ಮ ನಡುವೆ ಅತ್ಯದ್ಭುತವಾದ ಸ್ನೇಹಸಂಬಂಧವಿದೆ. ನಮ್ಮ ಸ್ನೇಹಸಂಬಂಧದ ಬಗ್ಗೆ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು.

ಮಾಡೆಲಿಂಗ್ ಫೀಲ್ಡ್ ನಲ್ಲಿ ಇದೆಲ್ಲಾ ಮಾಮೂಲು

ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ರಣಬೀರ್ ಗಿಂತಲೂ ಹಾಟ್ ಆಗಿದ್ದ ಅದೆಷ್ಟೋ ಪುರುಷರ ಜೊತೆಗೆ ಕೆಲಸ ಮಾಡಿದ್ದೇನೆ. ಅವರೊಂದಿಗೆ ತುಂಬಾ ಕ್ಲೋಸ್ ಆಗಿದ್ದೆ. ಗ್ಲಾಮರ್ ಫೀಲ್ಡ್ ನಲ್ಲಿ ಇದೆಲ್ಲಾ ಮಾಮೂಲಿ. ಅದನ್ನು ಬೇರೆ ಅರ್ಥ ಅರ್ಥೈಸಿಕೊಳ್ಳುವುದು ಸರಿಯಲ್ಲ.

ನನಗೆ ಸಾಕಷ್ಟು ಬಾಯ್ ಫ್ರೆಂಡ್ಸ್ ಇದ್ದಾರೆ

ಕೇವಲ ಭಾರತದಲ್ಲಷ್ಟೇ ಅಲ್ಲ ವರ್ಲ್ಡ್ ಫ್ಯಾಷನ್ ವೇದಿಕೆಗಳ ಬಹಳ ಕಾಲ ಕೆಲಸ ಮಾಡಿದ ಅನುಭವವಿದೆ. ಬಹಳಷ್ಟು ದೇಶಗಳಲ್ಲಿ ನನಗೆ ಬಾಯ್ ಫ್ರೆಂಡ್ಸ್ ಇದ್ದಾರೆ. ಬಾಯ್ ಫ್ರೆಂಡ್ ಎಂದರೆ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಇದುವರೆಗೂ ಯಾರೊಂದಿಗೂ ಮಲಗಿಲ್ಲ

ಇದುವರೆಗೂ ಯಾರೊಂದಿಗೂ ಸಂಬಂಧ ಇಟ್ಟುಕೊಂಡಿಲ್ಲ. ಐ ಮೀನ್ ಯಾರೊಂದಿಗೂ ಮಲಗಿಲ್ಲ (ದೈಹಿಕ ಸಂಪರ್ಕ) ಎಂದು ನಿರ್ಭಿಡೆಯಿಂದ ಹೇಳಿದ್ದಾರೆ ನರ್ಗೀಸ್.

ಬುಟ್ಟಿಗೆ ಹಾಕಿಕೊಳ್ಳುವ ಜಾಯಮಾನ ತಮ್ಮದಲ್ಲ

ಈ ರೀತಿ ಹೇಳಿ ಪುರುಷರನ್ನು ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬ ಜಾಯಮಾನ ತಮ್ಮದಲ್ಲ ಎಂದು ಹೇಳಿ ಫುಲ್ ಸ್ಟಾರ್ ಇಟ್ಟಿದ್ದಾರೆ. ಒಟ್ಟಾರೆಯಾಗಿ ತಮ್ಮ ಬೋಲ್ಡ್ ಅಭಿನಯ ಹಾಗೂ ಮಾತುಗಳಿಂದ ನರ್ಗೀಸ್ ಎಲ್ಲರ ಗಮನಸೆಳೆಯುತ್ತಿದ್ದಾರೆ.

English summary
Nargis Fakhri is cover girl of Filmafare magaizne October 2013. Her last release was Madras Cafe opposite John Abraham, She has appeared on America’s Next Top Model and made her Bollywood debut with 2011 Imtiaz Ali’s Rockstar.
Please Wait while comments are loading...