For Quick Alerts
  ALLOW NOTIFICATIONS  
  For Daily Alerts

  ಅಕ್ರಮ ಹಣ ವರ್ಗಾವಣೆ: ನಟಿ ನೋರಾ ಫತೇಹಿಗೆ ಇಡಿ ಸಮನ್ಸ್

  |

  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಹಾಟ್ ಬೆಡಗಿ ನೊರಾ ಫತೇಹಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.

  ಬಂಧಿತ ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣ ವಿಚಾರಣೆಗಾಗಿ ನೋರಾ ಫತೇಹಿಗೆ ಸಮನ್ಸ್ ನೀಡಲಾಗಿದ್ದು, ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನೋರಾ ಫತೇಹಿಯದ್ದು ಪಾಲಿದೆ ಎನ್ನಲಾಗುತ್ತಿದೆ.

  ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೂ ಇಡಿ ಎರಡು ಬಾರಿ ಸಮನ್ಸ್ ನೀಡಿ ವಿಚಾರಣೆ ನಡೆಸಿದೆ. ವಂಚಕ ಸುಕೇಶ್‌ ಹಾಗೂ ಜಾಕ್ವೆಲಿನ್‌ ನಡುವೆ ಹಣಕಾಸು ವ್ಯವಹಾರ ನಡೆದಿತ್ತು ಎನ್ನಲಾಗಿದೆ. ನೊರಾ ಫತೇಹಿಗೂ ಸುಕೇಶ್‌ಗೂ ನಂಟು ಇದ್ದಿದ್ದರಿಂದ ಇದೀಗ ನೋರಾ ಫತೇಹಿಯನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

  ಸುಕೇಶ್‌ ದೊಡ್ಡ ಮೊತ್ತದ ಹಣವನ್ನು ಬಾಲಿವುಡ್ ಸೆಲೆಬ್ರಿಟಿಗಳಿಗೆ ನೀಡಿದ್ದು, ಇದು ಸಂಭಾವನೆ ಅಥವಾ ಇನ್ನಾವುದೇ ವ್ಯಾವಹಾರಿಕ ರೂಪದಲ್ಲಿ ಹೋಗಿದೆಯೇ ಅಥವಾ ಸುಕೇಶ್‌ಗೆ ಅಕ್ರಮ ಹಣ ವರ್ಗಾವಣೆ ಮಾಡಲು ಈ ನಟಿಯರು ಸಹಕರಿಸಿದ್ದಾರೆಯೇ ಎಂದು ಇಡಿ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ.

  ಸುಕೇಶ್ ಚಂದ್ರಶೇಖರ್ ಭಾರಿ ಐನಾತಿ ವಂಚಕ ಮತ್ತು ಸುಲಿಗೆಕೋರನಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ಜೈಲಿನಲ್ಲಿದ್ದಾನೆ. ಆದರೆ ಅಲ್ಲಿಂದಲೇ ಫೋನ್ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ, ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ. ಜೈಲಿನಲ್ಲಿದ್ದುಕೊಂಡೆ ಸುಮಾರು 200 ಕೋಟಿ ಹಣವನ್ನು ಸುಲಿಗೆ ಮಾಡಿದ್ದಾನೆ ಸುಕೇಶ್ ಚಂದ್ರಶೇಖರ್.

  ಸುಕೇಶ್‌ನ ವಂಚನೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಹಾಗೂ ಇಡಿ ತನಿಖಾ ಸಂಸ್ಥೆಗಳು ಆಗಸ್ಟ್ 22 ರಂದು ಚೆನ್ನೈನಲ್ಲಿರುವ ಸುಕೇಶ್‌ನ ಮನೆಯ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ 16 ದುಬಾರಿ ಕಾರುಗಳು, ಕೇಜಿಗಟ್ಟಲೆ ಚಿನ್ನ ಇನ್ನಿತರ ಐಶಾರಾಮಿ ವಸ್ತುಗಳನ್ನು ಇಡಿ ವಶಪಡಿಸಿಕೊಂಡಿದೆ. ಹಾಗೂ ಸುಕೇಶ್‌ನ ಐಶಾರಾಮಿ ಬಂಗಲೆಯನ್ನು ಸೀಜ್ ಮಾಡಿದೆ.

