»   » 'ಹಿಂದಿ ಬಿಗ್ ಬಾಸ್ 10'ಗೆ ಕರೆದರೂ ಬೇಡ ಅಂದ ನಟಿ ಮಣಿಯರು!

'ಹಿಂದಿ ಬಿಗ್ ಬಾಸ್ 10'ಗೆ ಕರೆದರೂ ಬೇಡ ಅಂದ ನಟಿ ಮಣಿಯರು!

By: ಸೋನು ಗೌಡ
Subscribe to Filmibeat Kannada

ಇತ್ತ 'ಕನ್ನಡ ಬಿಗ್ ಬಾಸ್ ಸೀಸನ್ 4' ರಿಯಾಲಿಟಿ ಶೋ ಆರಂಭವಾಗಲು ಕ್ಷಣಗಣನೆ ಆರಂಭವಾದರೆ, ಅತ್ತ ಹಿಂದಿ ಬಿಗ್ ಬಾಸ್ ಸೀಸನ್ 10ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಎಂದಿನಂತೆ ಇಲ್ಲಿ ಸುದೀಪ್ ಅವರು ನಡೆಸಿಕೊಟ್ಟರೆ, ಅಲ್ಲಿ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ನಡೆಸಿಕೊಡಲಿದ್ದಾರೆ.

ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಬಿಗ್ ಬಾಸ್ ಮನೆಗೆ ಹೋಗುವ ಕೆಲವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ಸಿನಿಮಾ, ರಾಜಕೀಯ, ಸುದ್ದಿ ವಾಹಿನಿ, ಕಿರುತೆರೆ ಹಾಗೂ ಸಾಮಾಜಿಕ ಜಾಲತಾಣ ಕ್ಷೇತ್ರದಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.[ಬಿಗ್ ಬಾಸ್ ಕನ್ನಡ 4 : ಇವರೇ ಕಣ್ರಿ 15 ಸ್ಪರ್ಧಿಗಳು]

ಆದರೆ ಹಿಂದಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಹಿಂದಿ ಬಿಗ್ ಬಾಸ್ 10 ನಲ್ಲಿ ಕೊಂಚ ಬದಲಾವಣೆ ಇರಲಿ ಅಂತ ಎಲ್ಲಾ ಕ್ಷೇತ್ರಕ್ಕೂ ಕೈ ಹಾಕಿರುವ ಬಿಗ್ ಬಾಸ್, ಜನಸಾಮಾನ್ಯರಿಗೂ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಸ್ವಾಮೀಜಿ, ಜಟ್ಟಿ ಕಾಳಗದವರು, ಕೃಷಿಕ ಸೇರಿದಂತೆ ಆಟೋ ಡ್ರೈವರ್ ಗಳು ಕೂಡ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.

ಇದೆಲ್ಲಾ ಇರ್ಲಿ, ಅಂದಹಾಗೆ ಬಿಗ್ ಬಾಸ್ ಮನೆಗೆ ಬನ್ನಿ ಅಂತ ಕರೆ ಕೊಟ್ಟರು, ಸಹವಾಸ ಬೇಡಪ್ಪಾ ಅಂತ ರಿಜೆಕ್ಟ್ ಮಾಡಿದವರು ಇಬ್ಬರು ಕಿರುತೆರೆ ನಟಿಯರು. ಯಾರು ಅಂತ ನೋಡಲು ಮುಂದೆ ಓದಿ....

ಕಿರುತೆರೆ ನಟಿ ಕಮ್ ಮಾಡೆಲ್ ನಿಯಾ ಶರ್ಮಾ

ಜೀ ಟಿವಿ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ 'ಜಮಾಯಿ ರಾಜ' ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ರೋಶನಿ ಅಲಿಯಾಸ್ ನಿಯಾ ಶರ್ಮಾ ಅವರಿಗೆ, 'ಬಿಗ್ ಬಾಸ್ ಸೀಸನ್ 10' ರಲ್ಲಿ ಭಾಗವಹಿಸಲು ಬುಲಾವ್ ಬಂದಿತ್ತು.[ನಿರ್ಮಾಪಕರ ಪ್ರತಿಭಟನೆ: 'ಬಿಗ್ ಬಾಸ್ ಕನ್ನಡ-4'ಗೆ ಆತಂಕ ಇಲ್ಲ.!]

