ಬೆಂಗಳೂರು ಹುಡುಗಿಗೆ ಬಾಲಿವುಡ್ ನಲ್ಲಿ ಸಿಕ್ಕಿದೆ ಸೂಪರ್ ಚಾನ್ಸ್
ಕರ್ನಾಟಕದ ಹುಡುಗಿಯರು ಬಾಲಿವುಡ್ ನಲ್ಲಿ ಮೋಡಿ ಮಾಡುವುದು ಹೊಸತೇನಲ್ಲ. ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಅಂತಹ ನಟಿಯರು ಬೆಂಗಳೂರಿನಿಂದ ಹೋಗಿ ಬಿಟೌನ್ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ. ಇದೀಗ ಇವರ ಸಾಲಿಗೆ ಮತ್ತೋರ್ವ ಬೆಂಗಳೂರು ಹುಡುಗಿ ಸೇರಿಕೊಳ್ಳುತ್ತಿದ್ದಾರೆ.
'ನಿಧಿ ಅಗರ್ವಾಲ್' ಎಂಬ ಬೆಂಗಳೂರಿನ ಚೆಲುವೆ ಈಗ ಬಾಲಿವುಡ್ ಸಿನಿಮಾರಂಗದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಮಾಡೆಲಿಂಗ್ ನಲ್ಲಿ ಮಿಂಚು ಹರಿಸುತ್ತಿದ್ದ ನಿಧಿ, ಈಗ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ಸಿದ್ದವಾಗಿದ್ದಾರೆ.
ತಮ್ಮ ಚೊಚ್ಚಲ ಚಿತ್ರದಲ್ಲೇ ಸೂಪರ್ ಚಾನ್ಸ್ ಪಡೆದುಕೊಂಡಿದ್ದು, ಬಾಲಿವುಡ್ ಸ್ಟಾರ್ ನಟನ ಪುತ್ರನಿಗೆ ನಾಯಕಿ ಆಗುತ್ತಿದ್ದಾರೆ. ಮುಂದೆ ಓದಿ...

ಟೈಗರ್ ಶ್ರಾಫ್ ಜೊತೆ ನಿಧಿ ಅಗರ್ವಾಲ್
ನಿಧಿ ಅಗರ್ವಾಲ್ ಗೆ ಈಗ ನಟ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ನಟನೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಒಲಿದು ಬಂದಿದೆ. 'ಮುನ್ನಾ ಮೈಕೆಲ್' ಎಂಬ ಚಿತ್ರದ ಲೀಡ್ ರೋಲ್ ನಲ್ಲಿ ನಿಧಿ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ.

ಅದ್ದೂರಿ ಎಂಟ್ರಿ
ಮೊದಲ ಬಾಲಿವುಡ್ ಸಿನಿಮಾದಲ್ಲಿ ದೊಡ್ಡ ಅವಕಾಶ ನಿಧಿ ಅಗರ್ವಾಲ್ ಪಾಲಾಗಿದೆ. ಈ ಚಿತ್ರದ ಪೋಸ್ಟರ್ ನಲ್ಲಿ 'ನಿಧಿ ಅಗರ್ವಾಲ್ ಅವರ ಚೊಚ್ಚಲ ಚಿತ್ರ' ಎಂದು ಅದ್ದೂರಿಯಾಗಿ ಚಿತ್ರತಂಡ ಇವರನ್ನು ಲಾಂಚ್ ಮಾಡುತ್ತಿದೆ.

ಓದಿದ್ದು... ಬೆಳೆದದ್ದು...
ನಿಧಿ ಅಗರ್ವಾಲ್ ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಈಕೆ ಕ್ರಿಸ್ತ್ ಯೂನಿವರ್ಸಿಟಿ ಯಲ್ಲಿ ಪದವಿ ಪಡೆದಿದ್ದಾರೆ.

ಒಳ್ಳೆಯ ಡ್ಯಾನ್ಸರ್
ನಿಧಿ ಅಗರ್ವಾಲ್ ಒಳ್ಳೆಯ ಡ್ಯಾನ್ಸರ್ ಆಗಿದ್ದಾರೆ. ಮಾಡೆಲಿಂಗ್ ದೊಡ್ಡ ಹೆಸರು ಮಾಡಿದ್ದ ನಿಧಿ 'ಹಿಪ್ ಹಾಪ್' ಸೇರಿದಂತೆ ಕೆಲ ಡ್ಯಾನ್ಸ್ ಗಳಲ್ಲಿ ಪರಿಣಿತರಾಗಿದ್ದಾರೆ. ಜೊತೆಗೆ ನಟನೆಗೆ ಬೇಕಾದ ಎಲ್ಲ ಸಿದ್ದತೆ ಮುಗಿಸಿ ಈಗ ಬಾಲಿವುಡ್ ನಲ್ಲಿ ನೆಲೆ ನಿಲ್ಲುವ ವಿಶ್ವಾಸದಲ್ಲಿದ್ದಾರೆ.


Click it and Unblock the Notifications











