ಬಲವಂತವಾಗಿ ಗರ್ಭಿಣಿ ಮಾಡಬೇಡಿ ಎಂದ ನಟಿ ಪೂನಂ ಪಾಂಡೆ!
ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸುದ್ದಿ ಮಾಡುತ್ತಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮದುವೆಯಾಗಿದ್ದ ನಟಿ ಪೂನಂ ಈಗ ಗರ್ಭಿಣಿ ಎಂಬ ಸುದ್ದಿಗಳು ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೂನಂ, ''ಬಲವಂತದಿಂದ ನನ್ನನ್ನು ಗರ್ಭಿಣಿ ಮಾಡಬೇಡಿ'' ಎಂದು ದ್ವಂದ್ವಾರ್ಥ ಹೊಮ್ಮುವ ರೀತಿಯಲ್ಲಿ ತಾವು ಗರ್ಭಿಣಿ ಆಲ್ಲವೆಂದು, ಸುದ್ದಿಗಳು ಸುಳ್ಳೆಂದು ಹೇಳಿದ್ದಾರೆ.
''ಗರ್ಭಿಣಿ ಆಗುವುದು ಮಹಿಳೆಯರಿಗೆ ಶುಭ ಸುದ್ದಿ ಆದರೆ ನನಗೆ ಅದು ಕೆಟ್ಟ ಸುದ್ದಿ. ನಾನು ಗರ್ಭಿಣಿ ಅಲ್ಲ. ನನ್ನ ಜೀವನವೊಂದು ತೆರೆದ ಪುಸ್ತಕ. ಯಾವುದೇ ಸುದ್ದಿ ಹರಡಿಸುವ ಮುನ್ನ ನನ್ನನ್ನೇ ಒಮ್ಮೆ ಕೇಳಿಬಿಡಿ ನಾನೇ ಉತ್ತರ ನೀಡುತ್ತೇನೆ'' ಎಂದಿದ್ದಾರೆ ಪೂನಂ ಪಾಂಡೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸ್ಯಾಮ್ ಬಾಂಬೆ ಜೊತೆಗೆ ಪೂನಂ ಪಾಂಡೆ ವಿವಾಹವಾದರು. ಆದರೆ ಒಂದೇ ದಿನಕ್ಕೆ ಪತಿಯ ಜೊತೆ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪತಿಯ ವಿರುದ್ಧ ಹಲ್ಲೆ, ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ನಂತರ ಎಲ್ಲವೂ ತಿಳಿಯಾಗಿ ಮತ್ತೆ ಪತಿಯ ಜೊತೆಗೆ ಇರಲು ಒಪ್ಪಿಕೊಂಡರು.
ಕಳೆದ ವರ್ಷ ಗೋವಾ ಬೀಚ್‌ನಲ್ಲಿ ಪೂನಂ ಪಾಂಡೆ ಮಾಡಿದ್ದ ಅರೆ ಬೆತ್ತಲೆ ವಿಡಿಯೋ ಸಹ ಭಾರಿ ಸುದ್ದಿಯಾಗಿತ್ತು. ಗೋವಾ ಅಸೆಂಬ್ಲಿಯಲ್ಲಿ ಸಹ ಈ ಬಗ್ಗೆ ಚರ್ಚೆಯಾಗಿ ಕೊನೆಗೆ ಪೂನಂ ಅನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
Recommended Video
ಕೆಲವು ದಿನಗಳ ಹಿಂದಷ್ಟೆ ಭಾರತ, ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಪೂನಂ ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದರು. ಈ ಹಿಂದೆ ವಿಶ್ವಕಪ್ ಸಮಯದಲ್ಲಿಯೂ ಪೂನಂ ಹೀಗೆಯೇ ಹೇಳಿದ್ದರು.


Click it and Unblock the Notifications











