09 ವರ್ಷದಿಂದ ನಾನು ಬೇರೆ ಗಂಡಸರ ಜೊತೆ ಮಲಗಿಲ್ಲ,ಇದಕ್ಕೆ ಕಾರಣ ಇರ್ಫಾನ್ ಪಠಾಣ್...!
ವರ್ಷಧಾರೆ.. ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದ ಸಿನಿಮಾ. 2010ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವರು ಪಾಯಲ್ ಘೋಷ್.
ತೆಲುಗಿನಲ್ಲಿ ಒಂದೆರಡು ಹಿಂದಿಯಲ್ಲಿ ಒಂದ್ಮೂರು ಸಿನಿಮಾವನ್ನೂ ಮಾಡಿರುವ ಕೋಲ್ಕತ್ತಾ ಮೂಲದ ಈ ಪಾಯಲ್ ಘೋಷ್‌ಗೆ ಒಂದು ರೀತಿಯ ಪ್ರಚಾರದ ಹುಚ್ಚು. ಕುಂತರೂ ನಿಂತರೂ ಸದಾ ಸುದ್ದಿಯಲ್ಲಿರಬೇಕು ಎಂಬ ಹಂಬಲ. ಇದಕ್ಕೆ ಸಾಕ್ಷಿ ಅನ್ನುವಂತೆ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಬಾಲಿವುಡ್‌ನ ನಿರ್ದೇಶಕ ಅನುರಾಗ್ ಕಶ್ಯಪ್ ಅನು ದಿನ ಅನು ಕ್ಷಣ ಕೆಂಡ ಕಾರುತ್ತಿದ್ದ ಸಮಯದಲ್ಲಿ ಅದೆಲ್ಲಿಂದಾನೋ ಧುತ್ತೆಂದು ಬಂದ ಪಾಯಲ್ ಘೋಷ್ ನೇರಾನೇರವಾಗಿ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು.

ಆ ನಂತರ ರಿಚಾ ಚಡ್ಡಾ ಮತ್ತು ಅನುರಾಗ್ ಕಶ್ಯಪ್ ನಡುವೆ ಸಂಬಂಧ ಇದೆ ಅಂದರು. ಆದರೆ.. ಇವೆರಡು ಪ್ರಕರಣದಿಂದ ಪಾಯಲ್ ಹೆಸರು ಚಾಲ್ತಿಗೆ ಬಂದು ಕೆಲ ದಿನ ಇವರು ಸುದ್ದಿಯಾದರೆ ಹೊರತು ಬೇರೇನೂ ಆಗಲಿಲ್ಲ. ಬದಲಿಗೆ ಮುಂಬೈ ಹೈ ಕೋರ್ಟ್‌ನಲ್ಲಿ ರಿಚಾ ಚಡ್ಡಾ ಬೇಷರತ್ತ್ ಕ್ಷಮೆಯಾಚಿಸಬೇಕಾಯಿತು. ಅನುರಾಗ್ ಕಶ್ಯಪ್ ವಿರುದ್ಧ ಮಾಡಿದ್ದ ಆರೋಪ ಕೂಡ ಸಾಬೀತು ಆಗಲಿಲ್ಲ. ಆದರೆ.. ಈ ಆರೋಪದ ನಂತರ, ರಾಮದಾಸ್ ಅಟಾವ್ಲೆ ಅವರ ರಾಜಕೀಯದ ಪಕ್ಷವನ್ನು ಪಾಯಲ್ ಘೋಷ್ ಸೇರಿಕೊಂಡರು. ಈ ಕಡೆ ಅನುರಾಗ್ ಕಶ್ಯಪ್ ಕೇಂದ್ರ ಸರ್ಕಾರವನ್ನ ಠೀಕಿಸುವುದನ್ನೇ ನಿಲ್ಲಿಸಿದರು ಅನ್ನುವುದು ಬೇರೆ ವಿಚಾರ.
ಇಂಥ ಪಾಯಲ್ ಘೋಷ್ ಈಗ ನಾನು ಕಳೆದ 09 ವರ್ಷಗಳಿಂದ ಹುಡುಗರ ಜೊತೆ ನಾನು ಹಾಸಿಗೆ ಹಂಚಿಕೊಂಡಿಲ್ಲ ಅಂದಿದ್ದಾರೆ. ಭಾರತದ ಮಾಜಿ ಕ್ರಿಕೆಟ್ ಪ್ಲೇಯರ್ ಇರ್ಫಾನ್ ಪಠಾಣ್ ಅವರ ಜೊತೆ ಮಲಗಿ ಎದ್ದಿದ್ದೇ ಕೊನೆ ಬೇರೆ ಪುರುಷರ ಜೊತೆ ದೈಹಿಕ ಸಂಪರ್ಕವನ್ನ ಬೆಳೆಸಿಲ್ಲ ಎಂದಿದ್ದಾರೆ. ಈ ಮೂಲಕ ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ಕಾಣೆಯಾಗಿದ್ದ ಪಾಯಲ್ ಘೋಷ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ

ಹೌದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿರುವ ಪಾಯಲ್ ಘೋಷ್, ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ, ದೊಡ್ಡ ದೊಡ್ಡವರೆಲ್ಲ ನನ್ನ ಜೊತೆ ಮಲಗಲು ಸಾಯುತ್ತಾರೆ. ಆದರೆ ನಾನು ಮಾತ್ರ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ, ಯಾಕೆಂದರೆ ಸೆಕ್ಸ್ ಕುರಿತು ನನ್ನಲ್ಲಿ ಪೂಜ್ಯಭಾವ ಇದೆ ಎಂದಿದ್ದಾರೆ.
ಇದಿಷ್ಟೇ ಅಲ್ಲದೇ ಇರ್ಫಾನ್ ಪಠಾಣ್ ಮನೆಯಲ್ಲಿ ನಾನು ಅವನ ಕುಟುಂಬದ ಜೊತೆ 2016ರಲ್ಲಿ ಸಂಭ್ರಮಾಚಾರಣೆಯನ್ನು ಮಾಡಿ ಮನೆಗೆ ಮರಳಿದೆ. ಆಗ ಫೋನ್ ಮಾಡಿದ ಇರ್ಫಾನ್ ಪಠಾಣ್ ನನ್ನ ಮನೆಯವರು ನಿನ್ನನ್ನು ಒಪ್ಪಲು ತಯಾರಿಲ್ಲ ಎಂದು ಹೇಳಿ ನನ್ನಿಂದ ಅಂತರ ಕಾಪಾಡಿಕೊಳ್ಳಲು ಶುರು ಮಾಡಿದರು. ಕೆಲ ದಿನದ ನಂತರ ಅವರ ಸಹೋದರಿ ಕರೆ ಮಾಡಿ ನನ್ನ ಅಣ್ಣ ಮದುವೆಯಾಗುತ್ತಿದ್ದಾನೆ ಎಂದು ಹೇಳಿದರು ಎಂದಿದ್ದಾರೆ. ನನ್ನ ದುಖ ಯಾರಿಗೂ ಅರ್ಥವಾಗಲು ಸಾಧ್ಯ ಇಲ್ಲ ಎಂದಿದ್ದಾರೆ.

ಮುಂದುವರೆದು ಇರ್ಫಾನ್ ಪಠಾಣ್‌ಕ್ಕಿಂತ ನನ್ನ ಮುಂದೆ ಅತ್ಯುತ್ತಮವಾದ ಆಯ್ಕೆಗಳಿದ್ದವು ಆದರೆ ಆಯ್ಕೆಗಳಿದ್ದ ಮಾತ್ರಕ್ಕೆ ಪ್ರೀತಿಯಾಗುವುದಿಲ್ಲ. ಪ್ರೀತಿ ಪ್ರೀತಿಯೇ ಎಂದಿರುವ ಪಾಯಲ್ ಘೋಷ್, ಮುಸ್ಲಿಂ ದ್ವೇಷಿಯಾದ ನನ್ನ ತಂದೆಯನ್ನು ಕೂಡ ಇರ್ಫಾನ್ ಪಠಾಣ್ ಗೋಸ್ಕರ ನಾನು ಎದುರು ಹಾಕಿಕೊಂಡಿದ್ದೆ ಎಂದಿದ್ದಾರೆ.
ಸದ್ಯಕ್ಕೆ ಪಾಯಲ್ ಘೋಷ್ ಸಿಡಿಸಿದ ಈ ಮೂರು ಬಾಂಬ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಠೀಕೆ ವ್ಯಕ್ತವಾಗುತ್ತಿದೆ. ಕೆಲವರು ಹಳೆಯದನ್ನೆಲ್ಲ ಮರೆತು ಮುನ್ನಡೆಯುವ ಪ್ರಯತ್ನ ಮಾಡಿ ಎಂಬ ಸಲಹೆಯನ್ನು ನೀಡಿದರೆ, ಬೇರೆಯವರ ಸಂಸಾರವನ್ನೂ ಯಾಕೆ ಹಾಳು ಮಾಡುತ್ತಿದ್ದೀರಾ ಎಂದು ಕೆಲವರು ಕಿಡಿಯನ್ನೂ ಕಾರಿದ್ದಾರೆ. ಪ್ರಚಾರದ ಹುಚ್ಚು ಹೇಗೆ ಹಿಡಿಯುತ್ತೆ ಏನೆಲ್ಲ ಮಾಡಿಸುತ್ತೆ ಅನ್ನುವುದಕ್ಕೆ ನೀವು ಅತ್ಯುತ್ತಮ ಉದಾಹರಣೆ ಎಂಬ ಮಾತುಗಳನ್ನೂ ಕೂಡ ಅನೇಕರು ಹೇಳುತ್ತಿದ್ದಾರೆ.

ಅಂದ್ಹಾಗೇ ಇರ್ಫಾನ್ ಪಠಾಣ್ ಅವರನ್ನು ಪಾಯಲ್ ಘೋಷ್ ನೆನಪಿಸಿಕೊಳ್ಳುತ್ತಿರುವುದು ಇದು ಮೊದಲಲ್ಲ. ಕಳೆದ ವರ್ಷ ಕೂಡ ಇರ್ಫಾನ್ ಪಠಾಣ್ ಮತ್ತು ನಾನು ಪ್ರೇಮದ ಅಮಲನ್ನೇರಿಸಿಕೊಂಡು ತೂರಾಡಿದ್ವಿ ಎಂದು ಪಾಯಲ್ ಘೋಷ್ ಹೇಳಿದ್ದರು. ನಾವೂ ಇಬ್ಬರು ಇದ್ದ ಸಮಯದಲ್ಲಿ ಗೌತಮ್ ಗಂಭೀರ ಬೇಕು ಬೇಕೆಂದೇ ನನಗೆ ಮಿಸ್ ಕಾಲ್ ಕೊಡುತ್ತಿದ್ದರು ಎಂದು ಕೂಡ ಹೇಳಿದ್ದರು ಪಾಯಲ್ ಘೋಷ್. ಈಗ ಸುದ್ದಿಯಾಗುತ್ತಿರುವಂತೆ ಆಗ್ಲೂ ಕೂಡ ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಪಾಯಲ್ ಘೋಷ್ ಹೆಸರು ಪ್ರಸಿದ್ಧಿಯಾಗಿತ್ತು.


Click it and Unblock the Notifications