  ಸುಕೇಶ್ ಚಂದ್ರಶೇಖರ್ ಈಗಾಗಲೇ ತಿಹಾರ್ ಜೈಲಿನಲ್ಲಿದ್ದು ಅಲ್ಲಿಂದಲೇ ಕಾರ್ಪೊರೇಟ್ ಸಂಸ್ಥೆಗಳಿಗೆ, ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಕೋಟ್ಯಂತರ ರುಪಾಯಿ ವಸೂಲಿ ಮಾಡುತ್ತಿದ್ದ. ಈತ ಹಣ ವಸೂಲಿ ಮಾಡುತ್ತಿರುವ ವಿಷಯ ತಿಳಿದ ದೆಹಲಿ ಪೊಲೀಸರು ಮೊದಲಿಗೆ ಸುಮಾರು 50 ಕೋಟಿ ಹಣ ವಂಚಿಸಿರಬಹುದು ಎಂದುಕೊಂಡಿದ್ದರು. ನಂತರ ಅದು 200 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಾನೆಂಬುದು ಗೊತ್ತಾದಾಗ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಿದರು.

  ಸುಕೇಶ್ ಚಂದ್ರಶೇಖರ್ ಅನ್ನು ದೆಹಲಿ ಪೊಲೀಸರು ನಾಲ್ಕು ವರ್ಷಗಳ ಹಿಂದೆಯೇ ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ತಮಿಳುನಾಡಿನ ಜನಪ್ರಿಯ ರಾಜಕಾರಣಿ ಟಿಟಿವಿ ದಿನಕರನ್​ಗೆ ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯಾದ ಎರಡೆಲೆ ಚಿಹ್ನೆಯನ್ನು ನಿಮ್ಮ ಬಣಕ್ಕೆ ಕೊಡಿಸುತ್ತೇನೆ. ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಂಪರ್ಕವಿದೆ. ಅವರ ಮೂಲಕ ನಿಮ್ಮ ರಾಜಕೀಯ ಪಕ್ಷದ ಬಣಕ್ಕೆ ಎರಡೆಲೆ ಚಿಹ್ನೆ ಸಿಗುವಂತೆ ಮಾಡುತ್ತೇನೆ. ಇದಕ್ಕಾಗಿ ನನಗೆ 50 ಕೋಟಿ ರು ನೀಡಬೇಕೆಂದು ಟಿಟಿವಿ ದಿನಕರನ್​ಗೆ ಬೇಡಿಕೆ ಇಟ್ಟಿದ್ದ. ಈತನ ಮಾತು ನಂಬಿ ದಿನಕರನ್ ಸ್ಪಲ್ಪ ಹಣ ಕೂಡ ಕೊಟ್ಟಿದ್ದರು. ಬಳಿಕ ಚುನಾವಣಾ ಚಿಹ್ನೆ ಸಿಗದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೆಹಲಿಯ ಹಯಾತ್ ಹೊಟೆಲ್​ನ ಕೊಠಡಿಯ ಮೇಲೆ ದಾಳಿ ನಡೆಸಿದ್ದರು. ಸುಕೇಶ್ ಚಂದ್ರಶೇಖರ್ ತಂಗಿದ್ದ ರೂಮಿನಲ್ಲಿ ಬರೋಬ್ಬರಿ 1.3 ಕೋಟಿ ರು ಪತ್ತೆಯಾಗಿತ್ತು. ಇಷ್ಟು ಹಣವನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಸುಕೇಶ್ ಚಂದ್ರಶೇಖರ್​ನನ್ನು ಬಂಧಿಸಿದ್ದರು.

  English summary
  Actress Nora Fatehi summoned by ED in money laundering case. ED doubting Nora may helped conman Sukhesh Chandrashekar to launder his money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X