ನಮ್ಮದು ಮದುವೆಯೇ ಅಲ್ಲವೆಂದ ನಟಿಯಿಂದ ಪತಿ ವಿರುದ್ಧ ಸರಣಿ ಆರೋಪ
ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮದುವೆ ಬೀದಿ ರಂಪಾಟವಾಗಿ ಬದಲಾಗಿಬಿಟ್ಟಿದೆ. ನಿಖಿಲ್ ಜೈನ್ ಎಂಬುವರನ್ನು ಟರ್ಕಿಯಲ್ಲಿ ಮದುವೆಯಾಗಿದ್ದ ಈ ನಟಿ ಕಮ್ ಸಂಸದೆ ಆ ಮದುವೆ ಕಾನೂನುಬದ್ಧವಲ್ಲ ಎಂದಿದ್ದಾರೆ. ಜೊತೆಗೆ ನಿಖಿಲ್ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡಿದ್ದಾರೆ.
ಬೆಂಗಾಳಿ ಸಿನಿಮಾಗಳ ನಟಿ ನುಸ್ರತ್ ಜಹಾನ್ ಹಾಗೂ ಉದ್ಯಮಿ ನಿಖಿಲ್ ಜೈನ್ 2018 ರಲ್ಲಿ ಟರ್ಕಿ ದೇಶದಲ್ಲಿ ವಿವಾಹವಾಗಿದ್ದರು. ಆದರೆ ಅದನ್ನು ಭಾರತದಲ್ಲಿ ನೊಂದಾವಣೆ ಮಾಡಿಸಿರಲಿಲ್ಲ. ಆದರೆ ಇಬ್ಬರೂ ಕೆಲ ವರ್ಷ ಒಟ್ಟಿಗೆ ಇದ್ದರು. ಆದರೆ ಕೆಲವು ತಿಂಗಳಿನಿಂದ ಇಬ್ಬರೂ ಬೇರೆಯಾಗಿದ್ದು, ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಶ್ರೀಮಂತನಾದ ನನ್ನನ್ನು ಹಣಕ್ಕಾಗಿ ನುಸ್ರತ್ ಜಹಾನ್ ಬಳಸಿಕೊಂಡಿದ್ದಾರೆ ಎಂದು ನಿಖಿಲ್ ಜೈನ್ ಆರೋಪ ಮಾಡಿದ್ದಾರೆ. ಇದನ್ನು ಅಲ್ಲಗಳೆದಿರುವ ನುಸ್ರತ್, ನನ್ನ ಒಡೆಯವನ್ನು ಬಲವಂತದಿಂದ ನಿಖಿಲ್ ತಮ್ಮ ಬಳಿ ಇರಿಸಿಕೊಂಡಿದ್ದಾನೆ. ನನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡಿದ್ದಾನೆ ಎಂದಿದ್ದಾರೆ.

ನಮ್ಮ ಮದುವೆ ಕಾನೂನುಬದ್ಧವಲ್ಲ: ನುಸ್ರತ್
'ನಾವಿಬ್ಬರೂ ಟರ್ಕಿ ದೇಶದಲ್ಲಿ ಆ ದೇಶದ ಕಾನೂನಿನನ್ವಯ ವಿವಾಹವಾಗಿದ್ದೇವೆ. ಆದರೆ ಭಾರತದಲ್ಲಿ ನಮ್ಮ ಮದುವೆಯನ್ನು ನೊಂದಾವಣಿ ಮಾಡಿಸಿಲ್ಲ. ಹಾಗಾಗಿ ನಮ್ಮ ವಿವಾಹ ಊರ್ಜಿತವಲ್ಲ. ಹಾಗಾಗಿ ವಿಚ್ಛೇಧನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ ನುಸ್ರತ್ ಜಹಾನ್.

ಎಲ್ಲ ಖರ್ಚನ್ನು ನಾನೇ ಭರಿಸಿದ್ದೇನೆ: ನುಸ್ರತ್
ಬಹುದೊಡ್ಡ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂಸದೆಯೂ ಆಗಿರುವ ನುಸ್ರತ್, 'ನನ್ನ ಸಹೋದರಿಯ ಶಿಕ್ಷಣ, ನನ್ನ ಕುಟುಂಬದವರ ಖರ್ಚು ಎಲ್ಲವನ್ನೂ ನಾನೇ ಭರಿಸಿದ್ದೀನಿ. ಆತ (ನಿಖಿಲ್) ಹೇಳಿರುವಂತೆ ನಾನು ಅವರ ಕ್ರೆಡಿಟ್ ಕಾರ್ಡನ್ನು ಬಳಸಿಲ್ಲ. ಇದಕ್ಕೆ ಸಾಕ್ಷ್ಯಗಳು ಸಹ ಇವೆ' ಎಂದಿದ್ದಾರೆ.

ನಮ್ಮ ಹಣವನ್ನು ಬಳಸಿಕೊಂಡಿದ್ದಾನೆ: ನುಸ್ರತ್
ನನ್ನ ಮತ್ತು ನನ್ನ ಕುಟುಂಬದವರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಆತನ ಬೇಡಿಕೆಯಂತೆ ನಾವು ಕೊಟ್ಟಿದ್ದವು. ಆಗೆಲ್ಲ ನಮ್ಮ ಹಣವನ್ನು ಆತ ತನ್ನ ಅಗತ್ಯಕ್ಕೆ ಬಳಸಿಕೊಂಡಿದ್ದಾನೆ. ನಾವಿಬ್ಬರೂ ದೂರಾದ ಬಳಿಕವೂ ನನ್ನ ಖಾತೆಯಿಂದ ಅಕ್ರಮವಾಗಿ ಆತ ಹಣ ಪಡೆದುಕೊಂಡಿದ್ದಾನೆ. ಈ ಬಗ್ಗೆ ನಾನು ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಲಿದ್ದೇನೆ' ಎಂದಿದ್ದಾರೆ.
Recommended Video

ನನ್ನ ಆಭರಣಗಳು ಅವನ ಬಳಿಯೇ ಇವೆ: ನುಸ್ರತ್
ನನ್ನ ಬಟ್ಟೆಗಳು, ಒಡವೆಗಳು ಇನ್ನೂ ಹಲವು ವಸ್ತುಗಳು ಆತನ ಬಳಿಯೇ ಇವೆ. ನನ್ನ ಹಿರಿಯರ ಬೆಲೆ ಬಾಳುವ ಆಭರಣ. ನನ್ನ ಕುಟುಂಬದವರು, ಸ್ನೇಹಿತರು ನನಗೆ ಉಡುಗೊರೆಯಾಗಿ ನೀಡಿದ್ದ ಆಭರಣಗಳು ಸಹ ಆತನ ಬಳಿಯೇ ಇವೆ ಅಕ್ರಮವಾಗಿ ಅವನ್ನೆಲ್ಲ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿರುವ ನುಸ್ರತ್, 'ನಾನು ಕಷ್ಟಪಟ್ಟು, ಸ್ವಂತ ಶ್ರಮದಿಂದ ವೈಯಕ್ತಿಕ ವರ್ಚಸ್ಸು ಗಳಿಸಿದ್ದೇನೆ. ಆದರೆ ಸುಳ್ಳು ಆರೋಪಗಳ ಮೂಲಕ ಅದನ್ನು ಹಾಳು ಮಾಡಲು ಯತ್ನಿಸುತ್ತಿದ್ದಾನೆ' ಎಂದಿದ್ದಾರೆ.


Click it and Unblock the Notifications











