twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಪಾಯಲ್ ರೋಹ್ಟಗಿ ಟ್ವಿಟ್ಟರ್ ಖಾತೆ ಮತ್ತೆ ಅಮಾನತು

    |

    ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ನಟಿ ಪಾಯಲ್ ರೋಹ್ಟಗಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಆದರೆ ಯಾವ ಕಾರಣಕ್ಕಾಗಿ ಅವರ ಖಾತೆಯನ್ನು ಅಮಾನತು ಮಾಡಲಾಗಿದೆ ಎನ್ನುವುದು ತಿಳಿದುಬಂದಿಲ್ಲ. ನಿಮ್ಮ ಖಾತೆಯನ್ನು ಅಮಾನತು ಮಾಡಲಾಗಿದೆ ಎಂಬ ಟ್ವಿಟ್ಟರ್‌ನ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು, ಅದನ್ನು ಮತ್ತೆ ಪಡೆದುಕೊಳ್ಳಲು ಸಹಾಯ ಮಾಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

    'ನನ್ನ ಖಾತೆಯನ್ನು ಅಮಾನತು ಮಾಡಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ನನ್ನ ಅಧಿಕೃತ ಇ ಮೇಲ್ ವಿಳಾಸಕ್ಕೆ ಯಾವುದೇ ಮೇಲ್ ಕೂಡ ಬಂದಿಲ್ಲ. ನನ್ನ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಟ್ವಿಟ್ಟರ್ ಇಂಡಿಯಾ ನನ್ನ ಖಾತೆಯನ್ನು ಏಕೆ ಡಿಲೀಟ್ ಮಾಡಿದೆ ಎನ್ನುವುದನ್ನು ನೀವೇ ಕಂಡುಹಿಡಿಯಬೇಕಿದೆ. ನಾನು ಯಾವುದೇ ವ್ಯಕ್ತಿಯನ್ನು ನಿಂದಿಸಿಲ್ಲ ಅಥವಾ ಯಾರ ಕುರಿತೂ ಕೆಟ್ಟ ಪದ ಬಳಸಿಲ್ಲ..

    ಟ್ರೋಲ್ ಸಹಿಸಲಾಗದೆ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ ಸೋನಾಕ್ಷಿ ಸಿನ್ಹಾಟ್ರೋಲ್ ಸಹಿಸಲಾಗದೆ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ ಸೋನಾಕ್ಷಿ ಸಿನ್ಹಾ

    ನಾನು ಅದಲ್ಲಿ ವಾಸ್ತವ ಸಂಗತಿಗಳನ್ನು ಹಂಚಿಕೊಳ್ಳುವ ಪ್ರಯತ್ನ ನಡೆಸಿದ್ದು ನಿಜ. ಆದರೆ ನನ್ನ ಈ ಪ್ರಯತ್ನಗಳನ್ನು ಟ್ವಿಟ್ಟರ್‌ಅನ್ನು ನಿಯಂತ್ರಿಸುವ ಕೆಲವು ವಿಚಾರವಾದಿಗಳು ಮತ್ತು ತೀವ್ರವಾದಿ ಜನರು ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದರು ಎಂದು ಆರೋಪಿಸಿದ್ದಾರೆ.

     Actress Payal Rohtagis Twitter Account Suspended

    ನನ್ನ ಖಾತೆಯನ್ನು ಮತ್ತೆ ಮರಳಿ ನೀಡುವಂತೆ ಟ್ವಿಟ್ಟರ್‌ಗೆ ಮನವಿ ಮಾಡಿ ಎಂದು ಜನರಲ್ಲಿ ಕೋರುತ್ತೇನೆ. ಇಲ್ಲದಿದ್ದರೆ ನನಗೆ ಪ್ರತಿಯೊಬ್ಬರ ಬಳಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಇನ್‌ಸ್ಟಾಗ್ರಾಂನ ವಿಡಿಯೋದಲ್ಲಿ ಪಾಯಲ್ ಹೇಳಿದ್ದಾರೆ.

    ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್

    ಒಂದು ತಿಂಗಳ ಅವಧಿಯಲ್ಲಿ ಪಾಯಲ್ ಅವರ ಟ್ವಿಟ್ಟರ್ ಖಾತೆ ಅಮಾನತಾಗುತ್ತಿರುವುದು ಇದು ಎರಡನೆಯ ಬಾರಿ. ಜೂನ್‌ನಲ್ಲಿ ನಿಂದನಾತ್ಮಕ ಟ್ವೀಟ್ ಕಾರಣದಿಂದ ಅವರ ಖಾತೆಯನ್ನು ಒಂದು ವಾರ ಅಮಾನತು ಮಾಡಲಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ನಿರಂತರವಾಗಿ ಟ್ವಿಟ್ಟರ್‌ನಲ್ಲಿ ವಿಡಿಯೋಗಳನ್ನು ಹಾಕುತ್ತಿದ್ದ ಪಾಯಲ್, ಬಾಲಿವುಡ್‌ನ ಸ್ಟಾರ್‌ಗಳವಿರುದ್ಧ ಸ್ವಜನಪಕ್ಷಪಾತದ ವಾಗ್ದಾಳಿ ನಡೆಸುತ್ತಿದ್ದರು.

    English summary
    Actress Payal Rohtagi's twitter account is suspended. She said reason unknown to her.
    Wednesday, July 8, 2020, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X