For Quick Alerts
  ALLOW NOTIFICATIONS  
  For Daily Alerts

  ಮಾಜಿ ಬಿಗ್‌ಬಾಸ್ ಸ್ಪರ್ಧಿಯನ್ನು ಬಂಧಿಸಿದ ಅಹಮದಾಬಾದ್ ಪೊಲೀಸ್

  |

  ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಪಾಯಲ್ ರೊಹಟ್ಗಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

  ಪಾಯಲ್ ರೊಹಟ್ಗಿಯು ತಾನಿರುವ ಅಪಾರ್ಟ್‌ಮೆಂಟ್‌ನ ಚೇರ್‌ಮನ್‌ಗೆ ವಾಟ್ಸ್‌ಅಪ್‌ನಲ್ಲಿ ಬೆದರಿಕೆ ಹಾಕಿದ್ದು, ಇದರ ಸಂಬಂಧ ದೂರು ದಾಖಲಾಗಿದ್ದ ಕಾರಣ ನಟಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

  ವೈದ್ಯರೂ ಆಗಿರುವ ಪರಾಗ್ ಶಾ, ಪಾಯಲ್ ರೊಹಟ್ಗಿ ವಾಸಿಸುತ್ತಿರುವ ವಸತಿ ಸಮುಚ್ಛಯ ಗುಚ್ಛಕ್ಕೆ ಅಧ್ಯಕ್ಷರಾಗಿದ್ದಾರೆ. ಅಪಾರ್ಟ್‌ಮೆಂಟ್‌ನ ಮುಂದಿನ ಖಾಲಿ ಸ್ಥಳವನ್ನು ಮಕ್ಕಳಿಗೆ ಆಟದ ಏರಿಯಾ ಮಾಡುವ ಕುರಿತಾಗಿ ಅಪಾರ್ಟ್‌ಮೆಂಟ್‌ನ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಚರ್ಚೆ ನಡೆಯುವಾಗ ನಟಿ ಪಾಯಲ್ ಕೆಟ್ಟ ಭಾಷೆಯಲ್ಲಿ ವೈದ್ಯ ಹಾಗೂ ಚೇರಮನ್‌ ಆಗಿರುವ ಪರಾಗ್ ಶಾ ಅನ್ನು ಬೈದಿದ್ದಾರೆ.

  ಅಲ್ಲದೆ ''ನನ್ನೊಂದಿಗೆ ವಾಗ್ವಾದ ಮಾಡಿದರೆ ಕಾಲು ಮುರಿಸುತ್ತೇನೆ'' ಎಂದು ಬೆದರಿಕೆ ಸಹ ಹಾಕಿದ್ದಾರೆ ನಟಿ ಪಾಯಲ್ ರೊಹ್ಟಗಿ. ನಟಿಯು ಹಾಕಿರುವ ಸಂದೇಶಗಳ ಸ್ಕ್ರೀನ್‌ಶಾಟ್ ಸಮೇತ ಪರಾಗ್ ಶಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರೊಹಟ್ಗಿಯನ್ನು ಬಂಧಿಸಿದ್ದಾರೆ.

  ಪಾಯಲ್ ರೊಹಟ್ಗಿಗೆ ವಿವಾದಗಳು ಹೊಸದೇನೂ ಅಲ್ಲ ಈ ಹಿಂದೆ ಕೆಟ್ಟ, ನಿಂದನಾತ್ಮಕ, ವೈಷಮ್ಯ ಮೂಡಿಸುವ ಟ್ವೀಟ್‌ಗಳನ್ನು ಮಾಡಿದ್ದ ಪಾಯಲ್ ಇದೇ ಕಾರಣಕ್ಕೆ ತಮ್ಮ ಟ್ವಿಟ್ಟರ್ ಖಾತೆಯನ್ನು ಕಳೆದುಕೊಂಡರು.

  ನಂತರ ಜಯಾ ಬಚ್ಚನ್ ಅವರ ವಿರುದ್ಧ ಕಠುವಾದ ಭಾಷೆಗಳನ್ನು ಮಾತನಾಡಿದ್ದ ಪಾಯಲ್, ಜಯಾ ಬಚ್ಚನ್ ಸಂಸತ್‌ನಲ್ಲಿ ಮಾಡಿದ್ದ ಭಾಷಣವನ್ನು ನಿಂದನಾತ್ಮಕವಾಗಿ ಟೀಕಿಸಿದ್ದರು.

  lockdownನಲ್ಲಿ ಮದುವೆಯಾದ ಸೆಲೆಬ್ರಿಟಿಗಳು!! | Filmibeat Kannada

  2002ರಿಂದಲೂ ಬಾಲಿವುಡ್‌ನಲ್ಲಿರುವ ನಟಿ ಪಾಯಲ್ ರೊಹಟ್ಗಿ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು 'ಬಿ ಗ್ರೇಡ್' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಜೊತೆಗೆ ಬಿಗ್‌ಬಾಸ್‌ 2 ನಲ್ಲಿ ಸ್ಪರ್ಧಿಯಾಗಿದ್ದರು. ಜೊತೆಗೆ ಇನ್ನೂ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Actress Payal Rohatgi arrested by Ahmadabad police for threatening a Doctor through WhatsApp.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X