ಹಾಟ್ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ: ಹುಡುಗ ಇವರೇ ನೋಡಿ

ಹಾಟ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದ ಮಾದಕ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಗ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ಈಗ ಎಂಗೇಜ್ ಆಗಿರುವ ಫೋಟೋ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪೂನಂಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Recommended Video

ಕೊಟ್ಟ ಮಾತನ್ನು ಉಳಿಸಿಕೊಂಡ ಸೋನು ಸೂದ್. | Sonu Sood Gifts Tractor | Filmibeat Kannada

ಅಂದ್ಹಾಗೆ ಪೂನಂ ದೀರ್ಘ ಕಾಲದ ಗೆಳೆಯ ಸ್ಯಾಮ್ ಬಾಂಬೆ ಜೊತೆ ಎಂಗೇಜ್ ಆಗಿದ್ದಾರೆ. ಕೊನೆಗೊ ಎಂಗೇಜ್ ಆದೆವು ಎಂದು ಗೆಳೆಯ ಸ್ಯಾಮ್ ಬಾಂಬೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಬೆರಳಿಗೆ ಉಂಗುರ ಹಾಕಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಭಾವಿ ಪತಿಯ ಪೋಸ್ಟ್ ಗೆ ಪೂನಂ ಪಾಂಡೆ 'ಬೆಸ್ಟ್ ಫೀಲಿಂಗ್' ಎಂದು ಬರೆದುಕೊಂಡಿದ್ದಾರೆ.

ಪೂನಂ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುವ ಜೊತೆಗೆ, 'ದೊಡ್ಡ ನಿರ್ಧಾರಕ್ಕೆ, ದೊಡ್ಡ ಅಭಿನಂದನೆಗಳು' ಎನ್ನುತ್ತಿದ್ದಾರೆ. ಇನ್ನೂ ಕೆಲವರು 'ಪೂನಂನ ಪಡೆದ ಸ್ಯಾಮ್ ಬಾಂಬೆ ತುಂಬಾ ಅದೃಷ್ಟವಂತ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Actress Poonam Pandey Gets Engaged With Her Boyfriend Sam Bombay

ಇತ್ತೀಚಿಗೆ ಪೂನಂ ಪಾಂಡೆ ಮತ್ತು ಗೆಳೆಯ ಸ್ಯಾಮ್ ಬಾಂಬೆ ಲಾಕ್ ಡೌನ್ ಉಲ್ಲಂಘಿಸಿ ಪೊಲೀಸರ ಬಳಿ ತಗುಲು ಹಾಕಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ಇದ್ದರೂ ಪೂನಂ ಮತ್ತು ಸ್ಯಾಮ್ ಇಬ್ಬರು ಐಶಾರಾಮಿ ಕಾರಿನಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಮುಂಬೈ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಆದರೆ ಸುದ್ದಿಯನ್ನು ನಟಿ ಪೂನಂ ತಳ್ಳಿ ಹಾಕಿದ್ದರು. ಅಲ್ಲದೆ ದಯವಿಟ್ಟು ಇಂತಹ ಸುದ್ದಿಯನ್ನು ಹಬ್ಬಿಸ ಬೇಡಿ ಎಂದು ಕೇಳಿಕೊಂಡಿದ್ದರು.

ಪೂನಂ ಪಾಂಡೆ ಬಾಲಿವುಡ್ ನ ನಶಾ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಶಿಕ್ಷಕಿಯಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಇನ್ನೂ ದಿ ಜರ್ನಿ ಆಫ್ ಕರ್ಮ ಸಿನಿಮಾದಲ್ಲಿ ಕೊನೆಯದಾಗಿ ಮಿಂಚಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಪೂನಂ ಹಾಟ್ ವಿಡಿಯೋಗಳ ಮೂಲಕವೆ ಖ್ಯಾತಿಗಳಿಸಿದ್ದಾರೆ.

More from Filmibeat

English summary
Hot Actress Poonam pandey engaged with her boyfriend Sam bombay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X