"ಮೊದಲ ಕಿಸ್ಸಿಂಗ್ ಸೀನ್ ಬಳಿಕ ನಿದ್ದೆ ಮಾಡಿಲ್ಲ.. ಡೆಟಾಲ್‌ನಲ್ಲಿ ಬಾಯಿ ತೊಳೆದುಕೊಂಡೆ" ನೀನಾ ಗುಪ್ತಾ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ ನಟಿ ನೀನಾ ಗುಪ್ತಾ ಸಿನಿಮಾ ಪ್ರೇಮಿಗಳಿಗೆ ಹೊಸಬರು ಏನಲ್ಲ. ಅವರ ಸಿನಿಮಾಗಳನ್ನು ಇಷ್ಟ ಪಟ್ಟವರು ಬಳ ಮಂದಿ ಇದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲೇ ಬೋಲ್ಡ್ ಸೀನ್‌ಗಳಲ್ಲಿ ನಟಿಸುವ ಧೈರ್ಯ ಮಾಡಿದ್ದ ನಟಿ.

ಈಗಲೂ ಬೋಲ್ಡ್ ಸಿನಿಮಾದಲ್ಲಿಯೇ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್ ನಿರ್ಮಾಣದ ನಾಲ್ಕು ಕತೆಗಳ ಸಿನಿಮಾ 'ಲಸ್ಟ್ ಸ್ಟೋರೀಸ್ 2' ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಟೀಸರ್ ಹಾಗೂ ಟ್ರೈಲರ್‌ನಲ್ಲಿ ನೀನಾ ಗುಪ್ತರ ಬೋಲ್ಡ್ ಡೈಲಾಗ್‌ಗಳೇ ಹೈಲೈಟ್ ಆಗಿವೆ.

ಇತ್ತೀಚೆಗ 'ಲಸ್ಟ್ ಸ್ಟೋರೀಸ್ 2' ಸಿನಿಮಾದ ಪ್ರಚಾರಕ್ಕಾಗಿ ನೀಡಿದ ಸಂದರ್ಶನದಲ್ಲಿ ನೀನಾ ಗುಪ್ತ ತನ್ನ ಮೊದಲ ಮುತ್ತಿನ ಅನುಭವದ ಬಗ್ಗೆ ಮಾತಾಡಿದ್ದಾರೆ. ಫಸ್ಟ್ ಟೈಮ್ ಕಿಸ್ ಮಾಡಿದ ಬಳಿಕ ಡೆಟಾಲ್‌ನಲ್ಲಿ ಬಾಯಿ ತೊಳೆದುಕೊಂಡ ಘಟನೆಯನ್ನು ವಿವರಿಸಿದ್ದಾರೆ.

Neena Gupta a about her First Kiss

ಮೊದಲ ಚುಂಬನದ ದೃಶ್ಯದ ಬಗ್ಗೆ ಹೇಳಿದ್ದೇನು?

ನೀನಾ ಗುಪ್ತಾ ಬೋಲ್ಡ್ ರೋಲ್‌ಗಳಲ್ಲಷ್ಟೇ ನಟಿಸುವುದಿಲ್ಲ. ಬದಲಿಗೆ ಬೋಲ್ಡ್ ಆಗಿ, ನೇರವಾಗಿ ತಮಗೆ ಅನಿಸಿದ್ದನ್ನು ಹೇಳುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನೀನಾ ಗುಪ್ತಾ 90ರ ದಶಕದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಸಮಯದಲ್ಲಿ ಟಿವಿ ಶೋಗಾಗಿ ಕಿಸ್ಸಿಂಗ್ ದೃಶ್ಯವೊಂದರಲ್ಲಿ ನಟಿಸಬೇಕಿತ್ತು. ಈ ವೇಳೆ ಆದ ಅನುಭವವನ್ನು ವಿವರಿಸಿದ್ದಾರೆ.

ಆ ವೇಳೆ ಬಾಲಿವುಡ್ ಸಿನಿಮಾಗಳಲ್ಲೇ ಚುಂಬಲನದ ದೃಶ್ಯಗಳು ಕಾಮನ್ ಆಗಿರಲಿಲ್ಲ. ಇಂತಹ ಸಮಯದಲ್ಲಿ ನೀನಾ ಗುಪ್ತಾ ಮೊದಲ ಬಾರಿಗೆ ದೃಶ್ಯವೊಂದಕ್ಕಾಗಿ ಸಹ ನಟ ದಿಲೀಪ್ ಧವನ್‌ರನ್ನು ಚುಂಬಿಸಲು ಸಮ್ಮತಿಸಿದ್ದರು. ಆ ಕಿಸ್ಸಿಂಗ್ ದೃಶ್ಯದ ಬಳಿಕ ಏನಾಯ್ತು? ಅನ್ನೋದನ್ನು ನೀನಾ ಗುಪ್ತಾ ವಿವರಿಸಿದ್ದಾರೆ.

ಡೆಟಾಲ್‌ನಲ್ಲಿ ಬಾಯಿ ತೊಳೆದುಕೊಂಡೆ

ನೀನಾ ಗುಪ್ತಾ ಮೊದಲ ಬಾರಿಗೆ ಚುಂಬನದ ದೃಶ್ಯ ಹೇಗಿತ್ತು? ಸನ್ನಿವೇಶವೇನು? ಅನ್ನೋದನ್ನು ವಿವರಿಸಿದ್ದಾರೆ. ಹಲವು ವರ್ಷಗಳ ಹಿಂದೆ ನೀನಾ ಗುಪ್ತಾ ಸಹ ನಟ ದಿಲೀಪ್ ಧವನ್‌ರೊಂದಿಗೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ವೇಳೆ ಭಾರತೀಯ ಟಿವಿ ಇತಿಹಾಸದಲ್ಲಿ ಮೊದಲ ಬಾರಿಗೆ ಲಿಪ್ ಟು ಲಿಪ್ ಕಿಸ್ ಮಾಡಬೇಕಿತ್ತು. ನೋಡೋಕೆ ಸುಂದರವಾಗಿದ್ದ ನಟನಿಗೆ ಚುಂಬಿಸಿದ ಬಳಿಕವೂ ನೀನಾ ಗುಪ್ತಾ ಕಸಿವಿಸಿಗೊಂಡಿದ್ದರು. ರಾತ್ರಿ ನಿದ್ದೆ ಮಾಡಿರಲಿಲ್ಲ. ಚುಂಬಿಸಿದ ಬಳಿಕ ಡೆಟಾಲ್‌ನಲ್ಲಿ ಬಾಯಿ ತೊಳೆದುಕೊಂಡಿದ್ದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.

"ಕೆಲವರಿಗೆ ಕಾಮಿಡಿ ಮಾಡಲು ಸಾಧ್ಯವಿಲ್ಲ. ಕೆಲವರಿಗೆ ಕ್ಯಾಮರಾ ಮುಂದೆ ಅಳಲು ಸಾಧ್ಯವಿಲ್ಲ. ನಾನು ಅಷ್ಟೇ ಈ ಸೀನ್ ಮುಗಿಯುತ್ತಿದ್ದಂತೆ ನನ್ನ ಬಾಯಿಯನ್ನು ಡೆಟಾಲ್‌ನಲ್ಲಿ ತೊಳೆದುಕೊಂಡೆ. ನನಗೆ ಪರಿಚಯ ಇಲ್ಲದವರಿಗೆ ಚುಂಬಿಸುವುದು ನನಗೆ ಕಷ್ಟ ಎನಿಸಿತ್ತು." ಎಂದು ನೀನಾ ಗುಪ್ತಾ ಹೇಳಿದ್ದಾರೆ.

Neena Gupta a about her First Kiss

ಆ ಸೀನ್ ಪ್ರಸಾರ ಆಗಲಿಲ್ಲ

ನೀನಾ ಗುಪ್ತಾ 'ದಿಲ್‌ಲಗಿ' ಅನ್ನೋ ಧಾರಾವಾಹಿಗಾಗಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದರು. ಅಷ್ಟೆಲ್ಲ ಕಷ್ಟ ಪಟ್ಟು ದೃಶ್ಯದಲ್ಲಿ ಚುಂಬಿಸಿದ್ದರೂ, ನಿರ್ದೇಶಕರು ಕೊನೆಯ ಹಂತದಲ್ಲಿ ತೆಗೆದು ಹಾಕಿದ್ದನ್ನು ನೆನಪಿಸಿಕೊಂಡಿದ್ದಾರೆ. ಸೆನ್ಸಾರ್ ಸಮಸ್ಯೆ ಹಾಗೂ ವೀಕ್ಷಕರು ತಿರುಗಿ ಬೀಳಬಹುದು ಎಂದು ಈ ನಿರ್ಧಾರಕ್ಕೆ ಬಂದಿದ್ದರು.

ನೀನಾ ಗುಪ್ತಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. 'ಉತ್ಸವ್' ಅಂತಹ ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಪ್ರತಿಕ್ರಿಯೆ ನೀಡಿದ್ದು," ಆ ದೃಶ್ಯವೂ ತುಂಬಾನೇ ಕಷ್ಟಕರವಾಗಿತ್ತು" ಎಂದು ಹೇಳಿದ್ದಾರೆ. ಇವೇ ನಟಿಸಿದ 'ಲಸ್ಟ್ ಸ್ಟೋರೀಸ್ 2' ಜೂನ್ 29ಕ್ಕೆ ರಿಲೀಸ್ ಆಗಲಿದೆ.

More from Filmibeat

English summary
Actress Neena Gupta Says she washed her mouth after her first kiss with co star, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X