ದಿಕ್ಕರಿಸಿದ ನಿಯಾ ಶರ್ಮಾ

ಆದ್ರೆ ನಟಿ ಕಮ್ ಮಾಡೆಲ್ ನಿಯಾ ಶರ್ಮಾ ಅವರು ಬೇಡ ಅಂತ ನಯವಾಗಿ ನಿರಾಕರಣೆ ಮಾಡಿದ್ದಾರೆ. ಮಾತ್ರವಲ್ಲದೇ 'ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಾದರೆ, ಅದು ಡ್ಯಾನ್ಸ್ ರಿಯಾಲಿಟಿ ಶೋ 'ಜಲಕ್ ದಿಕ್ಲಾ ಆಜಾ'ದಲ್ಲಿ ಮಾತ್ರ ಅಂತ ವಿಚಿತ್ರ ಹೇಳಿಕೆ ಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸದ್ಯಕ್ಕೆ ನಿಯಾ ಶರ್ಮಾ ಕಾಮಿಡಿ ಶೋನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇನ್ನೋರ್ವ ಬೆಡಗಿ ಜೆನ್ನಿಫರ್

ಇನ್ನು ಬಿಗ್ ಬಾಸ್ ಕರೆಗೆ ಓಗೋಡದ ಇನ್ನೋರ್ವ ಚೆಲುವೆ ಕಿರುತೆರೆ ನಟಿ ಜೆನ್ನಿಫರ್ ವಿನ್ಗೆಟ್. ಸದ್ಯ ನಟಿ ಬಿಪಾಶಾ ಬಸು ಪತಿ ಆಗಿರುವ ಕರಣ್ ಗ್ರೋವರ್ ಸಿಂಗ್ ಅವರ ಮಾಜಿ ಪತ್ನಿ ಜೆನ್ನಿಫರ್ ಬಿಗ್ ಬಾಸ್ ಮನೆಯ ಕದ ತಟ್ಟಲು ಇಚ್ಛಿಸಲಿಲ್ಲ.

ಕಿರುತೆರೆಯ ಮುದ್ದು ಬೆಡಗಿ

ನಟಿ ಜೆನ್ನಿಫರ್ ಅವರು ಹಿಂದಿ ಕಿರುತೆರೆ ಲೋಕದಲ್ಲಿ ಬಹಳ ಖ್ಯಾತಿ ಗಳಿಸಿದ್ದಾರೆ. 'ಸರಸ್ವತಿಚಂದ್ರ', 'ದಿಲ್ ಮಿಲ್ ಗಯೇ', 'ಕಸೌಟಿ ಜಿಂದಗಿ ಕೀ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ನಟಿಸಲಿರುವ ಹೊಸ ಧಾರಾವಾಹಿ 'ಬೇಹಧ್' ಇದೇ ತಿಂಗಳು 11 ರಿಂದ ಆರಂಭವಾಗಲಿದ್ದು, ಸೋನಿ ವಾಹಿನಿಯಲ್ಲಿ ಮೂಡಿಬರಲಿದೆ.

ಬಿಗ್ ಬಾಸ್ 10 ಆರಂಭ ಯಾವಾಗ?

ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಸಾರಥ್ಯದ 'ಬಿಗ್ ಬಾಸ್ ಸೀಸನ್ 10' ಪ್ರೀಮಿಯರ್ ಅಕ್ಟೋಬರ್ 16, ಭಾನುವಾರ 9 ಗಂಟೆಗೆ ಗ್ರ್ಯಾಂಡ್ ಆಗಿ ಓಪನಿಂಗ್ ಆಗಲಿದೆ. ಜೊತೆಗೆ ಪ್ರತೀದಿನ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

English summary
Popular actress Nia Sharma, who won accolades as Roshni in Zee TV's hit show, Jamai Raja is currently missing from the television screens post quitting her popular show. Actress Nia Sharma and Actress Jennifer Winget rejected the offer to be a part of super successful reality show Bigg Boss 10.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada