For Quick Alerts
  ALLOW NOTIFICATIONS  
  For Daily Alerts

  ಹೋಟೆಲ್‌ನಲ್ಲಿ ಆದ ಭಯಾನಕ ಅನುಭವ ತೆರೆದಿಟ್ಟ ನಟಿ

  |

  ಮನುಷ್ಯ, ದೇವರ ಇರುವಿಕೆಯನ್ನು ನಂಬಿದ ಕಾಲದಿಂದಲೂ ದೆವ್ವದ ಇರುವಿಕೆಯನ್ನೂ ನಂಬುತ್ತಾ ಬರುತ್ತಿದ್ದಾನೆ. ದೆವ್ವಗಳು ಇದ್ದಾವೆಯೋ ಇಲ್ಲವೋ ಎಂಬುದು ತಲೆ-ತಲಾಂತರಗಳಿಂದಲೂ ದೊಡ್ಡ ಚರ್ಚೆಯಾಗಿ ಸಾಗಿಬರುತ್ತಲೇ ಇದೆ. ದೆವ್ವ ಇದೆಯೋ ಇಲ್ಲವೋ ಸ್ಪಷ್ಟವಿಲ್ಲ, ಆದರೆ ಸಿನಿಮಾಗಳಲ್ಲಿಯಂತೂ ದೆವ್ವ ಇದೆ, ಆ ದೆವ್ವ ನಿರ್ಮಾಪಕರಿಗೆ ಒಳ್ಳೆಯ ಹಣವನ್ನೇ ಮಾಡಿಕೊಡುತ್ತಿದೆ!

  ದೆವ್ವ ಇದೆ-ಇಲ್ಲ ಎಂಬ ಚರ್ಚೆಗೆ ಕೊನೆ-ಮೊದಲಿಲ್ಲ. ಅನುಭವಿಸಿದವರು ಇದೆಯೆಂದು, ಅನುಭವಿಸದವರು ಇಲ್ಲವೆಂದು ಹೇಳುತ್ತಾರೆ. ಇದೀಗ ನಟಿ ನುಸ್ರತ್ ಬರೂಚಾ, ತಮಗಾದ ದೆವ್ವದ ಅನುಭವ, ಹಾಗೂ ತಾವು ಏಕೆ ದೆವ್ವ ಇದೆಯೆಂದು ನಂಬುತ್ತೇನೆ ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ.

  ನುಸ್ರತ್ ಒಮ್ಮೆ ದೆಹಲಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರಂತೆ. ಆ ಐಶಾರಾಮಿ ಹೋಟೆಲ್‌ನಲ್ಲಿ ಬಟ್ಟೆಗಳನ್ನು ಇಡಲು ವಾರ್ಡ್‌ರೋಬ್, ಸೂಟ್‌ಕೇಸ್ ಇಡಲು ಪ್ರತ್ಯೇಕ ಟೇಬಲ್ ಇನ್ನಿತರೆ ಸೌಲಭ್ಯಗಳು ಇದ್ದವಂತೆ. ತಡವಾಗಿ ರೂಮ್‌ಗೆ ಚೆಕಿನ್‌ ಮಾಡಿದ ನುಸ್ರತ್ ದಣಿವಾಗಿದ್ದರಿಂದ ಬಟ್ಟೆಗಳನ್ನು ವಾರ್ಡ್‌ರೋಬ್‌ನಲ್ಲಿ ಇಡದೆ, ಅಲ್ಲಿಯೇ ಟೇಬಲ್‌ ಸೂಟ್‌ ಕೇಸ್ ಇಟ್ಟು ನಿದ್ದೆ ಹೋಗಿದ್ದಾರೆ.

  ಆದರೆ ಬೆಳಗ್ಗೆ ಎದ್ದು ನೋಡಿದಾಗ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಗಳೆಲ್ಲ ಚೆಲ್ಲಾ-ಪಿಲ್ಲಿ. ''ನನಗೆ ಚೆನ್ನಾಗಿ ನೆನಪಿದೆ ನಾನು ಸೂಟ್‌ ಕೇಸ್ ಅನ್ನು ಟೇಬಲ್ ಮೇಲಿಟ್ಟು ಮಲಗಿದ್ದೆ. ಆದರೆ ಬೆಳಗ್ಗೆ ಎದ್ದಾಗ ಸೂಟ್‌ಕೇಸ್ ಟೇಬಲ್‌ ಮೇಲಿತ್ತು ಆದರೆ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಟಿ ನುಸ್ರತ್.

  ''ಆ ರೂಮ್‌ಗೆ ನನ್ನನ್ನು ಬಿಟ್ಟು ಇನ್ಯಾರೂ ಬಂದಿರಲಿಕ್ಕಿಲ್ಲ. ನನಗೆ ರಾತ್ರಿ ವೇಳೆ ನಡೆವ ಅಭ್ಯಾಸವಿಲ್ಲ. ಅಥವಾ ನಾನೇ ಆ ಬಟ್ಟೆಗಳನ್ನು ಚೆಲ್ಲಾ-ಪಿಲ್ಲಿ ಮಾಡಿರುವ ಸಾಧ್ಯತೆಯೂ ಇಲ್ಲ. ಅದೂ ಅಲ್ಲದೆ ಆ ಸೂಟ್‌ಕೇಸ್ ಕೆಳಗೆ ಇಡಲ್ಪಟ್ಟಿತ್ತು. ಸೂಟ್‌ಕೇಸ್ ಮುಚ್ಚಿದ ಸ್ಥಿತಿಯಲ್ಲಿತ್ತು ಆದರೆ ಬಟ್ಟೆಗಳು ಚೆಲ್ಲಾಪಿಲ್ಲಿ ಆಗಿದ್ದವು. ಯಾರೋ ಬೇಕೆಂದೇ ಆ ಬಟ್ಟೆಗಳನ್ನು ಬಿಸಾಡಿದಂತೆ ಕಾಣಿಸುತ್ತಿತ್ತು'' ಎಂದು ಆ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ನುಸ್ರತ್.

  ನನ್ನ ಸಿಬ್ಬಂದಿ ನನ್ನ ರೂಂಗೆ ಬಂದು ಆ ದೃಶ್ಯ ನೋಡಿದ ಕೂಡಲೇ ನಾವು ಇಲ್ಲಿರುವುದು ಬೇಡ ಎಂದರು. ನನಗೂ ಆ ವೇಳೆಗಾಗಲೆ ಇಲ್ಲಿಂದ ಹೊರಗೆ ಹೋದರೆ ಸಾಕು ಎನಿಸಿತ್ತು. ಹಾಗಾಗಿ ಕೆಲವೇ ನಿಮಿಷಗಳಲ್ಲಿ ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ ಎಂದಿದ್ದಾರೆ ನುಸ್ರತ್. ಆ ಅನುಭವವನ್ನು ನಾನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ನುಸ್ರತ್.

  2006ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನುಸ್ರತ್ ಬರೂಚಾ ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ನುಸ್ರತ್ ನಟನೆಯ 'ಚೋರಿ' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂ ಜೊತೆಗೆ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಸಿನಿಮಾ ಪ್ರದರ್ಶಿತಗೊಂಡಿದೆ. ಈ ಸಿನಿಮಾ ಸಹ ದೆವ್ವದ ಕತೆಯನ್ನು ಹೊಂದಿದೆ. ಇದರ ಜೊತೆಗೆ ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು' ಸಿನಿಮಾದಲ್ಲಿ ನುಸ್ರತ್ ನಟಿಸಿದ್ದಾರೆ. ಆ ಸಿನಿಮಾ ಬಿಡುಗಡೆ ಅಗಬೇಕಿದೆ. 'ಹರ್ದಂಗ್' ಹಾಗೂ 'ಜನ್ ಹಿತ್‌ ಮೇ ಜಾರಿ' ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ.

  English summary
  Actress Nushrratt Bharuccha talks about a scary incident happened to her in a hotel in Delhi. Her new horror movie Chhorii released recently on Amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X